-->
Dowry defined SC- ಪತ್ನಿ ಮನೆಯವರಿಂದ ಮನೆ ಕಟ್ಟಲು ದುಡ್ಡು ಕೇಳುವುದು ವರದಕ್ಷಿಣೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Dowry defined SC- ಪತ್ನಿ ಮನೆಯವರಿಂದ ಮನೆ ಕಟ್ಟಲು ದುಡ್ಡು ಕೇಳುವುದು ವರದಕ್ಷಿಣೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪತ್ನಿ ಮನೆಯವರಿಂದ ಮನೆ ಕಟ್ಟಲು ದುಡ್ಡು ಕೇಳುವುದು ವರದಕ್ಷಿಣೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು






ಮನೆ ನಿರ್ಮಾಣ ಮಾಡಲು ಪತ್ನಿಯ ಪೋಷಕರಲ್ಲಿ ಹಣ ಕೇಳುವುದು ಕೂಡ ವರದಕ್ಷಿಣೆ ಬೇಡಿಕೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.



ವರದಕ್ಷಿಣೆ ನಿಷೇಧ ಕಾಯಿದೆ, 1961ರ ಸೆಕ್ಷನ್ 2ರಲ್ಲಿ ವ್ಯಾಖ್ಯಾನಿಸಲಾದ ಆಸ್ತಿ ಅಥವಾ ಯಾವುದೇ ರೀತಿಯ ಮೌಲ್ಯಯುತ ಭದ್ರತೆಗೆ ಸಂಬಂಧಿಸಿದಂತೆ ಮಹಿಳೆಗೆ ಬೇಡಿಕೆ ಇಡುವುದು ವರದಕ್ಷಿಣೆಗೆ ಸಮನಾಗಿರುತ್ತದೆ ಎಂದು ಅದು ತನ್ನ ತೀರ್ಪು ಆದೇಶದಲ್ಲಿ ಹೇಳಿದೆ.


ಮಧ್ಯಪ್ರದೇಶ ಸರ್ಕಾರ ಮತ್ತು ಜೋಗೇಂದ್ರ ಇನ್ನಿತರರು


ಮಧ್ಯಪ್ರದೇಶದಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿದ್ದರು. ಆಕೆಯ ಪತಿ ಮತ್ತು ಮಾವನನ್ನು ದೋಷಮುಕ್ತಗೊಳಿಸಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.



ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಎ ಎಸ್ ಬೋಪಣ್ಣ ಅವರಿದ್ದ ನ್ಯಾಯಪೀಠ, ಐಪಿಸಿ ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನಂತಹ ಅಪರಾಧದ ವಿಚಾರಣೆ ನಡೆಸುವಾಗ "ವರದಕ್ಷಿಣೆ" ಎಂಬ ಪದಕ್ಕೆ ಉದಾರ ಮತ್ತು ವಿಸ್ತಾರ ವ್ಯಾಖ್ಯಾನ ನೀಡಬೇಕು ಎಂದು ಹೇಳಿತು.



ಆರೋಪಿ ಜೊತೆ ಸೇರಿ ಹೆಂಡತಿಯೂ ಮನೆ ನಿರ್ಮಾಣಕ್ಕೆ ಹಣ ಕೇಳಿರುವುದು ವರದಕ್ಷಿಣೆ ಬೇಡಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಮಧ್ಯಪ್ರದೇಶ ಹೈಕೋರ್ಟ್‌ ಅಭಿಪ್ರಾಯ ತಪ್ಪು ಎಂದು ಪೀಠ ತೀರ್ಪಿನಲ್ಲಿ ಹೇಳಿತು.



ಜೊತೆಗೆ, ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನ ಆರೋಪಿಗಳನ್ನು ಖುಲಾಸೆಗೊಳಿಸುವ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು ಹಾಗೂ ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತು.


ಇದೇ ವೇಳೆ, ನಿರ್ಣಾಯಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ಅವರನ್ನು ಖುಲಾಸೆಗೊಳಿಸುವ ಹೈಕೋರ್ಟ್‌ನ ತೀರ್ಪಿನಲ್ಲಿ ಅದು ಮಧ್ಯಪ್ರವೇಶಿಸಲಿಲ್ಲ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200