-->
 Supreme Court of India |  Witness cannot be prosecuted for Perjury: Nandiesha Reddy vs Kavitha Mahesh (3-8-2021)

Supreme Court of India | Witness cannot be prosecuted for Perjury: Nandiesha Reddy vs Kavitha Mahesh (3-8-2021)

Witness cannot be prosecuted for Perjury: Nandiesha Reddy vs Kavitha Mahesh (3-8-2021)




Supreme Court of India


N.S. Nandiesha Reddy Vs Kavitha Mahesh

Civil Appeal No. 4821 of 2012

dated 3-08-2021


3 member Justice bench

CJI N.V. Ramana, Justice A.S. Bopanna and Justice Hrishikesh Roy


ಸಾಕ್ಷಿದಾರರು ಉದ್ದೇಶಪೂರ್ವಕವಾಗಿ ಸುಳ್ಳು ಸಾಕ್ಷ್ಯ ನುಡಿದಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಇದು.



ಬೆಂಗಳೂರು ನಗರ ಜಿಲ್ಲೆಯ ಭಾಗವಾಗಿರುವ 151 ಕೆ.ಆರ್. ಪುರ ವಿಧಾನಸಭೆಗೆ 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ನಡೆದ ಪ್ರಕರಣವಿದು.



ನಂದೀಶ್ ರೆಡ್ಡಿ Vs ಕವಿತಾ ಮಹೇಶ್ ಪ್ರಕರಣ: ಏನಿದು ಪ್ರಕರಣ?

2008ರ ವಿಧಾನಸಭಾ ಚುನಾವಣೆಯಲ್ಲಿ ನಂದೀಶ್ ರೆಡ್ಡಿ ನಾಮಪತ್ರ ಸಲ್ಲಿಸುತ್ತಾರೆ. ಆ ಬಳಿಕ, ನಾಮಪತ್ರ ಸಲ್ಲಿಸುವ ಕೊನೆಯ ದಿನ ಕವಿತಾ ಮಹೇಶ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಮಯ ಮೀರಿತು ಎಂಬ ಕಾರಣಕ್ಕೆ ಅವರ ನಾಮಪತ್ರವನ್ನು ಸ್ವೀಕರಿಸಲು ಚುನಾವಣಾಧಿಕಾರಿ ಒಪ್ಪುವುದಿಲ್ಲ.



ಈ ಪ್ರಕರಣದಲ್ಲಿ ನಂದೀಶ್ ರೆಡ್ಡಿ ಕೈವಾಡ ಇದೆ ಎಂದು ಆರೋಪಿಸಿ ಸ್ವತಃ ವಕೀಲರೂ ಆಗಿರುವ ಕವಿತಾ ಮಹೇಶ್ ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆ.



ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಕೆ.ಆರ್.ಪುರ ಶಾಸಕ ನಂದೀಶ್ ರೆಡ್ಡಿ ಆಯ್ಕೆ ಆಸಿಂಧು ಎಂಬ ತೀರ್ಪು ನೀಡುತ್ತದೆ.


ಪ್ರಕರಣ ಮೇಲ್ಮನವಿ ಮೂಲಕ ಸುಪ್ರೀಂ ಕೋರ್ಟ್ ಅಂಗಣಕ್ಕೆ ಬರುತ್ತದೆ. ವಿಚಾರಣಾ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಚುನಾವಣಾಧಿಕಾರಿ ಅಸ್ಥಿರ ಹಾಗೂ ಸುಳ್ಳು ಸಾಕ್ಷ್ಯ ನೀಡಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸುತ್ತದೆ.

Ads on article

Advertise in articles 1

advertising articles 2

Advertise under the article