-->
Jurisdiction of acquisition act : ಭೂಸ್ವಾಧೀನ ಕಾಯಿದೆ 2013ರ ವ್ಯಾಪ್ತಿ ಡಿಸ್ಟ್ರಿಕ್ ಕೋರ್ಟ್‌ಗೆ ಮಾತ್ರ, ಸಿಜೆಎಂಗೆ ಇಲ್ಲ...

Jurisdiction of acquisition act : ಭೂಸ್ವಾಧೀನ ಕಾಯಿದೆ 2013ರ ವ್ಯಾಪ್ತಿ ಡಿಸ್ಟ್ರಿಕ್ ಕೋರ್ಟ್‌ಗೆ ಮಾತ್ರ, ಸಿಜೆಎಂಗೆ ಇಲ್ಲ...

ಭೂಸ್ವಾಧೀನ ಕಾಯಿದೆ 2013ರ ವ್ಯಾಪ್ತಿ ಡಿಸ್ಟ್ರಿಕ್ ಕೋರ್ಟ್‌ಗೆ ಮಾತ್ರ, ಸಿಜೆಎಂಗೆ ಇಲ್ಲ...

ನೂತನ ಭೂಸ್ವಾಧೀನ ಕಾಯ್ದೆ 2013ರ ಅಡಿ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಜಿಲ್ಲಾ ನ್ಯಾಯಾಲಯಕ್ಕೆ ಮಾತ್ರ. ಹಿರಿಯ ಸಿವಿಲ್ ನ್ಯಾಯಾಲಯಗಳಿಗೆ ಇಲ್ಲ
ನೂತನ ಭೂಸ್ವಾಧೀನ ಕಾಯಿದೆ The right to fair compensation and transparency in land acquisition rehabilitation and resettlement act 2013 ಈ ಕಾಯಿದೆಯ ಕಲಂ 51 ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಕರ್ನಾಟಕ ಸರಕಾರವು ಭೂಸ್ವಾಧೀನ; ಪುನರ್ವಸತಿ ಮತ್ತು ಮರುಸ್ಥಾಪನೆ ಪ್ರಾಧಿಕಾರವನ್ನು (Acquisition; Rehabilitation and Resettlement Authority) ರಚಿಸಿದ್ದು ಸದರಿ ಕಾಯ್ದೆಯ ಕಲಂ 64 ರಡಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಅಧಿಕಾರವನ್ನು ಸದರಿ ಪ್ರಾಧಿಕಾರದ ಪೀಠಾಸೀನ ಅಧಿಕಾರಿಗಳಿಗೆ ನೀಡಲಾಗಿದೆ.
ನೂತನ ಭೂಸ್ವಾಧೀನ ಕಾಯ್ದೆಯ ಕಲಂ 52 ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಕರ್ನಾಟಕ ಸರಕಾರವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಭೂಸ್ವಾಧೀನ; ಪುನರ್ವಸತಿ ಮತ್ತು ಮರುಸ್ಥಾಪನೆ ಪ್ರಾಧಿಕಾರದ ಪೀಠಾಸೀನ ಅಧಿಕಾರಿಗಳಾಗಿ ನಾಮಾಂಕಿತಗೊಳಿಸಿದೆ.
ಯಾವುದೇ ಜಿಲ್ಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಸ್ತಿತ್ವದಲ್ಲಿ ಇಲ್ಲದೇ ಇದ್ಧ ಪಕ್ಷದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಪ್ರಾಧಿಕಾರದ ಪೀಠಾಸೀನ ಅಧಿಕಾರಿಗಳಾಗಿ ನಾಮಾಂಕಿತ ಗೊಳಿಸಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರವು No: RD 05 REH 2014 (P - 3) ದಿನಾಂಕ 10.01.2017 ರ ಪ್ರಕಾರ ಅಧಿಸೂಚನೆ ಹೊರಡಿಸಿದೆ.ಹಿಂದಿನ ಭೂಸ್ವಾಧೀನ ಕಾಯಿದೆ1894 ರಡಿ ಭೂಸ್ವಾಧೀನಪಡಿಸಿದ ಪ್ರಕರಣಗಳಲ್ಲಿ ಕಲಂ 18 ರ ಪ್ರಕಾರ ಹೆಚ್ಚುವರಿ ಪರಿಹಾರ ಕೋರಿ ಹಕ್ಕೊತ್ತಾಯದಾರರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದರು.
ಅವಾರ್ಡುಗಳಲ್ಲಿ ಹಲವಾರು ಹಕ್ಕೊತ್ತಾಯದಾರರಿದ್ದು ಅವರೊಳಗೆ ವಿವಾದಗಳಿದ್ದಲ್ಲಿ ಕಲಂ 30; 31ರಡಿ ಭೂಸ್ವಾಧೀನಾಧಿಕಾರಿಯವರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುತ್ತಿದ್ದರು.ಇದೀಗ ನೂತನ ಭೂಸ್ವಾಧೀನ ಕಾಯ್ದೆ 2013 ರ ಪ್ರಕಾರ ವಿಚಾರಣೆ ನಡೆಸಲು ಹಿರಿಯ ಸಿವಿಲ್ ನ್ಯಾಯಾಲಯಗಳು ಅಧಿಕಾರವ್ಯಾಪ್ತಿ ಕಳೆದುಕೊಂಡಿವೆ.


ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಷಿಯಲ್ ಸರ್ವಿಸ್ ಸೆಂಟರ್; ಮ೦ಗಳೂರುPrakash Nayak, Mangaluru

Ads on article

Advertise in articles 1

advertising articles 2

Advertise under the article