-->
NI Act: ಭದ್ರತೆಗಾಗಿ ನೀಡಿದ ಚೆಕ್, ಆರೋಪಿ ವಿರುದ್ಧ ತೀರ್ಪು ನೀಡಿದ ಸುಪ್ರೀಂ ಕೋರ್ಟ್ (14-02-2020)

NI Act: ಭದ್ರತೆಗಾಗಿ ನೀಡಿದ ಚೆಕ್, ಆರೋಪಿ ವಿರುದ್ಧ ತೀರ್ಪು ನೀಡಿದ ಸುಪ್ರೀಂ ಕೋರ್ಟ್ (14-02-2020)
NI Act: ಭದ್ರತೆಗಾಗಿ ನೀಡಿದ ಚೆಕ್, ಆರೋಪಿ ವಿರುದ್ಧ ತೀರ್ಪು ನೀಡಿದ ಸುಪ್ರೀಂ ಕೋರ್ಟ್ (14-02-2020)


NI Act: Aps Forex Services Vs Shakti Internation

Supreme Court judgement (14-02-2020) 


ಬ್ಯಾಂಕ್‌ ಚೆಕ್‌ನ್ನು ಭದ್ರತೆಗಾಗಿ ನೀಡಲಾಗಿದೆ ಎಂಬ ಆರೋಪಿಯ ವಾದವನ್ನು ನಂಬಲಾಗದ ರಕ್ಷಣೆ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಕರಣವಿದು...ಹೆಚ್ಚಿನ ಸಾಕ್ಷ್ಯಗಳ ಅನುಪಸ್ಥಿತಿಯಲ್ಲಿ ಆರೋಪಿ ತಾನು ಚೆಕ್ ನೀಡಿದ್ದು ಭದ್ರತೆಗಾಗಿ ಎಂಬ ಪೂರ್ವಭಾವನೆಯನ್ನು ಮೂಡಿಸುವ ವಾದವನ್ನು ಮಂಡಿಸಿದರೆ, ಅದನ್ನು ನಂಬಲಾಗದ ರಕ್ಷಣೆ (Defence not believable) ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

14-02-2020ರಂದು Aps Forex Services Vs Shakti Internation ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದಾಗಿದೆ.ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್. ಶಾ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದ್ದು, ಒಮ್ಮೆ ಚೆಕ್ ವಿತರಣೆಯನ್ನು ಒಪ್ಪಿಕೊಂಡ ನಂತರ ದೂರುದಾರರ ಪರವಾಗಿ ಒಂದು ಭಾವನೆ ಯಾ ಊಹೆ ಇರುತ್ತದೆ ಎಂಬುದಾಗಿ ತೀರ್ಪಿನಲ್ಲಿ ಹೇಳಿದೆ.


ಪ್ರಕರಣದ ವಿವರ:

ಈ ಪ್ರಕರಣದಲ್ಲಿ ದೂರುದಾರರು ಪಾಲುದಾರ ಸಂಸ್ಥೆಯ ಚೆಕ್‌ನ್ನು ಪಾವತಿಗಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ. ಅದು ಪಾವತಿ ತಡೆ (Stop Payment) ಎಂಬ ಷರಾದೊಂದಿಗೆ ಹಿಂತಿರುಗುತ್ತದೆ. ಸೂಕ್ತ ಕಾನೂನು ಪ್ರಕ್ರಿಯೆ ಬಳಿಕ ದೂರುದಾರರು ತಮ್ಮ ವ್ಯಾಪ್ತಿಯ ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸುತ್ತಾರೆ. ಆದರೆ, ಈ ಪ್ರಕರಣ ಕಾನೂನುಬದ್ಧ ಹೊಣೆಗಾರಿಗೆ (legal liablitiy) ಇಲ್ಲ ಎಂಬ ಕಾರಣಕ್ಕೆ ಮಾನ್ಯ ವಿಚಾರಣಾ ನ್ಯಾಯಾಲಯವು ಆರೋಪಿ ಪರ ತೀರ್ಪು ನೀಡುತ್ತದೆ.


ಈ ಚೆಕ್ ಭದ್ರತೆಗಾಗಿ ನೀಡಲಾಗಿದೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಚೆಕ್ ಎರಡನೇ ಬಾರಿ ಪಾವತಿ ಕೋರಿ ಹಾಕಲಾಗಿದ್ದು, ಪಾವತಿ ತಡೆ ಷರಾ ಮೂಲಕ ಚೆಕ್ ಅಮಾನ್ಯಗೊಂಡಿರುತ್ತದೆ. ಹಾಗಾಗಿ, ಇಲ್ಲಿ ಕಾನೂನು ಬದ್ಧ ಹೊಣೆಗಾರಿಕೆಯ ಕೊರತೆ ಕಂಡುಬರುವುದಿಲ್ಲ. ಅಲ್ಲದೆ, ಆರೋಪಿ ತಾನು ಚೆಕ್ ನೀಡಿರುವುದನ್ನು ಒಪ್ಪಿಕೊಂಡಿದ್ದು, ಚೆಕ್‌ನಲ್ಲಿ ಇರುವ ಸಹಿಯ ಬಗ್ಗೆ ತಗಾದೆ ತೆಗೆದಿಲ್ಲ.


ಕೆ.ಎನ್. ಬೀನಾ Vs ಮುನಿಯಪ್ಪನ್ (2011 8 SCC 458) ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ, ಯಾವುದೇ ಚೆಕ್‌ ನೀಡಲಾಗಿದ್ದರೆ ಅದನ್ನು ಹಣದ ನೀಡಿಕೆಗಾಗಿ ಇರುತ್ತದೆ ಎಂಬ ಪೂರ್ವಭಾವನೆ ಇರುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿ, ಆರೋಪಿಗೆ ಶಿಕ್ಷೆ ಹಾಗೂ ದಂಡ ಶಿಕ್ಷೆ ಘೋಷಿಸಿ ದೂರುದಾರರ ಪರ ತೀರ್ಪು ನೀಡಿದೆ. 


ಇನ್ನೂ ಹೆಚ್ಚಿನ ವಿವರಕ್ಕೆ ಇಲ್ಲಿದೆ ಲಿಂಕ್:

Aps Forex Services Vs Shakti Internation: Supreme Court judgement (14-02-2020)

Ads on article

Advertise in articles 1

advertising articles 2

Advertise under the article