-->
High court agrees to modification to its notification- ಹೈಕೋರ್ಟ್‌ ಮಧ್ಯಂತರ ಅರ್ಜಿ ಜೊತೆ ಅಫಿದವಿತ್ ಕಡ್ಡಾಯ: ವಕೀಲರ ನಿಯೋಗ ಮನವಿ, ಅಧಿಸೂಚನೆಗೆ ತಿದ್ದುಪಡಿ

High court agrees to modification to its notification- ಹೈಕೋರ್ಟ್‌ ಮಧ್ಯಂತರ ಅರ್ಜಿ ಜೊತೆ ಅಫಿದವಿತ್ ಕಡ್ಡಾಯ: ವಕೀಲರ ನಿಯೋಗ ಮನವಿ, ಅಧಿಸೂಚನೆಗೆ ತಿದ್ದುಪಡಿ

ಹೈಕೋರ್ಟ್‌ ಮಧ್ಯಂತರ ಅರ್ಜಿ ಜೊತೆ ಅಫಿದವಿತ್ ಕಡ್ಡಾಯ: ವಕೀಲರ ನಿಯೋಗದಿಂದ ಮನವಿ, ಅಧಿಸೂಚನೆಗೆ ತಿದ್ದುಪಡಿ







ಹೈಕೋರ್ಟ್‌ ಮುಂದೆ ಪ್ರಕರಣಗಳ ಲಿಸ್ಟಿಂಗ್ ಮಾಡುವ ಬಗ್ಗೆ ಮಾನ್ಯ ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ ನಿಯೋಗವು ಅಧ್ಯಕ್ಷ ಎ.ಪಿ. ರಂಗನಾಥ ಅವರ ನೇತೃತ್ವದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಭೇಟಿ ಮಾಡಿ ತಮ್ಮ ಅಹವಾಲವನ್ನು ಸಲ್ಲಿಸಿತು.




ಮಧ್ಯಂತರ ಅರ್ಜಿಯ ಜೊತೆ ಕೋರ್ಟ್ ಮೆಮೋ ಲಗತ್ತಿಸುವ ಬದಲು ಅಫಿದವಿಟ್ ಕಡ್ಡಾಯಗೊಳಿಸಿರುವ ಹೈಕೋರ್ಟ್ ನಿಯಮದ ಕಠಿಣತೆಯನ್ನು ಮತ್ತು ವಕೀಲರು ಎದುರಿಸುವ ಸಂಕಷ್ಟಗಳನ್ನು ವಕೀಲರ ಸಂಘದ ನಿಯೋಗ ಮಾನ್ಯ ನ್ಯಾಯಾಧೀಶರಿಗೆ ವಿವರಿಸಿತು.



ಈ ಬಗ್ಗೆ ಮನವರಿಕೆ ಮಾಡಿದ ಬಳಿಕ, ನಿಯೋಗದ ಎಲ್ಲ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ 8/11/2021ರ ಅಧಿಸೂಚನೆಗೆ ತಿದ್ದುಪಡಿ ಮಾಡಿ ಹೊಸ ಅಧಿಸೂಚನೆ ಹೊರಡಿಸುವ ಭರವಸೆಯನ್ನು ಮಾನ್ಯ ಚೀಫ್ ಜಸ್ಟಿಸ್ ರವರು ನೀಡಿರುತ್ತಾರೆ. 





ಅದರಂತೆ ನೂತನ ಅಧಿಸೂಚನೆಯನ್ನು ಹೈಕೋರ್ಟ್‌ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಎಎಪಿ ಅಧ್ಯಕ್ಷ ಎ.ಪಿ. ರಂಗನಾಥ್ ತಿಳಿಸಿದ್ದಾರೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200