-->
Sound pollution in mosque? HC seeks clarification- ಮಸೀದಿಗಳಲ್ಲಿ ಧ್ವನಿವರ್ಧಕ: ಪೊಲೀಸರು ಮತ್ತು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Sound pollution in mosque? HC seeks clarification- ಮಸೀದಿಗಳಲ್ಲಿ ಧ್ವನಿವರ್ಧಕ: ಪೊಲೀಸರು ಮತ್ತು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಮಸೀದಿಗಳಲ್ಲಿ ಧ್ವನಿವರ್ಧಕ: ಪೊಲೀಸರು ಮತ್ತು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ





ಯಾವ ಕಾನೂನಿನ ಅಡಿಯಲ್ಲಿ ಮಸೀದಿಗಳಿಗೆ ಧ್ವನಿವರ್ಧಕಗಳುಮತ್ತು ಸಾರ್ವಜನಿಕ ಭಾಷಣಕ್ಕೆ ಬಳಸುವ ಪರಿಕರಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.



ಶಬ್ದ ಮಾಲಿನ್ಯ ನಿಯಮಗಳ ಪ್ರಕಾರ ಅಂತಹ ಬಳಕೆಯನ್ನು ನಿರ್ಬಂಧಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನ್ಯಾಯಪೀಠಕ್ಕೆ ವಿವರಿಸಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.




ಬೆಂಗಳೂರಿನ ಕೆಲವು ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಪಿ. ರಾಕೇಶ್ ಸೇರಿದಂತೆ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿವ ಶಂಕರ್ ಮಗ್ದೂಮ್ ನೇತೃತ್ವದ ವಿಭಾಗೀಯ ಪೀಠ ಲಿಖಿತ ಉತ್ತರ ನೀಡುವಂತೆ ಪೊಲೀಸರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.




ಅರ್ಜಿ ದಾರರ ಪರ ವಾದ ಮಾಡಿದ ವಕೀಲರು, ಶಬ್ದ ಮಾಲಿನ್ಯ (ಸುಧಾರಣೆ ಮತ್ತು ನಿಯಂತ್ರಣ) ನಿಯಮಗಳು 2000 ಇದರ ಕಲಂ 5(3) ಪ್ರಕಾರ ನಿರಂತರವಾಗಿ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಪರಿಕರಗಳ (ಸೌಂಡ್ ಸಿಸ್ಟಮ್) ಉಪಯೋಗಕ್ಕೆ ನಿರ್ಬಂಧವಿದೆ. 



ಸಾಂಸ್ಕೃತಿಕ ಧಾರ್ಮಿಕ ಮತ್ತು ಹಬ್ಬದ ಸಂದರ್ಭದಲ್ಲಿ 15 ದಿನಗಳಿಗೆ ಮೀರದಂತೆ ರಾತ್ರಿ 12ರ ವರೆಗೆ ಧ್ವನಿವರ್ಧಕ ಬಳಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಧ್ವನಿವರ್ಧಕ ಬಳಕೆಗೆ ಅನುವು ಮಾಡಿಕೊಡಲು ವಕ್ಫ್‌ ಮಂಡಳಿ ಸಕ್ಷಮ ಪ್ರಾಧಿಕಾರವಲ್ಲ ಎಂದು ವಾದ ಮಂಡಿಸಿದರು.




ಪ್ರತಿವಾದಿ ಮಸೀದಿಗಳನ್ನು ಪ್ರತಿನಿಧಿಸಿದ ವಕೀಲರು, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲು ಪೊಲೀಸರಿಂದ ಸೂಕ್ತ ಅನುಮತಿ ಪಡೆಯಲಾಗಿದೆ. ಮತ್ತು ಮಸೀದಿಗಳಲ್ಲಿ ಶಬ್ದ ಮೀರದಂತೆ ಸೌಂಡ್ ಸಿಸ್ಟಮ್ ಸಹಿತ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.


- ವಿಚಾರಣೆ ಮುಂದೂಡಲಾಗಿದೆ.

Ads on article

Advertise in articles 1

advertising articles 2

Advertise under the article