-->
High Court on Jail situation- ಜೈಲು ಕೈಪಿಡಿ ಪರಿಷ್ಕರಣೆ, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ: ಹೈಕೋರ್ಟ್‌ಗೆ ಬಂಧಿಖಾನೆ ಇಲಾಖೆ ವಿವರಣೆ

High Court on Jail situation- ಜೈಲು ಕೈಪಿಡಿ ಪರಿಷ್ಕರಣೆ, ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ: ಹೈಕೋರ್ಟ್‌ಗೆ ಬಂಧಿಖಾನೆ ಇಲಾಖೆ ವಿವರಣೆ





ಕರ್ನಾಟಕ ಜೈಲು ಕೈಪಿಡಿಯ ಅಂತಿಮ ಪರಿಷ್ಕರಣೆ ನಡೆಯುತ್ತಿದೆ. ಶೀಘ್ರದಲ್ಲೇ ಒಪ್ಪಿಗೆಗೆ ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದು ಕಾರಾಗೃಹ ಮತ್ತು ಬಂಧಿಖಾನೆ ಇಲಾಖೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.


ಆರು ಉಪ ಜೈಲುಗಳಲ್ಲಿ ಸ್ಥಳಾವಕಾಶದ ಕೊರತೆ ಇದೆ. ಗಾತ್ರದಲ್ಲಿ ಚಿಕ್ಕದಾಗಿದೆ. ಸಂದರ್ಶಕರ ಕೊಠಡಿ ಇಲ್ಲ. ಅದರೂ ಸಂದರ್ಶಕರ ಭೇಟಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬಂಧಿಖಾನೆ ಇಲಾಖೆ ಲಿಖಿತವಾಗಿ ತಿಳಿಸಿದೆ.


ಜೈಲುಗಳ ಸುಧಾರಣೆ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ‌ ಶ್ರೀನಿವಾಸ ಓಕಾ ಮತ್ತು ಜಸ್ಟಿಸ್ ಎನ್‌. ಎಸ್‌. ಸಂಜಯ್‌ ಗೌಡ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ಕೆಲ ಪ್ರಶ್ನೆಗಳನ್ನು ಹಾಕಿತ್ತು.


ಆರ್‌ ಡಿ ಉಪಾಧ್ಯಾಯ Vs ಆಂಧ್ರ ಪ್ರದೇಶ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಜಾರಿ ಕುರಿತ ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಬಂಧಿಖಾನೆ ಇಲಾಖೆಯ ಪರ ವಕೀಲ ಎಸ್‌ ಎಸ್‌ ಮಹೇಂದ್ರ, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಈಗಾಗಲೇ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂಬ ಲಿಖಿತ ಉತ್ತರ ನೀಡಿದರು.


ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನದಂತೆ ರಾಜ್ಯ ಜೈಲು ಕೈಪಿಡಿ 1978ನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಂಧಿಖಾನೆ ಇಲಾಖೆ ಪರ ವಕೀಲರು ತಮ್ಮ ವಾದದಲ್ಲಿ ತಿಳಿಸಿದರು.


ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಆರ್‌ ಡಿ ಉಪಾಧ್ಯಾಯ Vs ಆಂಧ್ರ ಪ್ರದೇಶ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು “ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಈಗಾಗಲೇ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ” ಎಂದು ಲಿಖಿತವಾಗಿ ತಿಳಿಸಿದೆ.


ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದಿಸಿದ ವಕೀಲ ಶ್ರೀಧರ ಪ್ರಭು, 'ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಅಭಯ‌ ಶ್ರೀನಿವಾಸ ಓಕಾ ನೇತೃತ್ವದ ಪೀಠ ಜನ‌ತಾ ಅದಾಲತ್ ಪ್ರಕರಣದಲ್ಲಿ ಜೈಲು ಸುಧಾರಣೆಗೆ ಕೆಲ ನಿರ್ದೇಶನಗಳನ್ನು ನೀಡಿತ್ತು. ಇದರ ಜೊತೆಗೆ ಮಾದರಿ ಜೈಲು ಕೈಪಿಡಿ ರೂಪಿಸುವ ಸಂಬಂಧ ಕೆಲವು ದಾಖಲೆಗಳನ್ನು ಸಲ್ಲಿಸಿ ಅವುಗಳನ್ನು ಆಧರಿಸಿ ತಮ್ಮದೇ ಆದ ಮಾದರಿ ಜೈಲು ಕೈಪಿಡಿ ರೂಪಿಸಲು ನಿರ್ದೇಶಿಸಿಬೇಕು” ಎಂದು ಪೀಠವನ್ನು ಕೋರಿದರು.


ಇದಕ್ಕೆ ಪೀಠವು 'ಹಳೆ ಕೈಪಿಡಿ ಹಾಕಲಾಗಿದೆ. ಇದನ್ನು ಕೈಬಿಟ್ಟು, ಕೇಂದ್ರ ಸರ್ಕಾರದ 2015ರ ಮಾದರಿ ಜೈಲು ಕೈಪಿಡಿ ಸಿದ್ಧಪಡಿಸಿದೆ. ಇದರ ಜೊತೆಗೆ ಬಾಂಬೆ ಹೈಕೋರ್ಟ್‌ ತಮ್ಮ ನೇತೃತ್ವದ ಪೀಠದ ನಿರ್ದೇಶನಗಳನ್ನು ಇಟ್ಟುಕೊಂಡು ಕೈಪಿಡಿ ಸಿದ್ಧಪಡಿಸಬಹುದು” ಎಂಬ ಸಲಹೆ ನೀಡಿತು. 

Ads on article

Advertise in articles 1

advertising articles 2

Advertise under the article