-->
Juvenile Justice Act- ಬಾಲನ್ಯಾಯ ಕಾಯ್ದೆ: ಮಕ್ಕಳನ್ನು CWCಗೆ ಒಪ್ಪಿಸಲು ನೂತನ ನಿಯಮ

Juvenile Justice Act- ಬಾಲನ್ಯಾಯ ಕಾಯ್ದೆ: ಮಕ್ಕಳನ್ನು CWCಗೆ ಒಪ್ಪಿಸಲು ನೂತನ ನಿಯಮ

ಬಾಲನ್ಯಾಯ ಕಾಯ್ದೆ: ಮಕ್ಕಳನ್ನು CWCಗೆ ಒಪ್ಪಿಸಲು ನೂತನ ನಿಯಮ





ಮಕ್ಕಳ ಕಲ್ಯಾಣ ಸಮಿತಿಗೆ ಹಸುಳೆ ಯಾ ಮಕ್ಕಳನ್ನು ಒಪ್ಪಿಸುವುದರ ಬಗ್ಗೆ ಕರ್ನಾಟಕ ಸರ್ಕಾರ ನಿಯಮಗಳನ್ನು ಸಿದ್ಧಪಡಿಸಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ.



ಮಕ್ಕಳ ಕಲ್ಯಾಣ ಸಮಿತಿ(CWC)ಗೆ ಪೋಷಕರು ಮಕ್ಕಳನ್ನು ಒಪ್ಪಿಸುವುದರ ಸಂಬಂಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಅಡಿ ನಿಯಮ ರೂಪಿಸಲಾಗಿದೆ. 



ಸಮಿತಿಯು ತನಿಖೆ ಮತ್ತು ಕೌನ್ಸಿಲಿಂಗ್‌ಗೆ ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗಿದೆ ಎಂದು ಅದು ಹೈಕೋರ್ಟಿಗೆ ವಿವರ ನೀಡಿದೆ.


ಲೆಟ್ಸ್ ಕಿಟ್ಸ್ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ  ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರ ನ್ಯಾಯಪೀಠ, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿತ್ತು.



ಪೋಷಕರ ಗುರುತು ಮತ್ತು ಪೋಷಕರು ಮಗುವಿನ ಜೈವಿಕ ಪೋಷಕರಾಗಿದ್ದಾರೆಯೇ ಎಂಬ ಬಗ್ಗೆ CWC ವಿಚಾರಣೆ ನಡೆಸಬೇಕು. ಮಕ್ಕಳನ್ನು CWCಗೆ ಒಪ್ಪಿಸಲು ದೈಹಿಕ, ಭಾವನಾತ್ಮಕ ಅಂಶ ಕಾರಣವಾಗಿದೆಯೇ ಎಂಬುದನ್ನು CWC ಖಚಿತಪಡಿಸಲು ಎರಡನೇ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿತ್ತು.


ಪೋಷಕರು ಮಕ್ಕಳನ್ನು CWCಗೆ ಒಪ್ಪಿಸುವ ನಿರ್ಧಾರ ಗಂಭೀರವಾದದ್ದು. ಮತ್ತು ಮಗುವಿನ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ CWC ಸೂಕ್ಷ್ಮವಾಗಿ ವಿಚಾರಣೆ ನಡೆಸಬೇಕಿದೆ ಎಂದು ಹೈಕೋರ್ಟ್ ಹೇಳಿತ್ತು.




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200