-->
A detailed information about Court fee in Karnataka | ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ "ನ್ಯಾಯಾಲಯ ಶುಲ್ಕ" ಪಾವತಿ ಕುರಿತು ಮಾಹಿತಿ

A detailed information about Court fee in Karnataka | ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ "ನ್ಯಾಯಾಲಯ ಶುಲ್ಕ" ಪಾವತಿ ಕುರಿತು ಮಾಹಿತಿ

ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ "ನ್ಯಾಯಾಲಯ ಶುಲ್ಕ" ಪಾವತಿ ಕುರಿತು ಮಾಹಿತಿ




ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲ್ಯಮಾಪನ ವಿಷಯವು ಆಯಾಯ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಭಾರತದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ಕಾಯಿದೆ ಜಾರಿಯಲ್ಲಿದ್ದು ವಿಭಿನ್ನ ಪ್ರಕರಣಗಳಿಗೆ ದೇಶಾದ್ಯಂತ ನ್ಯಾಯಾಲಯ ಶುಲ್ಕ ಏಕ ರೂಪವಾಗಿಲ್ಲ.



ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯ ಶುಲ್ಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ/ ಸಂದೇಶಗಳು ಹರಿದಾಡುತ್ತಿವೆ. ಸದರಿ ಮಾಹಿತಿಯನ್ನು ಪರಾಂಬರಿಸಿದಾಗ ಅದು ಕರ್ನಾಟಕ ರಾಜ್ಯದ ನ್ಯಾಯಾಲಯ ಶುಲ್ಕಕ್ಕೆ ಸಂಬಂಧಪಟ್ಟದ್ದಲ್ಲ ಬದಲಿಗೆ ಬೇರೆ ಯಾವುದೋ ರಾಜ್ಯದ ನ್ಯಾಯಾಲಯ ಶುಲ್ಕಕ್ಕೆ ಸಂಬಂಧಪಟ್ಟ ಮಾಹಿತಿಯಾಗಿದೆ ಎಂಬುದು ತಿಳಿದುಬರುತ್ತದೆ.




ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ಮಾಪನ ಕಾಯಿದೆ 1958 ರ ಪ್ರಕಾರ ವಿವಿಧ ಪ್ರಕರಣಗಳಿಗೆ ಪಾವತಿಸಬೇಕಾದ ನ್ಯಾಯಾಲಯ ಶುಲ್ಕ ಗಳು ಈ ಕೆಳಗಿನಂತಿವೆ.




ಹಣಕಾಸಿನ ದಾವೆಗಳಿಗೆ ಸಂಬಂಧಪಟ್ಟಂತೆ ವಿವಿಧ ಹಂತದ ಮೊತ್ತಗಳಿಗೆ ವಿವಿಧ ಪ್ರಮಾಣದಲ್ಲಿ ನ್ಯಾಯಾಲಯ ಶುಲ್ಕ ಕಾಯಿದೆಯಡಿ ನಿಗದಿಪಡಿಸಲಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ₹ 15000/- ರೂಪಾಯಿ ವರೆಗಿನ ದಾವೆಗೆ ₹ 375/- ವಿವಿಧ ಹ೦ತದ (slab) ಮೊತ್ತಗಳಿಗೆ ಸದರಿ ಕಾಯ್ದೆಯಲ್ಲಿ ಶುಲ್ಕ ನಿಗದಿಪಡಿಸಲಾಗಿದೆ. ಗರಿಷ್ಠ ರೂ.80 ಲಕ್ಷ ವರೆಗಿನ ದಾವೆಗೆ ಸಲ್ಲಿಸಬೇಕಾದ ನ್ಯಾಯಾಲಯ ಶುಲ್ಕ ₹ 247125/- ಆಗಿರುತ್ತದೆ ಎಂಬತ್ತು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ₹247125/- + 0.5% ಶುಲ್ಕ ಪಾವತಿಸಬೇಕು.



ಪಾಲು ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಪಾವತಿಸಬೇಕಾದ ಗರಿಷ್ಠ ನ್ಯಾಯಾಲಯ ಶುಲ್ಕ₹ 200/ಆಗಿರುತ್ತದೆ.



ವೈವಾಹಿಕ ಪ್ರಕರಣಗಳಿಗೆ (Matrimonial Cases) ಮತ್ತು ಆರ್ಬಿಟ್ರೇಷನ್ ಪ್ರಕರಣಗಳಿಗೆ ಪಾವತಿಸಬೇಕಾದ ನ್ಯಾಯಾಲಯ ಶುಲ್ಕ ₹100/_



EAT; P≻ ಮುಂತಾದ ಪ್ರಕರಣಗಳಲ್ಲಿ ಅಜಿ೯ ಜೊತೆ ಪಾವತಿ ಮಾಡಬೇಕಾದ ನ್ಯಾಯಾಲಯ ಶುಲ್ಕ₹ 25/_ ಆಗಿರುತ್ತದೆ.



ಕ್ರಮಾಗತ ಮೇಲ್ಮನವಿಗಳಲ್ಲಿ (Regular Appeal) ಕೆಳ ನ್ಯಾಯಾಲಯದಲ್ಲಿ ಪಾವತಿಸಿದಷ್ಟೇ ನ್ಯಾಯಾಲಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.



ಅಂತಿಮ ಡಿಕ್ರಿ ಮೇಲ್ಮನವಿ (R.A.) ಸಂಕೀರ್ಣ ಮೇಲ್ಮನವಿ (Misc.Appeal) ಪ್ರಕರಣಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಅರ್ಜಿಯ ಮೇಲೆ ಯಾವುದೇ ಶುಲ್ಕ ಪಾವತಿಸದೆ ಇರುವುದರಿಂದ ಮೇಲ್ಮನವಿಯಲ್ಲಿ ಕೂಡ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.



ಭೂಸ್ವಾಧೀನ ಪ್ರಕರಣಗಳಲ್ಲಿ (LAC) ಯಾವುದೇ ನ್ಯಾಯಾಲಯ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ ಸದರಿ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದಲ್ಲಿ ಕ್ಲೇಮು ಹಾಗೂ ಆದೇಶವಾದ ಮೊಬಲಗಿನ ವ್ಯತ್ಯಾಸ ದರದ ಮೇಲೆ ನ್ಯಾಯಾಲಯ ಶುಲ್ಕ ಪಾವತಿಸಬೇಕಾಗುತ್ತದೆ.



ಮನೆ ಬಾಡಿಗೆ ಪ್ರಕರಣಗಳಿಗೆ (HRC) ₹50/_ ಹಾಗೂ ಸದರಿ ಪ್ರಕರಣದಲ್ಲಿ ಸಲ್ಲಿಸಲಾಗುವ ಮೇಲ್ಮನವಿಗೆ (RRP) ₹ 75/ನ್ಯಾಯಾಲಯ ಶುಲ್ಕ ಪಾವತಿಸಬೇಕಾಗುತ್ತದೆ.



ಘೋಷಣಾತ್ಮಕ ಪರಿಹಾರ ಕೋರಿ ಸಲ್ಲಿಸುವ ದಾವೆ (Decleration suit) ಹಾಗೂ ಪ್ರತಿಬಂಧಕಾಜ್ಞೆ ಕೋರಿ ಸಲ್ಲಿಸುವ ದಾವೆಯಲ್ಲಿ (Injunction suit) ಪಾವತಿ ಮಾಡಬೇಕಾದ ನ್ಯಾಯಾಲಯ ಶುಲ್ಕ ₹25/- ಆಗಿರುತ್ತದೆ.



ಮೋಟಾರು ವಾಹನ ಅಪಘಾತ ಪ್ರಕರಣಗಳಿಗೆ (MVC) ಸಂಬಂಧಪಟ್ಟ ಅರ್ಜಿಯ ಮೇಲೆ ರೂ.10/- ಕೋಟು೯ ಫೀ ಪಾವತಿಸಬೇಕಾಗುತ್ತದೆ. ನೆರೆಯ ಕೇರಳ ರಾಜ್ಯದಲ್ಲಿ ಅರ್ಜಿಯಲ್ಲಿ ಕೋರಿದ ಪರಿಹಾರ ಮೊತ್ತದ ಮೇಲೆ ನ್ಯಾಯಾಲಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಅಮಲ್ಜಾರಿ ಅರ್ಜಿಗಳು (Execution Petition) ಸಂಕೀರ್ಣ ಅರ್ಜಿಗಳು (Miscellaneous Petition) ಗಳ ಮೇಲೆ ಯಾವುದೇ ನ್ಯಾಯಾಲಯ ಶುಲ್ಕ ಪಾವತಿಸುವಂತಿಲ್ಲ.



2 ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ನಡೆದ ಭಾರಿ ಪ್ರಮಾಣದ ನಕಲಿ ಸ್ಟ್ಯಾಂಪ್ ಹಗರಣದ ಬಳಿಕ ನ್ಯಾಯಾಲಯದಲ್ಲಿ ಸಲ್ಲಿಸುವ ಅರ್ಜಿಗಳಿಗೆ ಅಥವಾ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಶುಲ್ಕವನ್ನು ಕೋರ್ಟ್ ಫೀ ಸ್ಟಾಂಪ್ ಲೇಬಲ್ ಮೂಲಕ ಪಾವತಿ ಮಾಡುವ ಪದ್ಧತಿಯನ್ನು ರದ್ದು ಪಡಿಸಲಾಯಿತು. 



 ಹತ್ತು ರೂಪಾಯಿಯ ಒಳಗಿನ ನ್ಯಾಯಾಲಯ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಯಿತು. ಬದಲಿಗೆ ಪ್ರತಿಯೊಂದು ಮಧ್ಯಂತರ ಅರ್ಜಿಯ ಮೇಲೆ ₹20/_ ಮೌಲ್ಯದ ವಕೀಲರ ಕಲ್ಯಾಣ ನಿಧಿ ಸ್ಟ್ಯಾಂಪ್ ಹಚ್ಚುವ೦ತೆ ಆದೇಶ ಹೊರಡಿಸಲಾಗಿದೆ. ವಕಾಲತ್ತು ನಾಮೆಗೆ ₹30/- ಮೌಲ್ಯದ ಎಡ್ವಕೇಟ್ ವೆಲ್ಫೇರ್ ಸ್ಟ್ಯಾಂಪ್ ಫೀ ಲೇಬಲನ್ನು ಹಚ್ಚತಕ್ಕದ್ದಾಗಿದೆ.




Insolvency case; Suit fot specific performance; G & WC; possession suit ಮುಂತಾದ ಪ್ರಕರಣಗಳನ್ನು ಒಳಗೊಂಡಂತೆ ನ್ಯಾಯಾಲಯದಲ್ಲಿ ದಾಖಲಿಸುವ ಎಲ್ಲಾ ಪ್ರಕರಣಗಳಿಗೆ ಪಾವತಿಸಬೇಕಾದ ಶುಲ್ಕದ ಕುರಿತು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಬಳಸಿಕೊಳ್ಳಬಹುದು.


http://gazeis.in/karnataka-court-fees-structure/



ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಷಿಯಲ್ ಸರ್ವಿಸ್ ಸೆಂಟರ್; ಮಂಗಳೂರು

Ads on article

Advertise in articles 1

advertising articles 2

Advertise under the article