-->
Sec 138 of NI Act - ಕಂಪೆನಿ ಪ್ರತಿನಿಧಿಸುವ ಪ್ರಕರಣದಲ್ಲಿ Cause Title ಹೇಗಿರಬೇಕು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Sec 138 of NI Act - ಕಂಪೆನಿ ಪ್ರತಿನಿಧಿಸುವ ಪ್ರಕರಣದಲ್ಲಿ Cause Title ಹೇಗಿರಬೇಕು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Sec 138 of NI Act - ಕಂಪೆನಿ ಪ್ರತಿನಿಧಿಸುವ ಪ್ರಕರಣದಲ್ಲಿ Cause Title ಹೇಗಿರಬೇಕು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಕಂಪೆನಿ ವಿರುದ್ಧದ ಚೆಕ್ ಅಮಾನ್ಯ ಪ್ರಕರಣದಲ್ಲಿ ಮೊದಲು ಕಂಪೆನಿಯ ಹೆಸರು ಬದಲು ವ್ಯವಸ್ಥಾಪಕ ನಿರ್ದೇಶಕರ ಹೆಸರನ್ನು ಹಾಕಿದ ಏಕೈಕ ಕಾರಣಕ್ಕೆ ಪ್ರಕರಣ ಕಂಪೆನಿಯ ಪರ ಹೂಡಿಲ್ಲ ಎಂದು ವಾದಿಸುವ ಹಾಗಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ಕಂಪನಿಯ ಪರವಾಗಿ ಸಲ್ಲಿಸಲಾದ ದೂರಿನಲ್ಲಿ ಮೊದಲು ಕಂಪನಿಯ ಹೆಸರನ್ನು ನಂತರ ವ್ಯವಸ್ಥಾಪಕ ನಿರ್ದೇಶಕರ ಹೆಸರನ್ನು ನಮೂದಿಸಿದ ಏಕೈಕ ಕಾರಣಕ್ಕೆ ಆ ದೂರನ್ನು ವಜಾಗೊಳಿಸಲು ಹೊಣೆಗಾರರಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಮೊದಲು ಆಡಳಿತಚ ನಿರ್ದೇಶಕರ ಹೆಸರನ್ನು ನಮೂದಿಸುವ ಕ್ರಮ ಸರಿಯಲ್ಲದಿದ್ದರೂ ಅದನ್ನು ದೋಷಪೂರಿತ ಎಂದು ಹೇಳಲಾಗದು ಎಂದು ಹೇಳಿದೆ.
ಕಂಪೆನಿಯ ಹೆಸರನ್ನು ಮೊದಲು ನಮೂದಿಸಿ, ವ್ಯವಸ್ಥಾಪಕ ನಿರ್ದೇಶಕರ ಮೂಲಕ ಮೊಕದ್ದಮೆ ಹೂಡುವುದು ಒಂದು ಪದ್ಧತಿಯಾಗಿರಬಹುದು. ಆದರೆ, ವ್ಯವಸ್ಥಾಪಕ ನಿರ್ದೇಶಕರ ಹೆಸರನ್ನು ಮೊದಲು ಬರೆದು ನಂತರ ಕಂಪನಿಯಲ್ಲಿನ ಹುದ್ದೆಯನ್ನು ನಮೂದಿಸುವುದು ಒಂದು ಮೂಲಭೂತ ನ್ಯೂನತೆ ಆಗುವುದಿಲ್ಲ" ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
M/s Bell Marshall tele systems ltd ಪ್ರಕರಣದಲ್ಲಿ ಫಿರ್ಯಾದುದಾರರು ತಮ್ಮ ಹೆಸರನ್ನು ಮೊದಲು ಹೆಸರು, ಹುದ್ದೆ ಮತ್ತು ಪ್ರತಿನಿಧಿಸುವ ಕಂಪೆನಿಯನ್ನು ಹೆಸರಿಸಿ ದೂರನ್ನು ದಾಖಲಿಸಿದ್ದರು. ಅವರ ಶಿರೋ ಶೀರ್ಷಿಕೆ ಹೀಗಿತ್ತು. "Bhupesh M Rathod, Managing Director of M/s Bell Marshall Telesystems Ltd..." ಈ ದೂರನ್ನು ಅಧಿಕಾರ ಪತ್ರ ಇರುವ ಮಂಡಳಿ ನಿರ್ಣಯದ ಜೊತೆಗೆ ದಾಖಲಿಸಲಾಗಿತ್ತು.ಆರೋಪಿಯು ಇತರ ಸಂಗತಿಗಳನ್ನು ಅಲ್ಲಗಳೆಯುವ ಜೊತೆಗೆ ಹೆಸರಿನ ಪ್ರಸ್ತಾಪದ ಪರಿಯನ್ನೂ ಆಕ್ಷೇಪಿಸಿ ತಕರಾರು ಸಲ್ಲಿಸಿದ್ದರು. ಈ ದೂರು ವ್ಯಕ್ತಿಯ ಸ್ವಂತ ಸಾಮರ್ಥ್ಯದಲ್ಲಿ ಹಾಕಲಾದ ದೂರು. ಇದು ಕಂಪೆನಿಯ ಪರವಾದ ದೂರು ಅಲ್ಲ ಎಂದು ಆರೋಪಿಯವರ ವಕೀಲರು ತಗಾದೆ ತೆಗೆದಿದ್ದರು.ಈ ವಾದವನ್ನು ಪುರಸ್ಕರಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಮಾನ್ಯ ಉಚ್ಚ ನ್ಯಾಯಾಲಯವೂ ಎತ್ತಿ ಕಿಡಿದಿತ್ತು.ಆದರೆ, ಸುಪ್ರೀಂ ಕೋರ್ಟ್ ಮೇಲ್ಮನವಿದಾರರ ಪರವಾಗಿ ತೀರ್ಪುನ್ನು ಪ್ರಕಟಿಸಿತು.

Bhupesh Rathod Vs Dayashankaa Prasad Chaurasia

LL 2021 SC 633

ಇದನ್ನೂ ಓದಿ:

The Associated Cement Co. Ltd V/s Keshvanand (16-12-1997)(https://indiankanoon.org/doc/1219241/)

Ads on article

Advertise in articles 1

advertising articles 2

Advertise under the article