-->
bail application rejected- ಕೋರ್ಟ್ ಆದೇಶವಿದ್ದರೂ ವಾಹನ ಬಿಡುಗಡೆಗೆ ಲಂಚ: ಎಸ್‌ಐ ಸಹಿತ ಮೂವರು ಪೊಲೀಸರ ಜಾಮೀನು ತಿರಸ್ಕೃತ

bail application rejected- ಕೋರ್ಟ್ ಆದೇಶವಿದ್ದರೂ ವಾಹನ ಬಿಡುಗಡೆಗೆ ಲಂಚ: ಎಸ್‌ಐ ಸಹಿತ ಮೂವರು ಪೊಲೀಸರ ಜಾಮೀನು ತಿರಸ್ಕೃತ

ಕೋರ್ಟ್ ಆದೇಶವಿದ್ದರೂ ವಾಹನ ಬಿಡುಗಡೆಗೆ ಲಂಚ: ಎಸ್‌ಐ ಸಹಿತ ಮೂವರು ಪೊಲೀಸರ ಜಾಮೀನು ತಿರಸ್ಕೃತ




ವಾಹನ ಬಿಡುಗಡೆಗೆ ನ್ಯಾಯಾಲಯ ಆದೇಶ ಮಾಡಿದ್ದರೂ ಸಂಬಂಧಿತ ವ್ಯಕ್ತಿಯಿಂದ ಲಂಚದ ಬೇಡಿಕೆ ಇಟ್ಟಿದ್ದ ಎಸ್‌ಐ ಸಹಿತ ಪೊಲೀಸ್ ಸಿಬ್ಬಂದಿಗೆ ಈ ಪ್ರಕರಣ ಮುಳುವಾಗಿದೆ.



ಎಸ್‌ಐ ಸಹಿತ ಮೂವರು ಪೊಲೀಸರಿಗೆ ಜಾಮೀನು ನೀಡಲು ತುಮಕೂರು ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿದ್ದು, ಈ ಭ್ರಷ್ಟತನದ ಆರೋಪ ಹೊತ್ತ ಮೂವರು ಪೊಲೀಸರು ಇನ್ನಷ್ಟು ದಿನ ಜೈಲು ಕಂಬಿಗಳನ್ನು ಎಣಿಸಬೇಕಾಗಿ ಬಂದಿದೆ.



ನ್ಯಾಯಾಧೀಶರಾದ ಎಸ್‌. ಸುಧೀಂದ್ರನಾಥ್, ಆರೋಪಿಗಳ ಬಿಡುಗಡೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.



ತುಮಕೂರು ಗುಬ್ಬಿ ತಾಲೂಕಿನ ಸಿಎಸ್‌ ಪುರ ಪೊಲೀಸ್ ಠಾಣೆಯ ಎಸ್‌ಐ ಸೋಮಶೇಖರ್, ಸಿಬ್ಬಂದಿ ನಯಾಜ್ ಅಹ್ಮದ್ ಮತ್ತು ಕೇಶವಮೂರ್ತಿ ಅವರು ಚಂದ್ರಣ್ಣ ಎಂಬವರಿಂದ ಲಂಚ ಪಡೆದುಕೊಂಡಿದ್ದರು. ಈ ಸಂಬಂಧ ನಡೆದ ಎಸಿಬಿ ದಾಳಿಯಲ್ಲಿ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿತ್ತು.



ದೂರುದಾರ ಚಂದ್ರಣ್ಣ, ಕೋರ್ಟ್ ಆದೇಶದನ್ವಯ ತಮ್ಮ ವಾಹನ ಬಿಡುಗಡೆಗೊಳಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ನ್ಯಾಯಾಲಯ ಆದೇಶವಿದ್ದರೂ ವಾಹನ ಬಿಡುಗಡೆ ಮಾಡಬೇಕಿದ್ದರೆ, ತಮಗೆ 28,000/- ರೂ. ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು.

Ads on article

Advertise in articles 1

advertising articles 2

Advertise under the article