-->
KSBC Annual Subscription Circular- ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಚಂದಾ: ಕರ್ನಾಟಕ ವಕೀಲರ ಪರಿಷತ್ ಸುತ್ತೋಲೆ

KSBC Annual Subscription Circular- ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಚಂದಾ: ಕರ್ನಾಟಕ ವಕೀಲರ ಪರಿಷತ್ ಸುತ್ತೋಲೆ

ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಚಂದಾ: ಕರ್ನಾಟಕ ವಕೀಲರ ಪರಿಷತ್ ಸುತ್ತೋಲೆ





ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ವಾರ್ಷಿಕ ಚಂದಾ ನೀಡುವಂತೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ 23/11/2021ರಂದು ಸುತ್ತೋಲೆ ಹೊರಡಿಸಿದೆ.



31/12/2006ರ ವರೆಗೆ ವಕೀಲರ ಸದಸ್ಯತ್ವ ನೋಂದಾಯಿಸಿದ ವಕೀಲರು ರೂ. 2000/- ವಂತಿಗೆ ನೀಡಬೇಕು.


01/01/2007ರಿಂದ 31/12/2020ರ ಮಧ್ಯೆ ವಕೀಲರ ಸದಸ್ಯತ್ವ ನೋಂದಾಯಿಸಿದ ವಕೀಲರು 1000/- ವಂತಿಗೆ ನೀಡಬೇಕು.



ಜೂನ್ 30,2022ರ ವರೆಗೆ ಈ ಸಾಲಿನ ವಂತಿಗೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ವಕೀಲರು ಪ್ರತಿ ತಿಂಗಳು ತಲಾ ರೂ. 100/- ದಂಡವಾಗಿ ಹೆಚ್ಚಿನ ಹಣವನ್ನು ಭರಿಸಬೇಕಾಗುತ್ತದೆ. ಆದರೆ, 2010-2020 ವರೆಗಿನ ವಂತಿಗೆಯನ್ನು ನೀಡಲು ಯಾವುದೇ ಅವಕಾಶ ಇಲ್ಲ ಎಂದು ಸುತ್ತೋಲೆ ತಿಳಿಸಿದೆ.



ಆಜೀವ ಸದಸ್ಯತ್ವ ವಂತಿಗೆಯಾಗಿ ರೂ. 15000/- ನೀಡಿರುವ ವಕೀಲ ಸದಸ್ಯರು ವ್ಯತ್ಯಾಸದ ಹಣ ರೂ. 13700/-ನ್ನು ನಗದಾಗಿ ನೀಡಬೇಕು. ಇದರಲ್ಲಿ ರೂ. 10000/- ವ್ಯತ್ಯಾಸದ ಮೊತ್ತ/ ವಂತಿಗೆ(Difference Amount) ಸೇರಿರುತ್ತದೆ. ಉಳಿದಂತೆ ಜೂನ್ 2018 ರಿಂದ ಡಿಸೆಂಬರ್ 2021ರ ವರೆಗೆ ಪ್ರತಿ ತಿಂಗಳು ತಲಾ ರೂ. 100/- ವಿಳಂಬ ಶುಲ್ಕವಾಗಿ ನೀಡಬೇಕಾಗುತ್ತದೆ.


ಆಜೀವ ಸದಸ್ಯರು ತಮ್ಮ ಆಜೀವ ಸದಸ್ಯತ್ವದ ಮೂಲ ಪ್ರತಿ ಸರ್ಟಿಫಿಕೇಟನ್ನು ಹಾಜರುಪಡಿಸಬೇಕು.



ಕಚೇರಿಯಲ್ಲಿ ಪಾವತಿಸುವ ವಕೀಲರು ನಗದು ಕೌಂಟರಿನಲ್ಲಿ ನಗದು ಮೊತ್ತವನ್ನು ಪಾವತಿಸಿ ರಶೀದಿಯ ಕಚೇರಿ ಪ್ರತಿಯನ್ನು ನಗದು ಕೌಂಟರ್‌ನಲ್ಲಿ ಹಾಕುವಂತೆ ಕೋರಲಾಗಿದೆ.



ಈ ಹಿಂದೆ ನೀಡಲಾದ ಬ್ಯಾಂಕ್ ಖಾತೆಗೆ ಯಾರೂ ವಂತಿಗೆಯನ್ನು ಪಾವತಿಸದಂತೆ ಮನವಿ ಮಾಡಲಾಗಿದೆ. ಏಕೆಂದರೆ, ಈ ಖಾತೆಯನ್ನು ಈಗಾಗಲೇ ಮುಚ್ಚಲಾಗಿದೆ. ಮತ್ತು ಬ್ಯಾಂಕ್ ಖಾತೆಗೆ ಜಮೆ ಮಾಡಲಾದ ಯಾವುದೇ ವಂತಿಗೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸುತ್ತೋಲೆಯಲ್ಲಿ ತಿಳಿಸಿದೆ.



ವಕೀಲರು ತಮ್ಮ ವೈಯಕ್ತಿಕ ವಂತಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಅದಕ್ಕೆ ಅವರು ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

https://ksbc.org.in/

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200