-->
Court documents not under RTI-SC | ಕೋರ್ಟ್ ಕೇಸ್ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ: ಸುಪ್ರೀಂ ಕೋರ್ಟ್

Court documents not under RTI-SC | ಕೋರ್ಟ್ ಕೇಸ್ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ: ಸುಪ್ರೀಂ ಕೋರ್ಟ್

Court documents not under RTI-SC | ಕೋರ್ಟ್ ಕೇಸ್ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ: ಸುಪ್ರೀಂ ಕೋರ್ಟ್






ನ್ಯಾಯಾಲಯದ ಪ್ರಕರಣ, ಸಂಬಂಧಿತ ಮಾಹಿತಿ ಯಾ ದಾಖಲೆಗಳ ದೃಢೀಕೃತ ನಕಲು "ಮಾಹಿತಿ ಹಕ್ಕು ಕಾಯ್ದೆ" (RTI Act)ಯಡಿ ಪಡೆಯಲು ಅವಕಾಶವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಬಾಕಿ ಇರುವ ಅಥವಾ ತೀರ್ಮಾನಗೊ೦ಡ ಪ್ರಕರಣಗಳಿಗೆ ಸಂಬಂಧಪಟ್ಟ ಮಾಹಿತಿ ಅಥವಾ ದೃಢೀಕೃತ ನಕಲು (Cerified copy) ಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶವಿಲ್ಲ ಎಂಬುದಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 4.3.2020 ರಂದು ತೀರ್ಪು ನೀಡಿದೆ.


ಕೇಂದ್ರ ಮಾಹಿತಿ ಆಯುಕ್ತ ವಿರುದ್ಧ ಗುಜರಾತ್ ಉಚ್ಚ ನ್ಯಾಯಾಲಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಮತಿ ಭಾನುಮತಿ; ಶ್ರೀ ಎ.ಎಸ್. ಬೋಪಣ್ಣ ಮತ್ತು ಶ್ರೀ ಹೃಷಿಕೇಶ್ ರಾಯ್ ಇವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.


ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರ್ಯಾಕ್ಟೀಸ್ ನಿಯಮ 230 ರಡಿ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ದೃಢೀಕೃತ ನಕಲುಗಳನ್ನು ಪಡೆಯಲು ಆಯಾಯ ಪ್ರಕರಣಗಳ ಪಕ್ಷಗಾರರಿಗೆ ಅವಕಾಶವಿದೆ. ಮೂರನೇ ವ್ಯಕ್ತಿಯು (Third Party) ದೃಢೀಕೃತ ನಕಲುಗಳನ್ನು ಪಡೆಯಲು ಬಯಸಿದ್ದಲ್ಲಿ ಅಫಿದಾವಿತ್ ಸಲ್ಲಿಸಿ ಸಕಾರಣಗಳನ್ನು ನೀಡಿದ್ದಲ್ಲಿ ಆತನಿಗೂ ಸಿವಿಲ್ ರೂಲ್ಸ್‌ ಆಫ್ ಪ್ರ್ಯಾಕ್ಟೀಸ್ ನ ನಿಯಮಾವಳಿಗಳಡಿ ದೃಡೀಕೃತ ನಕಲು ಪಡೆಯಲು ಅವಕಾಶವಿದೆ.


2005 ನೆಯ ಇಸವಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯು ದೇಶಾದ್ಯಂತ ಅನುಷ್ಠಾನಕ್ಕೆ ಬಂತು. ಅಂತೆಯೇ ಸರಕಾರಿ ಕಚೇರಿಗಳು; ಸರಕಾರದ ಸ್ವಾಮ್ಯ ಕ್ಕೊಳಪಟ್ಟ ಸಂಸ್ಥೆಗಳು; ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆಯಡಿ ತಮ್ಮ ಕಚೇರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ದಾಖಲೆಗಳ ದೃಢೀಕೃತ ನಕಲುಗಳನ್ನು ಸಾರ್ವಜನಿಕರು ಕೋರಿದಾಗ ಅವರಿಗೆ ನೀಡತಕ್ಕ ಬದ್ಧತೆಗೊಳಪಟ್ಟವು.


ಬ್ಯಾಂಕ್; ಸಹಕಾರಿ ಸಂಘಗಳು ಹಾಗೂ ನ್ಯಾಯಾಲಯಗಳ ವ್ಯವಹಾರಕ್ಕೆ ಸ೦ಬ೦ಧಿಸಿದ ಮಾಹಿತಿಯನ್ನು ಒದಗಿಸಲು ಸಂಬಂಧಪಟ್ಟ ಕಚೇರಿಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳು ನಿರಾಕರಿಸಿದಾಗ ದೇಶಾದ್ಯಂತ ರಾಜ್ಯ/ಕೇಂದ್ರ ಮಾಹಿತಿ ಆಯುಕ್ತರಿಗೆ ಬಾಧಿತರಿ೦ದ ದೂರು/ ಮೇಲ್ಮನವಿ ಸಲ್ಲಿಸಲಾಗಿದ್ದು; ಮಾಹಿತಿ ಹಕ್ಕು ಆಯುಕ್ತರು ಸದರಿ ದೂರು ಮೇಲ್ಮನವಿಗಳನ್ನು ಪುರಸ್ಕರಿಸಿ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳಿಗೆ ಅಜಿ೯ದಾರರು ಕೋರಿದ ಮಾಹಿತಿಯನ್ನು ನೀಡುವಂತೆ ನಿರ್ದೇಶಿಸಿ ಆದೇಶ ಹೊರಡಿಸಿದ್ದರು.


ಸದರಿ ಮಾಹಿತಿ ಹಕ್ಕು ಆಯುಕ್ತರ ಆದೇಶವನ್ನು ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲಾಗಿತ್ತು.


ಡೆಪ್ಯೂಟಿ ರಿಜಿಸ್ಟ್ರಾರ್ ವಿರುದ್ಧ ಎನ್. ಅನ್ಬರಸನ್ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ILR 2009 Kar 3890ರಲ್ಲಿ ವರದಿಯಾಗಿದ್ದು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆಗಳ ದೃಢೀಕೃತ ನಕಲುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಅವಕಾಶವಿಲ್ಲವೆಂಬುದಾಗಿ ತೀರ್ಪು ನೀಡಲಾಗಿತ್ತು. ಅಂತೆಯೇ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸಾವ೯ಜನಿಕರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೃಢೀಕೃತ ನಕಲುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಕೋರಿದಾಗ ಮಾನ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಸದರಿ ಅರ್ಜಿಯನ್ನು ಅರ್ಜಿದಾರರಿಗೆ ಮರಳಿಸಿ ಕರ್ನಾಟಕ ಸಿವಿಲ್ ರೂಲ್ಸ್ ಪ್ರಾಕ್ಟೀಸ್ ನ ನಿಯಮಗಳಡಿ ಅರ್ಜಿ ಸಲ್ಲಿಸಿ ಕೋರಿರುವ ದಾಖಲೆಗಳನ್ನು ಪಡೆಯುವಂತೆ ಮಾಹಿತಿ ನೀಡಲಾಗುತ್ತಿತ್ತು.


ಇದೀಗ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಎಲ್ಲಾ ರೀತಿಯ ಗೊಂದಲಗಳಿಗೆ ಪೂರ್ಣ ವಿರಾಮವನ್ನು ಹಾಕಿದ್ದು ಇನ್ನು ಮುಂದೆ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆಗಳ ದೃಡೀಕೃತ ನಕಲುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಪಡೆಯುವಂತಿಲ್ಲ.ಈ ಕುರಿತು ಕರ್ನಾಟಕ ಸಿವಿಲ್ ರೂಲ್ಸ್‌ ಆಫ್ ಪ್ರ್ಯಾಕ್ಟೀಸ್ ನಲ್ಲಿ ರಚಿಸಲಾದ ನಿಯಮಗಳಡಿ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶವಿದೆ.





ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜುಡಿಶಿಯಲ್ ಸರ್ವೀಸ್ ಸೆಂಟರ್; ಮಂಗಳೂರು

Ads on article

Advertise in articles 1

advertising articles 2

Advertise under the article