Karnataka HC issue notification on E-filing ಜನವರಿಯಿಂದ ಇ-ಫೈಲಿಂಗ್ ಕಡ್ಡಾಯ: ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
ಜನವರಿಯಿಂದ ಇ-ಫೈಲಿಂಗ್ ಕಡ್ಡಾಯ: ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜನವರಿ 1, 2022ರಿಂದ ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಅಧಿಸೂಚನೆ ಪ್ರಕಟಿಸಿದೆ.
ಸರ್ಕಾರದಿಂದ ಹಾಕಲಾಗುವ ಎಲ್ಲ ಹೊಸ ಪ್ರಕರಣಗಳು, ಅರ್ಜಿಗಳು, ವಾದ ಪತ್ರಗಳು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಇ-ಫೈಲಿಂಗ್ ವ್ಯವಸ್ಥೆಯಡಿ ಬರಬೇಕು ಎಂದು ಹೈಕೋರ್ಟ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅದರ ಎಲ್ಲ ಇಲಾಖೆಗಳು, ಅಧೀನ ಕಚೇರಿಗಳು ಕಡ್ಡಾಯವಾಗಿ ಈ ಅಧಿಸೂಚನೆಯನ್ನು ಪಾಲಿಸಬೇಕು ಎಂದು ಅದು ಹೇಳಿದೆ.
ಕರ್ನಾಟಕ ಎಲೆಕ್ಟ್ರಾನಿಕ್ ಫೈಲಿಂಗ್ (ಇ-ಫೈಲಿಂಗ್) ನಿಯಮಗಳು- 2021 ಜಾರಿಗೆ ಬರುವವರೆಗೆ http://efiling.ecourts.gov.in ಈ ಲಿಂಕ್‌ನ್ನು ಅನುಸರಿಸಿ ದಾಖಲೆ ಹಾಗೂ ವಾದ ಪತ್ರ, ದಾವೆಗಳನ್ನು ಸಲ್ಲಿಸಬಹುದು. ಇದಕ್ಕಾಗಿ ಯಾವುದೇ ಹೆಚ್ಚಿನ ಮಾಹಿತಿಯನ್ನು http://efiling.ecourts.gov.in/help ಲಿಂಕ್ ಕ್ಲಿಕ್ ಮಾಡಿ ಪಡೆಯಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಟಿ.ಜಿ. ಶಿವಶಂಕರೇ ಗೌಡ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ಇ-ಸಮಿತಿ ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಸುತ್ತೋಲೆ ಕಳುಹಿಸಿ ಜನವರಿ 1, 2022ರಿಂದ ಕಡ್ಡಾಯವಾಗಿ ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು.
ಹೆಚ್ಚಿನ ಮಾಹಿತಿಗೆ ಇದನ್ನು ಕ್ಲಿಕ್ ಮಾಡಿ...
ಜನವರಿ 1ರಿಂದ ಭೌತಿಕ ಫೈಲಿಂಗ್‌ಗೆ ಅನುಮತಿ ಇಲ್ಲ: ಸುಪ್ರೀಂ ಕೋರ್ಟ್