-->
CJI calls for investigative Journalism- ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಸಿಜೆಐ ಎನ್ ವಿ ರಮಣ ಕರೆ

CJI calls for investigative Journalism- ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಸಿಜೆಐ ಎನ್ ವಿ ರಮಣ ಕರೆ

ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಸಿಜೆಐ ಎನ್ ವಿ ರಮಣ ಕರೆ






ಪತ್ರಿಕೋದ್ಯಮದ ಗುಣಮಟ್ಟ ಪ್ರಪಾತಕ್ಕೆ ಕುಸಿಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ. ತನಿಖಾ ಪತ್ರಿಕೋದ್ಯಮ ಎಂಬುದು ದೇಶದಿಂದಲೇ ಕಣ್ಮರೆಯಾಗಿದೆ ಎಂದು ಸ್ವತಃ ಪತ್ರಕರ್ತರಾಗಿದ್ದ ರಮಣ ಆತಂಕ ವ್ಯಕ್ತಪಡಿಸಿದ್ದಾರೆ.



ವೃತ್ತಿ ಜೀವನದ ಆರಂಭದಲ್ಲಿ ಖುದ್ದು ಪತ್ರಕರ್ತರಾಗಿದ್ದ ನ್ಯಾ. ರಮಣ ಅವರು, ಪತ್ರಕರ್ತ ಹಾಗೂ ವಕೀಲ ಸುಧಾಕರ ರೆಡ್ಡಿ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.



'ಮಾಧ್ಯಮಗಳು "ದೊಡ್ಡ" ಸುದ್ದಿಗಳನ್ನು ಹೊರಗೆಡಹುತ್ತಿಲ್ಲ ಅಥವಾ ಗಂಭೀರ ತನಿಖಾ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ. ತನಿಖಾ ಪತ್ರಿಕೋದ್ಯಮ ಎಂಬ ಪರಿಕಲ್ಪನೆ ಮಾಧ್ಯಮ ಕ್ಷೇತ್ರದಿಂದಲೇ ಕಣ್ಮರೆಯಾಗುತ್ತಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.




ಕೆಲ ವರ್ಷಗಳ ಹಿಂದೆ ಬೃಹತ್ ಹಗರಣಗಳು, ಅವ್ಯವಹಾರಗಳನ್ನು ಪತ್ರಿಕೆ ಬಯಲಿಗೆಳೆಯುತ್ತಿತ್ತು ಎಂಬುದನ್ನು ಅವರು ಸ್ಮರಿಸಿದರು.




ಪತ್ರಿಕೆಗಳನ್ನು ಸತ್ಯದ ಅಧ್ಯಯನಕ್ಕಾಗಿ ಓದಬೇಕು. ಸ್ವತಂತ್ರ ಚಿಂತನೆಯ ರೂಢಿಯನ್ನು ಅವು ಕೊಲ್ಲಲು ಬಿಡಬಾರದು' ಎಂದು ಗಾಂಧೀಜಿ ಹೇಳಿದ್ದನ್ನು ಅವರು ನೆನಪಿಸಿಕೊಂಡರು. ಮಹಾತ್ಮರ ಈ ಮಾತುಗಳ ಬಗ್ಗೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುತ್ತವೆ ಮತ್ತು ಪರೀಕ್ಷಿಸಿಕೊಳ್ಳುತ್ತವೆ ಎಂದು ಭಾವಿಸುತ್ತೇನೆ ”ಎಂದು ಸಿಜೆಐ ಹೇಳಿದರು.



ವಕೀಲ /ಲೇಖಕ ಸುಧಾಕರ ರೆಡ್ಡಿ ಅವರು ಪುಸ್ತಕಕ್ಕಾಗಿ ಕೈಗೊಂಡ ವ್ಯಾಪಕ ಸಂಶೋಧನೆಗೆ ಮೆಚ್ಚುಗೆ ಸೂಚಿಸಿದ ನ್ಯಾಯಮೂರ್ತಿಗಳು “ಇದು ರಕ್ತ ಚಂದನ ಮರಗಳ ಕಳ್ಳಸಾಗಣೆ ಕುರಿತಾದ ಮೊದಲ ಸಮಗ್ರ ಗ್ರಂಥ” ಎಂದರು. ಆಂಧ್ರಪ್ರದೇಶದ ಶೇಷಾಚಲಂನಲ್ಲಿ ರಕ್ತ ಚಂದನ ಮರಗಳ ಕಳ್ಳಸಾಗಣೆ ಭೀತಿ ತಡೆಯಲು ಬುಡಕಟ್ಟು ಜನರು ಮತ್ತಿತರ ಅರಣ್ಯವಾಸಿಗಳ ಸಹಾಯವನ್ನು ಅಧಿಕಾರಿಗಳು ಪಡೆಯಬೇಕು ಎಂದು ಕೂಡ ಸಿಜೆಐ ಈ ಸಂದರ್ಭದಲ್ಲಿ ಸಲಹೆ ನೀಡಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200