-->
Bankers Vs Hackers- ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದರೆ ಆಯಾ ಬ್ಯಾಂಕರ್‌ ಹೊಣೆ: ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು

Bankers Vs Hackers- ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದರೆ ಆಯಾ ಬ್ಯಾಂಕರ್‌ ಹೊಣೆ: ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು

ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದರೆ ಆಯಾ ಬ್ಯಾಂಕರ್‌ ಹೊಣೆ: ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪುಗ್ರಾಹಕರ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿ ಹಣವನ್ನು ಕದ್ದರೆ ಈ ನಷ್ಟವನ್ನು ಆಯಾ ಬ್ಯಾಂಕುಗಳು ಭರಿಸಬೇಕು ಎಂದು ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಉಳಿತಾಯ ಖಾತೆ ಬೆಂಗಳೂರಿನ ಮಹದೇವಪುರದ ನಿವಾಸಿ ಆರ್ ಅಶ್ವಿನಿ ಅವರ ಮೊಬೈಲ್‌ ಗೆ ನಿರಂತರ ಮೆಸ್ಸೇಜ್‌ಗಳು ಬರಲಾರಂಭಿಸಿತು.ಹೀಗೆ ತಮಗೆ ಬಂದ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವನ್ ಟೈಮ್ ಪಾಸ್ವರ್ಡ್ ಕೂಡ ಬಂದಿತ್ತು. ಇದಾದ ಸ್ವಲ್ಪ ಸಮಯದಲ್ಲಿ  ರೂ. 50,000 ಹಣವನ್ನು ತಮ್ಮ ಬ್ಯಾಂಕಿನಿಂದ ಡ್ರಾ ಮಾಡಿರುವ ಮತ್ತೊಂದು ಸಂದೇಶ ಬಂದಿತ್ತು.


ಈ ಬಗ್ಗೆ ಅಶ್ವಿನಿ ಅವರು ತಮ್ಮ ಬ್ಯಾಂಕಿಗೆ ಫೋನ್ ಮಾಡಿ ವಿಚಾರಣೆ ಮಾಡಿದ್ದರು ಆಗ ತಮ್ಮ ಖಾತೆಯಿಂದ ತೆಗೆದಿರುವ ಬಗ್ಗೆ ಅವರಿಗೆ ವಿಷಯ ಗೊತ್ತಾಯಿತು. ಈ ಹಣ ಮರುಪಾವತಿಸುವಂತೆ ಬ್ಯಾಂಕಿಗೆ ಅವರು ಮನವಿ ಸಲ್ಲಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅಶ್ವಿನಿ ಅವರು ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು


ಇದಾಗಿ ಮೂರು ತಿಂಗಳು ಕಳೆದರೂ ತಮ್ಮ ಹಣ ವಾಪಸ್ ಮಾಡದ ಕಾರಣ ಪತ್ರ ಮತ್ತು ಮೇಲ್ ಮುಖ್ಯನ ದೂರು ದಾಖಲಿಸಿದರು. ಕೆಲ ದಿನಗಳ ಬಳಿಕ ಇಮೇಲ್ ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್, ಆರ್‌ಬಿಐನ ಒಂಬುಡ್ಸ್ ಮನ್ ಗೆ ದೂರು ನೀಡಲು ಸಲಹೆ ನೀಡಿತ್ತು.

ಆದರೆ ಅಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಹಾಗಾಗಿ ಅಶ್ವಿನಿ ಗ್ರಾಹಕ ನ್ಯಾಯಾಲಯದ ಮೊರೆ ಹೋದರು.

ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿ ಬ್ಯಾಂಕಿಗೆ ಗ್ರಾಹಕರು ಕಳೆದುಕೊಂಡ ಹಣದ ಜೊತೆಗೆ ರೂ. 20000 ಪರಿಹಾರವನ್ನು ನೀಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕಿಗೆ ಆದೇಶ ನೀಡಿದರು.

Ads on article

Advertise in articles 1

advertising articles 2

Advertise under the article