-->
Circular of Registration and Stamp Dept- 11-ಇ ನಕ್ಷೆ ವಿನಾಯಿತಿ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆ | 5-08-2021

Circular of Registration and Stamp Dept- 11-ಇ ನಕ್ಷೆ ವಿನಾಯಿತಿ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆ | 5-08-2021




11-ಇ ನಕ್ಷೆಗೆ ವಿನಾಯಿತಿ ಕೋರಿ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಕ್ರಮ ವಹಿಸುವ ಕುರಿತು ಎಂಬ ವಿಷಯಸೂಚಿಯೊಂದಿಗೆ ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ 5-08-2021ರಂದು ಸುತ್ತೋಲೆಯನ್ನು ಹೊರಡಿಸಿದೆ.


ಸುತ್ತೋಲೆ ಸಂಖ್ಯೆ: ಕಾನೂನು/ಇತರೆ/38/2020-21


ಈ ಸುತ್ತೋಲೆಯ ಉಲ್ಲೇಖ ೧, ೨, ಮತ್ತು ೩ರಲ್ಲಿನ ನಿರ್ದೇಶನಗಳ ಹೊರತಾಗಿಯೂ ಕೃಷಿ ಜಮೀನುಗಳ ವರ್ಗಾವಣೆ ಪತ್ರಗಳ ನೋಂದಣಿ ಸಮಯದಲ್ಲಿ, ಮೋಜಣಿ ತಂತ್ರಾಂಶದಲ್ಲಿ ಮಾಹಿತಿ ಲಭ್ಯವಿರದ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳು "ಕಾನೂನು ಸಮ್ಮತವಲ್ಲದ/ ಮೇಲಿನ ಉಲ್ಲೇಖಗಳ ನಿರ್ದೇಶಗಳಿಗೆ ವ್ಯತಿರಿಕ್ತವಾದ' ಹಿಂಬರಹ ನೀಡುತ್ತಿರುವುದರಿಂದ ಮಾನ್ಯ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ.


ಅಂತಹ ಹೆಚ್ಚಿನ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧವಾದ ಆದೇಶಗಳಾಗಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಸರ್ಕಾರದ ವಿರುದ್ಧ ಆದೇಶವಾದ ಪ್ರಕರಣಗಳಲ್ಲಿ ಮೇಲ್ಮನವಿ(Appeal) ಸಲ್ಲಿಸುವುದು ಹಾಗೂ ಸರ್ಕಾರದ ಪರವಾಗಿ ಆದೇಶವಾದ ಪ್ರಕರಣಗಳಲ್ಲಿ ತುರ್ತಾಗಿ Caveat Application (ತಡೆ ಅರ್ಜಿ) ಸಲ್ಲಿಸುವುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


11ಇ ನಕ್ಷೆ ವಿನಾಯಿತಿ ಕೋರಿ ಮಾನ್ಯ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿ/ ಉಪ ನೋಂದಣಾಧಿಕಾರಿಗಳು ಮೇಲೆ ತಿಳಿಸಿದ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ಪ್ರಕರಣಗಳನ್ನು ಸರ್ಕಾರದ ಪರವಾಗಿ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿದೆ.


ಹಾಗೂ ನ್ಯಾಯಾಂಗ ನಿಂದನಾ ಅರ್ಜಿ ದಾಖಲಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.

ಹಾಗೂ ಈ ಅಂಶಗಳನ್ನು ಪಾಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article