Sec 138 of NI Act: ಭದ್ರತೆಗಾಗಿ ನೀಡಿದ ಚೆಕ್, ಹಣ ಸಾಕಷ್ಟಿಲ್ಲ ದೂರಿನ ಚೆಕ್ ಅಮಾನ್ಯ ಪ್ರಕರಣ
Sec 138 of NI Act: ಭದ್ರತೆಗಾಗಿ ನೀಡಿದ ಚೆಕ್, ಹಣ ಸಾಕಷ್ಟಿಲ್ಲ ದೂರಿನ ಚೆಕ್ ಅಮಾನ್ಯ ಪ್ರಕರಣ
ಭದ್ರತೆಗಾಗಿ ನೀಡಿದ ಚೆಕ್‌ಗಳನ್ನು ಹಸ್ತಾಂತರಿಸುವುದು ಆ ಚೆಕ್ ನಿಂದ ಉದ್ಭವವಾಗುವ "ಹೊಣೆಗಾರಿಕೆಯ ಬಿಡುಗಡೆ"ಯಿಂದ ಆರೋಪಿಯನ್ನು ಹೊರತೆಗೆಯಲು ಆಗುವುದಿಲ್ಲ.
ಭದ್ರತೆಗಾಗಿ ನೀಡಿದ ಚೆಕ್, ಆರೋಪಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದಿರುವುದು, ಚೆಕ್‌ನ್ನು ಭರ್ತಿ ಮಾಡದಿರುವುದು ಮುಂತಾದ ವಿವಿಧ ರಕ್ಷಣೆಗಳನ್ನು ಆರೋಪಿ ತೆಗೆದುಕೊಂಡರೂ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 (ಚೆಕ್‌ನ ಅವಮಾನ) ಅಡಿಯಲ್ಲಿ ದೆಹಲಿ ಕೋರ್ಟ್ ಅರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿ ತನ್ನ ವ್ಯವಹಾರ/ಉದ್ಯಮವನ್ನು ಬೆಳೆಸಲು ಹಣಕಾಸಿನ ಅಗತ್ಯಕ್ಕಾಗಿ ದೂರುದಾರರಿಂದ ಹಣ ಅಪೇಕ್ಷೆ ಮಾಡಿದ. ಇದರನ್ವಯ ದೂರುದಾರರು ಆರೋಪಿಗೆ 76.24 ಲಕ್ಷ ರೂಪಾಯಿ ಕೈಸಾಲವನ್ನು ನೀಡಿದರು, ಈ ವ್ಯವಹಾರದ ಬಗ್ಗೆ ತಿಳುವಳಿಕೆ ಪತ್ರವನ್ನು (MOU) ಕರಾರು ಮಾಡಲಾಯಿತು. ಆರೋಪಿ ತನ್ನ ಹೊಣೆಗಾರಿಕೆಯ ಭಾಗವಾಗಿ ನೀಡಿದ ಚೆಕ್ ಬಾಬ್ತು, 5 ಲಕ್ಷ ರೂ. ನಗದೀಕರಣಕ್ಕಾಗಿ ಜಮೆ ಮಾಡಿದಾಗ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತು.
ದೂರುದಾರರು ಆರೋಪಿಗೆ ಕಾನೂನು ತಿಳುವಳಿಕಾ ನೋಟೀಸ್ ಜಾರಿಗೊಳಿಸಿದರೂ ಚೆಕ್ ಮೊತ್ತವನ್ನು ಆರೋಪಿ ಪಾವತಿಸಲಿಲ್ಲ. ಆ ಸಂಬಂಧ, ದೂರುದಾರರು NI Act ಸೆಕ್ಷನ್ 138 ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಈ ಪ್ರಕರಣದಲ್ಲಿ ಆರೋಪಿಯು ತನ್ನ ಹಣಕಾಸಿನ ಹೊಣೆಗಾರಿಕೆಗೆ ತಕರಾರು ತೆಗೆದಿದ್ದರು.
ಆರೋಪಿ ತನ್ನ ಸಹಿಯನ್ನು ಒಪ್ಪಿಕೊಂಡರು. ಆದರೆ, ಚೆಕ್‌ನ್ನು ತಾನು ಭರ್ತಿ ಮಾಡಿಲ್ಲ ಎಂಬ ಬಗ್ಗೆ ತಕರಾರು ತೆಗೆದರು. ಈ ಮಹತ್ವದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಸುಪ್ರೀಂ ಕೋರ್ಟಿನ ಇತ್ತೀಚಿನ ಮಹತ್ವ ಆದೇಶವನ್ನು ಪುನರುಚ್ಚಸಿತು.
ಬೀರ್ ಸಿಂಗ್ Vs. ಮುಖೇಶ್ ಕುಮಾರ್, (2019) 4 SCC 197
Bir Singh Vs Mukesh Kumar dated 6/02/2019
ಈ ತೀರ್ಪಿನಲ್ಲಿ ಉಲ್ಲೇಖಿಸಿದಂತೆ, "ಆರೋಪಿಯ ಹೊರತಾಗಿ ಬೇರಾವುದೇ ವ್ಯಕ್ತಿಯ ಕೈಬರಹ ಚೆಕ್ ನಲ್ಲಿ ಇದೆ ಎಂಬ ಕಾರಣಕ್ಕೆ ಚೆಕ್ ಅಮಾನ್ಯವಾಗುವುದಿಲ್ಲ. ಬದಲಾಗಿ, ಸೆಕ್ಷನ್ 139ರ ಅಡಿಯಲ್ಲಿ ಪೂರ್ವಭಾವನೆಗಳಿಗೆ ದಾರಿ ಮಾಡಿಕೊಡುತ್ತದೆ"
ಭದ್ರತೆಗಾಗಿ ಚೆಕ್ ನೀಡಿದೆ, ಅಥವಾ ಚೆಕ್ ತಾನು ಬರೆದಿಲ್ಲ ಎಂಬ ಬಾಯಿ ಮಾತಿನ ವಿರೋಧದಿಂದ ನ್ಯಾಯಾಲಯದ ಪೂರ್ವಭಾವನೆಯನ್ನು ಅಳಿಸಿಹಾಕಲಾಗದು. ಅದನ್ನು ಹೇಗೆ ತೆಗೆದುಹಾಕಬಹುದು ಎಂಬುದಕ್ಕೆ ಈ ಕೆಳಗಿನ ಆದೇಶ ಮಹತ್ವದ್ದಾಗಿದೆ.
Case/Judgement: ಕೆ.ಎನ್. ಬೀನಾ Vs ಮುನಿಯಪ್ಪನ್, (2001) 8 SCC 458
ಈ ತೀರ್ಪಿನಲ್ಲಿ ಹೇಳಿದ ಹಾಗೆ, "ನೇರ ಸಾಕ್ಷ್ಯ ನುಡಿಯುವ ಮೂಲಕ ಮತ್ತು ವಿಶೇಷ ಪ್ರಕರಣಗಳಲ್ಲಿ, ದೂರುದಾರರ ದೂರಿನಲ್ಲಿ ಉಲ್ಲೇಖಿಸಿದ ಅಂಶ, ಶಾಸನಬದ್ಧ ನೋಟಿಸ್ ಮತ್ತು ದೂರುದಾರರ ಸಾಕ್ಷ್ಯವನ್ನು ಆರೋಪಿ ವಿಚಾರಣೆ ವೇಳೆ ನಿರಾಕರಿಸಬಹುದು."
Zikrur Rahman Khan v. Anwar Ahmad (11-11-2021)
ಅಪರಾಧಕ್ಕಾಗಿ ಆರೋಪಿಗೆ ಶಿಕ್ಷೆ ವಿಧಿಸಿದರು. ತೀರ್ಪು ನೀಡುವಾಗ, ನ್ಯಾಯಾಲಯವು ಈಗಾಗಲೇ ಸ್ಥಾಪಿತವಾಗಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿ ತೀರ್ಪು ಪುನರುಚ್ಚರಿಸಿತು ಮತ್ತು ಆರೋಪಿ ತೆಗೆದುಕೊಂಡ ವಿವಿಧ ರಕ್ಷಣೆಗಳನ್ನು ತಿರಸ್ಕರಿಸಿತು.