-->
Insurance Privatization Bill pass in LS- ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳ ಖಾಸಗೀಕರಣ: ಮಸೂದೆಗೆ ಸಂಸತ್ ಅಸ್ತು!

Insurance Privatization Bill pass in LS- ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳ ಖಾಸಗೀಕರಣ: ಮಸೂದೆಗೆ ಸಂಸತ್ ಅಸ್ತು!


ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳ ಖಾಸಗೀಕರಣ: ಮಸೂದೆಗೆ ಸಂಸತ್ ಅಸ್ತು!
ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳನ್ನು ಖಾಸಗೀಕರಣಗೊಳಿಸುವ ಮಹತ್ವದ ಮಸೂದೆಗೆ ಲೋಕಸಭೆ ಹಸಿರು ನಿಶಾನೆ ನೀಡಿದೆ. ಸರ್ಕಾರದ ಹಿಡಿತದಲ್ಲಿ ಇರುವ ಪ್ರತಿಷ್ಠಿತ ವಿಮಾ ಕಂಪೆನಿಗಳಲ್ಲಿ ಬಹುಮತದ ಪಾಲು ಬಂಡವಾಳವನ್ನು ಖಾಸಗಿ ಕೈಗೆ ನೀಡುವ ಮಸೂದೆ ಇದಾಗಿದೆ.


ಪ್ರತಿಪಕ್ಷಗಳ ಭಾರೀ ಪ್ರತಿಭಟನೆ ನಡುವೆ ದಿ ಜನರಲ್ ಇನ್ಶೂರನ್ಸ್ ಉದ್ಯಮ(ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ 2021ನ್ನು ಸರ್ಕಾರ ಯಾವುದೇ ಚರ್ಚೆ ಇಲ್ಲದೆ ಪಾಸು ಮಾಡಲಾಯಿತು. 


ಈ ಮಧ್ಯೆ, ವಿಮಾ ಕಂಪೆನಿಗಳ ಖಾಸಗೀಕರಣ ವಿರೋಧಿಸಿ ಪಶ್ಚಿಮ ಬಂಗಾಳದ ಹಣದಕಾಸು ಸಚಿವ ಅಮಿತ್ ಮಿತ್ರ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನೂ ಬರೆದಿದ್ದರು.


ದೇಶದ ನಾಲ್ಕು ಮುಖ್ಯ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಗಳಾದ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿ., ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿ., ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಲಿ. ಮತ್ತು ದಿ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಲಿ. ಸದ್ಯದಲ್ಲೇ ಖಾಸಗಿ ತೆಕ್ಕೆಗೆ ಜಾರಲಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200