-->
Advocate disturbed Virtual Session of HC - ಹೈಕೋರ್ಟ್ ಕಲಾಪದ ಮಧ್ಯೆ ಕಾಣಿಸಿದ ಕರಾವಳಿಯ ಅರೆನಗ್ನ ವ್ಯಕ್ತಿ ಯಾರು?

Advocate disturbed Virtual Session of HC - ಹೈಕೋರ್ಟ್ ಕಲಾಪದ ಮಧ್ಯೆ ಕಾಣಿಸಿದ ಕರಾವಳಿಯ ಅರೆನಗ್ನ ವ್ಯಕ್ತಿ ಯಾರು?

ಹೈಕೋರ್ಟ್ ಕಲಾಪದ ಮಧ್ಯೆ ಕಾಣಿಸಿದ ಕರಾವಳಿಯ ಅರೆನಗ್ನ ವ್ಯಕ್ತಿ ಯಾರು?





ಕರ್ನಾಟಕ ಹೈಕೋರ್ಟ್‌ನ ಕಲಾಪದಲ್ಲಿ ಅರೆನಗ್ನ ವ್ಯಕ್ತಿಯೊಬ್ಬರು ಕಾಣಿಸಿಕೊಂಡು ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಹಿಳಾ ವಕೀಲರೊಬ್ಬರು ವಾದ ಮಂಡಿಸುತ್ತಿದ್ದು, ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬರು ಅರೆನಗ್ನರಾಗಿ ಕಾಣಿಸಿಕೊಂಡು ಮಹಿಳೆಗೆ ಮುಜುಗರ ಉಂಟು ಮಾಡಿದ್ದರು.



ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ವೇಳೆ ಈ ಘಟನೆ ನಡೆದಿದೆ. ನೊಂದ ಮಹಿಳೆ ಪರ ವಾದ ಮಂಡಿಸುತ್ತಿದ್ದವರು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್.



ಈ ಪ್ರಕರಣದ ತನಿಖೆಗೆ ವಿಶೇಷ ಕಾರ್ಯಪಡೆ (ಎಸ್‌ಐಟಿ) ರಚನೆ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವರ್ಚುವಲ್ ಮೋಡ್‌ನಲ್ಲಿ ವಿಚಾರಣೆ ನಡೆಸುತ್ತಿತ್ತು.




ವೀಡಿಯೋ ಕಾನ್ಫರೆನ್ಸ್‌ನಲ್ಲಿ ವಕೀಲರಾದ ಇಂದಿರಾ ಜೈಸಿಂಗ್ ಅವರು ವಾದ ಮಂಡಿಸುತ್ತಿದ್ದ ಸಂದರ್ಭದಲ್ಲಿ ಶ್ರೀಧರ್ ಭಟ್ ಎಂಬವರು ಲಾಗ್‌ ಇನ್‌ ಆಗಿ ಕಲಾಪದಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಅರೆನಗ್ನರಾಗಿ ಕಂಡುಬಂದಿದ್ದು, ಇದರಿಂದ ಇಂದಿರಾ ತೀವ್ರ ಮುಜುಗರಕ್ಕೆ ಒಳಗಾದರು. ಇದನ್ನು ನ್ಯಾಯಪೀಠದ ಗಮನಕ್ಕೆ ತಂದ ಅವರು, ವಾದ ಮಂಡಿಸಲು ನನಗೆ ಸಮಸ್ಯೆಯಾಯಿತು ಎಂದು ಹೇಳಿಕೊಂಡರು.




ತಕ್ಷಣ ಶ್ರೀಧರ್ ಭಟ್ ಎಕ್ಸಿಟ್ ಅಗುವ ಮೂಲಕ ಕಲಾಪದಿಂದ ಹೊರಹೋದರು. ನ್ಯಾಯಪೀಠ ಕೂಡಲೇ ಈ ಕಾರಣ ಕೊಡಿ ನೋಟೀಸ್ ಜಾರಿಗೊಳಿಸಿ ನ್ಯಾಯಪೀಠಕ್ಕೆ ಲಿಖಿತ ಉತ್ತರ ನೀಡುವಂತೆ ಆದೇಶ ನೀಡಿತು.



ಆ ವ್ಯಕ್ತಿ ಯಾರು..?

ಹೈಕೋರ್ಟ್ ವರ್ಚುವಲ್ ಕಲಾಪದಲ್ಲಿ ಕಾಣಿಸಿಕೊಂಡ ವ್ಯಕ್ತಿ ಕರಾವಳಿ ಮೂಲದವರು ಎಂಬುದು ಗೊತ್ತಾಗಿದೆ. ಸುಮಾರು 20 ನಿಮಿಷಗಳ ಕಾಲ ಕಲಾಪದಲ್ಲಿ ಅರೆನಗ್ನರಾಗಿ ಕಾಣಿಸಿಕೊಂಡ ಅವರು ನ್ಯಾಯಪೀಠದ ಗಮನಕ್ಕೆ ಬರುತ್ತಲೇ ನಿರ್ಗಮಿಸಿದರು.


ಹೀಗೆ ಕಾಣಿಸಿಕೊಂಡ ವ್ಯಕ್ತಿ ಶ್ರೀಧರ್ ಭಟ್ ಆಲಿಯಾಸ್ ಯೋಗೀಶ್ ಭಟ್ ಅವರು ಕರಾವಳಿ ಮೂಲಕದವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಸೇರಿದವರು ಎಂದು ಹೇಳಲಾಗಿದೆ.

Ads on article

Advertise in articles 1

advertising articles 2

Advertise under the article