-->
HC upheld bank employee termination order- ಖಾತೆಯಿಂದ ಗ್ರಾಹಕರ ಹಣ ಡ್ರಾ ಮಾಡಿದ ಸಿಬ್ಬಂದಿ ವಜಾ: ಬ್ಯಾಂಕ್ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

HC upheld bank employee termination order- ಖಾತೆಯಿಂದ ಗ್ರಾಹಕರ ಹಣ ಡ್ರಾ ಮಾಡಿದ ಸಿಬ್ಬಂದಿ ವಜಾ: ಬ್ಯಾಂಕ್ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

HC upheld bank employee termination order- ಖಾತೆಯಿಂದ ಗ್ರಾಹಕರ ಹಣ ಡ್ರಾ ಮಾಡಿದ ಸಿಬ್ಬಂದಿ ವಜಾ: ಬ್ಯಾಂಕ್ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್





ಗ್ರಾಹಕರೊಬ್ಬರ ಖಾತೆಯಿಂದ ಹಣ ಡ್ರಾ ಮಾಡಿದ ಉದ್ಯೋಗಿಯನ್ನು ವಜಾ ಮಾಡಿದ ಬ್ಯಾಂಕ್ ನಿರ್ಧಾರವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ.



ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಗಳ ವಂಚನೆ ಪ್ರಕರಣಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದೆ ಮತ್ತು ಇದು ಜಾಗತಿಕ ಸಮಸ್ಯೆಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.


ಪ್ರಕರಣದ ವಿವರ:

ಬ್ಯಾಂಕ್ ಸಿಬ್ಬಂದಿ ತನ್ನ ಪರಿಚಯದ ಮಹಿಳಾ ಗ್ರಾಹಕರೊಬ್ಬರಿಗೆ ಉಳಿತಾಯ ಖಾತೆ ತೆರೆದುಕೊಟ್ಟಿದ್ದರು. ಬಳಿಕ, ಈ ಖಾತೆಗೆ ಗ್ರಾಹಕರಿಂದ ಹಣ ಪಡೆದು ತಾವೇ ಸ್ವತಃ ತುಂಬಿಸುತ್ತಿದ್ದರು. ಕೆಲ ಸಮಯದ ಬಳಿಕ ಗ್ರಾಹಕರು ತಮ್ಮ ಖಾತೆಯಿಂದ ಉದ್ಯೋಗಿ ಹಣ ಡ್ರಾ ಮಾಡಿದ್ಧಾರೆ ಎಂದು ಬ್ಯಾಂಕ್‌ಗೆ ದೂರು ನೀಡಿದ್ದರು.



ಈ ದೂರಿನ ವಿಚಾರಣೆ ನಡೆಸಿದ ಬ್ಯಾಂಕ್ ತಪ್ಪಿತಸ್ಥ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಿತ್ತು. ತನಿಖೆ ವೇಳೆ, ತಾನು ಖಾತೆಯಿಂದ ಹಣ ಡ್ರಾ ಮಾಡಿರುವುದನ್ನು ಉದ್ಯೋಗಿ ಒಪ್ಪಿಕೊಂಡಿದ್ದರು. ಅಲ್ಲದೆ, ಗ್ರಾಹಕರ ಖಾತೆಗೆ ಹಣ ತುಂಬದೆ ನಕಲಿ ರಸೀದಿಗಳನ್ನು ನೀಡಿದ್ದು ಬೆಳಕಿಗೆ ಬಂದಿತ್ತು.


ತನ್ನನ್ನು ಉದ್ಯೋಗದಿಂದ ಕಿತ್ತು ಹಾಕಿದ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ಬ್ಯಾಂಕ್ ಸೇವೆಯಿಂದ ವಜಾ ಮಾಡಿದ ಕ್ರಮ ಹಾಗೂ ಈ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಾಜಿ ಉದ್ಯೋಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿವ ಶಂಕರ್ ಮಗ್ದೂಮ್ ಅವರ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.



ಪ್ರಕರಣದಲ್ಲಿ, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಒಬ್ಬ ಸೇವೆಯಲ್ಲಿದ್ದ ನೌಕರ ಬ್ಯಾಂಕಿನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಬದಲಾಗಿ ವಂಚನೆ ಮಾಡಿರುವುದು ಸರ್ವಥಾ ಒಪ್ಪತಕ್ಕದ್ದಲ್ಲ ಎಂದು ನ್ಯಾಯಪೀಠ ಹೇಳಿದೆ.


ಇಂತಹ ಘಟನೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇಂತಹ ಕೃತ್ಯಗಳನ್ನು ಕಠಿಣವಾಗಿ ಹತ್ತಿಕ್ಕಬೇಕಿದೆ ಎಂದು ನ್ಯಾಯಪೀಠ ಹೇಳಿದೆ.







Ads on article

Advertise in articles 1

advertising articles 2

Advertise under the article