-->
Job in KSFC- ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿ: ಅರ್ಹ ವಕೀಲರಿಂದ ಅರ್ಜಿ ಆಹ್ವಾನ

Job in KSFC- ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿ: ಅರ್ಹ ವಕೀಲರಿಂದ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿ: ಅರ್ಜಿ ಆಹ್ವಾನ
ಕರ್ನಾಟಕದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಡೆಪ್ಯೂಟಿ ಮ್ಯಾನೇಜರ್ (ಲೀಗಲ್) ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.ವೇತನ ಶ್ರೇಣಿ: 52650/- to 97100/-


ಶೈಕ್ಷಣಿಕ ಅರ್ಹತೆ: ಕಾನೂನು ವಿಷಯದಲ್ಲಿ ಅಂಗೀಕೃತ ವಿವಿಯಿಂದ ಪದವಿ ಹಾಗೂ ಎರಡು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವ. ಕಂಪ್ಯೂಟರ್ ಜ್ಞಾನ ಹಾಗೂ ಕನ್ನಡ ಭಾಷೆಯಲ್ಲಿ ಪ್ರಭುತ್ವ ಹೊಂದಿರಬೇಕು.


ವಯೋಮಿತಿ: ಕನಿಷ್ಟ 25 ಮತ್ತು ಗರಿಷ್ಟ 35... ವಯೋಮಿತಿಯಲ್ಲಿ ಸಡಿಲಿಕೆ ಇದೆ...

ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 200, ಇತರರಿಗೆ 300/-.. ಅರ್ಜಿ ಶುಲ್ಕ ಪಾವತಿಸಿದ ಅರ್ಜಿಗಳನ್ನು ಮಾತ್ರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು


ನಿಗದಿತ ನಮೂನೆಯಲ್ಲೇ ಅರ್ಜಿಯನ್ನು ಹಾಕಬೇಕು. ಇತರ ಯಾವುದೇ ರೀರಿಯ ಅರ್ಜಿಗಳನ್ನು ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ. ಅಂಚೆ ಲಕೋಟೆ ಹೊರತುಪಡಿಸಿ, ಆನ್‌ಲೈನ್ ಅಥವಾ ಇತರ ಯಾವುದೇ ರೀತಿಯ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


ಭರ್ತಿ ಮಾಡಲಾದ ಅರ್ಜಿಗಳನ್ನು ಸಾಮಾನ್ಯ ಅಂಚೆ ಲಕೋಟೆಯಲ್ಲಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.


The Managing Director

KSFC Head Office

No 1/1, Thimmaiah Road

Bengaluru 560 052
ದಯವಿಟ್ಟು ಗಮನಿಸಿ: ಅರ್ಜಿ ಶುಲ್ಕವನ್ನು "KSFC, Bangaluru" ಇವರಿಗೆ ಪಾವತಿ ಮಾಡಬಹುದಾದ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸತಕ್ಕದ್ದು. ಚೆಕ್, ಮನಿಯಾರ್ಡರ್ ಹಾಗೂ ಪೋಸ್ಟಲ್ ಆರ್ಡರನ್ನು ಪರಿಗಣಿಸುವುದಿಲ್ಲ.
ಅರ್ಜಿ ಕಳುಹಿಸುವ ಅಂಚೆ ಲಕೋಟೆಯಲ್ಲಿ "Application for the post of Deputy Manager (Legal)" ಎಂದು ಬರೆದಿರಬೇಕು.ಅಭ್ಯರ್ಥಿಯ ಆಯ್ಕೆ ಮೆರಿಟ್ ಆಧಾರದಲ್ಲಿ ನಡೆಯಲಿದ್ದು, ಒಮ್ಮೆ ಅರ್ಜಿ ಹಾಕಿದ ನಂತರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವ ಹಾಗಿಲ್ಲ. 

Ads on article

Advertise in articles 1

advertising articles 2

Advertise under the article