-->
Speedy Trial : ಸಾಕ್ಷಿ ವಿಚಾರಣೆ, ತೀರ್ಪು, ಶಿಕ್ಷೆ.. ಎಲ್ಲ ಒಂದೇ ದಿನ: ಇತಿಹಾಸ ಬರೆದ ಪೋಕ್ಸೊ ಪ್ರಕರಣ

Speedy Trial : ಸಾಕ್ಷಿ ವಿಚಾರಣೆ, ತೀರ್ಪು, ಶಿಕ್ಷೆ.. ಎಲ್ಲ ಒಂದೇ ದಿನ: ಇತಿಹಾಸ ಬರೆದ ಪೋಕ್ಸೊ ಪ್ರಕರಣ

ಸಾಕ್ಷಿ ವಿಚಾರಣೆ, ತೀರ್ಪು, ಶಿಕ್ಷೆ.. ಎಲ್ಲ ಒಂದೇ ದಿನ: ಇತಿಹಾಸ ಬರೆದ ಪೋಕ್ಸೊ ಪ್ರಕರಣ





ವಿಶೇಷ POCSO ನ್ಯಾಯಾಧೀಶ ಶಶಿಕಾಂತ್ ರೈ ಅವರು ಅತ್ಯಾಚಾರ ಪ್ರಕರಣವೊಂದರ ಸಾಕ್ಷಿಗಳ ಸಾಕ್ಷ್ಯ ವಿಚಾರಣೆ ನಡೆಸಿ ವಾದ ಆಲಿಸಿ ಮತ್ತು ಒಂದೇ ದಿನದಲ್ಲಿ ತೀರ್ಪು ಮತ್ತು ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮೂಲಕ "ತ್ವರಿತ ವಿಚಾರಣೆ" ಎಂಬ ಪದಕ್ಕೆ ಸಂಪೂರ್ಣ ಹೊಸ ಭಾಷ್ಯ ಬರೆದಿದ್ದಾರೆ.



ಬಿಹಾರದ ವಿಶೇಷ POCSO ನ್ಯಾಯಾಧೀಶ ಶಶಿಕಾಂತ್ ರೈ ನ್ಯಾಯತೀರ್ಪಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಒಂದೇ ದಿನದಲ್ಲಿ ಹತ್ತು ಸಾಕ್ಷಿಗಳ ಸಾಕ್ಷ್ಯ ವಿಚಾರಣೆ ನಡೆಸಿ, ಪ್ರಕರಣದ ವಿಚಾರಣೆ ನಡೆಸಿ ಒಂದೇ ದಿನದಲ್ಲಿ ವಾದ ಆಲಿಸಿದ್ದಲ್ಲದೆ, ತೀರ್ಪು ನೀಡಿ ಮತ್ತು ಜೀವಾವಧಿ ಶಿಕ್ಷೆಯನ್ನೂ ಪ್ರಕಟಿಸಿದ್ದಾರೆ.


ರಾಜ್ಯ ವಿ. ದಿಲೀಪ್ ಕುಮಾರ್ ಯಾದವ್ (State Vs Dilip Kumar Yadav)


ಬಿಹಾರದ ಅರಾರಿಯಾ ವಿಶೇಷ POCSO ನ್ಯಾಯಾಧೀಶ ಶಶಿಕಾಂತ್ ರೈ, 8 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ, ಸುಮಾರು 30 ವರ್ಷ ವಯಸ್ಸಿನ ಆರೋಪಿ ತಪ್ಪಿತಸ್ಥ ಎಂದು ತೀರ್ಪು ನೀಡಿದರು.


POCSO ಕಾಯ್ದೆಯ ಕಲಂ 376 AB (ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಭಾರತೀಯ ದಂಡ ಸಂಹಿತೆ ಮತ್ತು POCSO ಕಾಯಿದೆಯ ಸೆಕ್ಷನ್ 6 (aggravated penetrative sexual assault) ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಯಿತು.



ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದಿಸಿದ ಸರ್ಕಾರಿ ಅಭಿಯೋಜಕರು, ವೈದ್ಯಕೀಯ ಹಾಗೂ ಆಕ್ಯುಲರ್ ಸಾಕ್ಷ್ಯಗಳು ಆರೋಪಿಯ ತಪ್ಪನ್ನು ಸೂಚಿಸುತ್ತವೆ ಎಂದು ವಾದ ಮಂಡಿಸಿದರು. ಆದರೆ, ಆರೋಪಿ ಪರ ವಕೀಲರು ಆರೋಪಿಯ ರಕ್ಷಣೆ ಬಗ್ಗೆ ಸಾಮಾನ್ಯ ನಿರಾಕರಣೆಯನ್ನು ಮಾಡಿದ್ದರು.


ಆರೋಪ ನಿರಾಕರಣೆಯಲ್ಲಿ "ಅರ್ಹತೆ" ಇರಲಿಲ್ಲ ಮತ್ತು ಸಂತ್ರಸ್ತೆಯ ಸಾಕ್ಷ್ಯವು ಅಭಿಯೋಜನೆಯನ್ನು ಸಾಬೀತು ಮಾಡುವಂತೆ ಮಾಡಿತು. ಸಾಕ್ಷಿದಾರರು ಘಟನೆಯನ್ನು ಸ್ಪಷ್ಟವಾದ ರೀತಿಯಲ್ಲಿ ವಿವರಿಸಿದರು ಮತ್ತು ಅದನ್ನು ನಂಬದಿರಲು ನಮಗೆ ಯಾವುದೇ ಗುರುತರ ಕಾರಣವಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು.


"ಸಾಕ್ಷಿಯ ಬಾಯಿಯಿಂದ ಏನನ್ನೂ ಹೊರತೆಗೆಯಲಾಗಿಲ್ಲ. ಆಕೆ ದೃಢವಾಗಿ ಮತ್ತು ಸ್ಥಿರವಾಗಿ ಹೇಳಿಕೆ ನೀಡಿದ್ದಾಳೆ ಮತ್ತು ಅವಳ ಹೇಳಿಕೆಯಲ್ಲಿ ಹುಳುಕು ಕಾಣಲು ಮತ್ತು ಸಾಕ್ಷ್ಯದ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಉಂಟುಮಾಡಲು ಪಾಟೀಸವಾಲು ವಿಫಲವಾಗಿದೆ ಎಂದು ಹೇಳಿದ್ದಾರೆ.


ಮಗುವಿನ ಸಾಕ್ಷಿಯ ಸಾಕ್ಷ್ಯ ವಿಚಾರಣೆಯನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಸಂತ್ರಸ್ತೆ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು ಸ್ಪಷ್ಟ ಹೇಳಿಕೆ ಮತ್ತು ಸಾಕ್ಷ್ಯ ನುಡಿದಿರುವುದನ್ನು ನಮಗೆ ವಿಶ್ವಾಸಾರ್ಹವಾಗಿ ಕಂಡಿದೆ ಎಂದು ಹೇಳಿರುವ ನ್ಯಾಯಾಧೀಶರು ಸಖರೆ Vs ಸುಪ್ರೀಂ ಕೋರ್ಟ್‌ (Sakhare Vs. State of Maharastra) ತೀರ್ಪನ್ನು ಉದ್ಧರಿಸಿ ತೀರ್ಪನ್ನು ಪ್ರಕಟಿಸಿದ್ದಾರೆ.


ಮಗುವಿನ ಸಾಕ್ಷಿಯು ಸಮರ್ಥನೆಂದು ಕಂಡುಬಂದರೆ, ಅಂತಹ ಸಾಕ್ಷ್ಯವು ಶಿಕ್ಷೆಯ ತೀರ್ಪು ಪ್ರಕಟಿಸಲು ಆಧಾರವಾಗಬಹುದು ಎಂದು ಈ ಪ್ರಕರಣ ಸ್ಪಷ್ಟಪಡಿಸಿತ್ತು. 





Ads on article

Advertise in articles 1

advertising articles 2

Advertise under the article