-->
Chief Justice N V Ramana : ವಕೀಲ ವೃತ್ತಿ ಸಂಪತ್ತು ವೃದ್ಧಿಗಲ್ಲ, ಸಮಾಜ ಸೇವೆಗಾಗಿ: ಸಿಜೆಐ ಎನ್.ವಿ. ರಮಣ

Chief Justice N V Ramana : ವಕೀಲ ವೃತ್ತಿ ಸಂಪತ್ತು ವೃದ್ಧಿಗಲ್ಲ, ಸಮಾಜ ಸೇವೆಗಾಗಿ: ಸಿಜೆಐ ಎನ್.ವಿ. ರಮಣ


ವಕೀಲ ವೃತ್ತಿ ಸಂಪತ್ತು ವೃದ್ಧಿಗಲ್ಲ, ಸಮಾಜ ಸೇವೆಗಾಗಿ: ಸಿಜೆಐ ಎನ್.ವಿ. ರಮಣ






"ವಕೀಲ ವೃತ್ತಿ ಎನ್ನುವುದು ಇತರ ವೃತ್ತಿಗಳಿಗಿಂಗ ವಿಭಿನ್ನ. ಅತ್ಯಂತ ಪಾವಿತ್ರ್ಯವಾಗಿರುವ ಈ ವೃತ್ತಿ ಇರುವುದು ಸಂಪತ್ತು ವೃದ್ಧಿಗಲ್ಲ. ಬದಲಿಗೆ ಸಮಾಜ ಸೇವೆಗೆ..." ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಹೇಳಿದ್ದಾರೆ.




ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಜಾರಿಯಾದ ಸ್ಮರಣಾರ್ಥ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಾನೂನು ಸೇವಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾನೂನು ನೆರವು ಆಂದೋಲನ ನಿಮ್ಮ ವೃತ್ತಿ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸಹಾನುಭೂತಿ, ತಿಳುವಳಿಕೆ ಹಾಗೂ ನಿಸ್ವಾರ್ಥ ಪ್ರಜ್ಞೆಯನ್ನು ಬೆಳೆಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಕಾನೂನು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.





ದೇಶಾದ್ಯಂತ ಕಾನೂನು ನೆರವು ಚಳವಳಿಯಲ್ಲಿ ತೊಡಗಿಸಿಕೊಂಡ ಕಾನೂನು ವಿದ್ಯಾರ್ಥಿಗಳನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿ ಅಭಿನಂದಿಸಿದರು. ಈ ವಿದ್ಯಾರ್ಥಿಗಳು ಭವಿಷ್ಯದ ದಿಗ್ದರ್ಶಕರಾಗಿ ರೂಪುಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.



ಇದೇ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ಸಿಜೆಐ ಜ. ಎನ್. ವಿ. ರಮಣ, ರಿಜುಜು ಅವರ ಇಚ್ಚಾಶಕ್ತಿಯಿಂದ ಕಾನೂನು ಸೇವೆಗಳ ಪ್ರಾಧಿಕಾರ ವಿಶೇಷ ಪ್ರಗತಿ ಕಂಡಿದೆ. ಅವರ ನಾಯಕತ್ವದಲ್ಲಿ ಕಾನೂನು ಮೂಲಸೌಕರ್ಯ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳು ಬಗೆಹರಿದಿರುತ್ತದೆ ಎಂದು ಹೇಳಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200