-->
Notification for 2 more JMFC court- ಮಂಗಳೂರು: 2 ಕೋರ್ಟ್‌ಗಳಿಗೆ NI Actನಡಿ ಪ್ರದತ್ತ ಅಧಿಕಾರ: ರಾಜ್ಯ ಕಾನೂನು ಸಚಿವಾಲಯ ಆದೇಶ

Notification for 2 more JMFC court- ಮಂಗಳೂರು: 2 ಕೋರ್ಟ್‌ಗಳಿಗೆ NI Actನಡಿ ಪ್ರದತ್ತ ಅಧಿಕಾರ: ರಾಜ್ಯ ಕಾನೂನು ಸಚಿವಾಲಯ ಆದೇಶ

ಮಂಗಳೂರು: 2 ಕೋರ್ಟ್‌ಗಳಿಗೆ NI Actನಡಿ ಪ್ರದತ್ತ ಅಧಿಕಾರ: ರಾಜ್ಯ ಕಾನೂನು ಸಚಿವಾಲಯ ಆದೇಶ





ಕಳೆದ ಎರಡನೇ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮಂಗಳೂರಿನ ಎಂಟನೇ ಮತ್ತು ಒಂಬತ್ತನೇ ಜೆಎಂಎಫ್‌ಸಿ ನ್ಯಾಯಾಲಯಗಳಿಗೆ ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆ ಅಡಿ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯ ಪ್ರದತ್ತ ಅಧಿಕಾರವನ್ನು ನೀಡಲಾಗಿದೆ.



ಈ ಸಂಬಂಧ, ರಾಜ್ಯ ಕಾನೂನು ಸಚಿವಾಲಯ ಅಕ್ಟೋಬರ್ 20, 2021ರಂದು ಅಧಿಸೂಚನೆ ಹೊರಿಡಿಸಿದೆ. (No. Law-LCE/129/2021 dated 28/10/2021).



ಈ ಅಧಿಸೂಚನೆಯೊಂದಿಗೆ ಮಂಗಳೂರಿನ ಐದನೇ ಜೆಎಂಎಫ್‌ಸಿ ನ್ಯಾಯಾಲಯದೊಂದಿಗೆ ಎಂಟು ಮತ್ತು ಒಂಬತ್ತನೇ ಜೆಎಂಎಫ್‌ಸಿ ನ್ಯಾಯಾಲಯವೂ ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆ ಅಡಿ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯ ಪ್ರದತ್ತ ಅಧಿಕಾರವನ್ನು ಪಡೆದುಕೊಂಡಿದೆ.



ಐದನೇ ಜೆಎಂಎಫ್‌ಸಿ ನ್ಯಾಯಾಲಯವು ಮಂಗಳೂರು ನಗರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆ ನಡೆಸಲಿದೆ.



ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಸುರತ್ಕಲ್, ಕಾವೂರು, ಪಣಂಬೂರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆ ನಡೆಸಲಿದೆ.


ಒಂಬತ್ತನೇ ಜೆಎಂಎಫ್‌ಸಿ ನ್ಯಾಯಾಲಯವೂ ಮಂಗಳೂರು ನ್ಯಾಯಾಲಯದ ವ್ಯಾಪ್ತಿಗೆ ಬರುವ ಉಳಿದ ಪ್ರಕರಣಗಳ ವಿಚಾರಣೆ ನಡೆಸಲಿದೆ. 

(ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ)






Ads on article

Advertise in articles 1

advertising articles 2

Advertise under the article