-->
Bitrth Certificate through Adhar : ನವಜಾತ ಶಿಶುಗಳಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಮೂಲಕ ಜನನ ಪ್ರಮಾಣಪತ್ರ: UIDAI ವಿನೂತನ ಯೋಜನೆ

Bitrth Certificate through Adhar : ನವಜಾತ ಶಿಶುಗಳಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಮೂಲಕ ಜನನ ಪ್ರಮಾಣಪತ್ರ: UIDAI ವಿನೂತನ ಯೋಜನೆ

ನವಜಾತ ಶಿಶುಗಳಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಮೂಲಕ ಜನನ ಪ್ರಮಾಣಪತ್ರ: UIDAI ವಿನೂತನ ಯೋಜನೆ

ಇನ್ನುಮುಂದೆ ನವಜಾತ ಶಿಶುಗಳಿಗೆ ಆಧಾರ್ ಸಂಖ್ಯೆ ನೀಡಲಾಗುತ್ತದೆ. ಇದಕ್ಕಾಗಿ ಯುಐಡಿಎಐ ಜನನ ಮತ್ತು ಮರಣ ನೋಂದಣಿ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದೆ.ನವಜಾತ ಶಿಶುವಿನ ಫೋಟೋ ಕ್ಲಿಕ್ಕಿಸಿ ಅದಕ್ಕೂ ಆಧಾರ್ ನಂಬರ್ ಕೊಡುವುದು ನಮ್ಮ ಯೋಜನೆ ಮತ್ತು ಚಿಂತನೆ ಎಂದು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಷ್ ಗರ್ಗ್ ಹೇಳಿದ್ದಾರೆ.ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ನಮ್ಮ ಇಲಾಖೆಯು ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಜೊತೆ ಸಹಭಾಗಿತ್ವ ಹೊಂದುವ ಇರಾದೆ ಇದೆ ಎಂದು ಅವರು ಹೇಳಿದ್ದಾರೆ.ಪ್ರತಿ ವರ್ಷ ದೇಶದಲ್ಲಿ ಎರಡರಿಂದ ಎರಡೂವರೆ ಕೋಟಿ ಸಂಖ್ಯೆಯ ಶಿಶುಗಳ ಜನನ ಆಗುತ್ತದೆ. ಈ ಮಕ್ಕಳಿಗೆ ಆಧಾರ್ ಮೂಲಕ ಜನನ ಪ್ರಮಾಣ ಪತ್ರ ನೀಡಲು ಯೋಚನೆ ಮಾಡಲಾಗುತ್ತಿದೆ.ಮಗು ಜನಿಸಿದ ಬಳಿಕ ಅದರ ಫೋಟೋ ತೆಗೆಯಲಾಗುತ್ತದೆ. ಆ ಮಗುವಿನ ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜೊತೆಗೆ ಭಾವಚಿತ್ರ ಹೊಂದಿರುವ ಶಿಶುವಿನ ಆಧಾರ್ ಲಿಂಕ್ ಮಾಡಲಾಗುತ್ತದೆ.  ಆ ಮಗು 5  ವರ್ಷ ಪೂರ್ಣಗೊಳಿಸಿದ ಬಳಿಕ ಬಯೋಮೆಟ್ರಿಕ್ ವಿವರ ಪಡೆದು ಮಾಡಲಾಗುವುದು ಎಂದು ಅವರು ವಿವರ ನೀಡಿದರು

Ads on article

Advertise in articles 1

advertising articles 2

Advertise under the article