-->
Beware of Defamation case - ಮಾನಹಾನಿ ಸಂಬಂಧಿಸಿದಂತೆ ಖಾಸಗಿ ದೂರು: ವಕೀಲರಿಗೆ ಮಹತ್ವದ ಮಾಹಿತಿ (Aricle-Marigowda Badaradinni)

Beware of Defamation case - ಮಾನಹಾನಿ ಸಂಬಂಧಿಸಿದಂತೆ ಖಾಸಗಿ ದೂರು: ವಕೀಲರಿಗೆ ಮಹತ್ವದ ಮಾಹಿತಿ (Aricle-Marigowda Badaradinni)

ವ್ಯಕ್ತಿ ಚಾರಿತ್ರಿಕ ವಧೆ , ಮಾನನಷ್ಟ ಮಾಡುವವರು ಇದರ ಬಗ್ಗೆ ಇರಲಿ ಎಚ್ಚರ


ಆಂಗ್ಲಭಾಷೆಯಲ್ಲಿ Defamation ಅಂದರೆ ಮಾನನಷ್ಟ, ಹೆಸರು ಕೆಡಿಸುವುದು, ಅಪಮಾನ ಮಾಡುವುದು, ಸಾರ್ವಜನಿಕವಾಗಿ ಮಾನ ಹರಾಜು ಮಾಡುವುದು. ಇದು ಕಾನೂನು ರೀತ್ಯಾ ಅಪರಾಧ.



ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಘನತೆ ,ಗೌರವ, ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಮೂಲಭೂತವಾಗಿ ನಮ್ಮ ಸಂವಿಧಾನವು ಕಲ್ಪಿಸುತ್ತದೆ. ನಮ್ಮ ಪ್ರತಿಯೊಂದು ಹಕ್ಕಿಗೂ ಒಂದು ಇತಿ ಮಿತಿ ಅದರದೆ ಆದ ಪರಿಮಿತಿ ಇದ್ದೇ ಇದೆ.



ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ವಿಧಿ 14,19(1) ಮತ್ತು 21ರಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ಮೌಖಿಕ/ ಲಿಖಿತ/ ಯಾವುದೇ ಮಾಧ್ಯಮದ ಮೂಲಕ) ಎಂಬುದು ಸ್ವೇಚ್ಛಾನುಸಾರ ಬಳಸುವಂಥದ್ದಲ್ಲ. ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಇನ್ನೊಬ್ಬ ವ್ಯಕ್ತಿಯ ಹಕ್ಕು ಮತ್ತು ಘನತೆಗೆ ಚ್ಯುತಿ ಉಂಟು ಮಾಡುವಂತಿರಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ.




Article by Marigowda Badaradinni, Advocate and Journalis, Kustagi


ಹೀಗಿರುವಲ್ಲಿ ಮಾನಹಾನಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ದಂಡನಾರ್ಹ ಕಲಂಗಳಿಗೆ ಸಾಂವಿಧಾನಿಕ ಸಿಂಧುತ್ವ ಇದ್ದೇ ಇದೆ ಎಂದು ಸುಪ್ರೀಂಕೋರ್ಟ್ ಹಲವಾರು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ. ಜೊತೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಸ್ವಂತ ಹಕ್ಕಲ್ಲ ಎಂದೂ ಹೇಳಿದೆ.



ಮಾನಹಾನಿಗೆ ಸಂಬಂಧಿಸಿದಂತೆ ಯಾವುದೇ ಖಾಸಗಿ ದೂರುಗಳು ಬಂದಾಗ ಸಮನ್ಸ್ ಹೊರಡಿಸುವ ಮೊದಲು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಮತ್ತು ಮೊದಲ ವರ್ತಮಾನ ವರದಿಯನ್ನು (ಎಪ್ಐಆರ್) ಸೂಕ್ಷ್ಮವಾಗಿ ಕೂಲಂಕುಶವಾಗಿ ಪರಿಶೀಲಿಸಿ ಮುಂದುವರಿಯಲು ದೇಶದ ಎಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದೆ.



ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಯಾವುದೇ ರೀತಿಯಲ್ಲಿಯೂ ಅವಹೇಳನ ,ಅಪಮಾನ ಮಾಡಿ ಮಾನಹರಣ ಮಾಡುವಂತ ಹಕ್ಕು ಇನ್ನೊಬ್ಬ ವ್ಯಕ್ತಿಗೆ ಇರುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು.


ಮಾನಹಾನಿ ಆದ ಬಗ್ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 499 ಮತ್ತು 500 ಹಾಗೂ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸಾಂವಿಧಾನಿಕ ಸಿಂಧುತ್ವ ಹೊಂದಿದ್ದು ಯಾವುದೇ ಮಾನಹಾನಿ ಆಪಾದನೆ ಸಾಕ್ಷಿ ಸಹಿತ ಸಾಬೀತಾದರೆ ಅಪರಾಧಿಯು ಕಲಂ 500ರ ಪ್ರಕಾರ ಎರಡು ವರ್ಷಗಳ ಶಿಕ್ಷೆ ಅಥವಾ ದಂಡ , ಹಾಗೂ ದಂಡ ಸಹಿತ ಶಿಕ್ಷೆ ಹೀಗೆ ಒಟ್ಟಿಗೆ ಅನುಭವಿಸಬಹುದಾದ ಸಂದರ್ಭಗಳುಂಟು. ಅದು ಆ ಪ್ರಕರಣ ಸಂಗತಿಗಳನ್ನು ಅವಲಂಬಿಸಿರುತ್ತದೆ


ಈ ಪ್ರಕರಣದ ಸ್ವರೂಪ ದಿವಾಣಿ ಪ್ರಕರಣ (civil case) ಅಥವಾ ಅಪರಾಧಿಕ ಪ್ರಕರಣ (criminal case) ದಾಖಲಿಸಬಹುದು.



ದಿವಾಣಿ ಪ್ರಕರಣದಲ್ಲಿ ಮಾನಹಾನಿಗೆ ಒಳಗಾದ ವ್ಯಕ್ತಿ ಪರಿಹಾರ ಪಡೆದುಕೊಳ್ಳಬಹುದು ಅಪರಾಧಿಕ ಪ್ರಕರಣದಲ್ಲಿ ಮಾನಹಾನಿ ಮಾಡಿದ ವ್ಯಕ್ತಿಯನ್ನು ಕಾನೂನಿನಡಿಯಲ್ಲಿ ಶಿಕ್ಷೆಯಿಂದ ದಂಡಿಸಬಹುದು.



ನಮ್ಮ ದೇಶದ ಕಾನೂನಿಗೆ ನಾವು ತಲೆಬಾಗಲೇ ಬೇಕು. ಇದನ್ನು ಅರಿತು ಮತ್ತಿತ್ತರನ್ನು ನಾವು ಗೌರವಿಸುತ್ತಾ ಸಹಬಾಳ್ವೆ ನಡೆಸಬೇಕು ಎಂಬುದು ಇದರ ಸದುದ್ದೇಶ.



ಲೇಖಕರು: ಮರಿಗೌಡ ಬಾದರದಿನ್ನಿ ,ವಕೀಲರು ,ಪತ್ರಕರ್ತರು ,ಕುಷ್ಟಗಿ.

9902712955

Ads on article

Advertise in articles 1

advertising articles 2

Advertise under the article