-->
RTC entry change authority given -RTCಯಲ್ಲಿ ತಪ್ಪಾಗಿ ಸಾಗುವಳಿದಾರರ ಹೆಸರು ಕಳಚಿದರೆ ಯಾ ಸೇರಿಸಿದರೆ ಅಧಿಕಾರಿಗಳೇ ನೇರ ಹೊಣೆ

RTC entry change authority given -RTCಯಲ್ಲಿ ತಪ್ಪಾಗಿ ಸಾಗುವಳಿದಾರರ ಹೆಸರು ಕಳಚಿದರೆ ಯಾ ಸೇರಿಸಿದರೆ ಅಧಿಕಾರಿಗಳೇ ನೇರ ಹೊಣೆ

RTCಯಲ್ಲಿ ತಪ್ಪಾಗಿ ಸಾಗುವಳಿದಾರರ ಹೆಸರು ಕಳಚಿದರೆ ಯಾ ಸೇರಿಸಿದರೆ ಅಧಿಕಾರಿಗಳೇ ನೇರ ಹೊಣೆ

ರಾಜ್ಯ ಸರ್ಕಾರದ ಭೂಮಾಪನ ಇಲಾಖೆ ಮತ್ತು ಭೂಮಿ ಉಸ್ತುವಾರಿ ಕೋಶ ಬೆಂಗಳೂರು ಇವರು ದಿನಾಂಖ 14-01-2022ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, RTC ಕುರಿತಂತೆ ಮಹತ್ವದ ಆದೇಶವನ್ನು ಮಾಡಿದ್ದಾರೆ.


(BMC-12015/97/2021 E 584261 dated 14-01-2022)ಪಹಣಿ ಅಥವಾ ಆರ್ ಟಿ ಸಿ ಯಲ್ಲಿ ಸಾಗುವಳಿದಾರರ ಹೆಸರನ್ನು ತಪ್ಪಾಗಿ ದಾಖಲಿಸಿದರೆ ಅಥವಾ ರದ್ದುಪಡಿಸಿದರೆ ಇದಕ್ಕೆ ಸಂಬಂಧಿತ ಅಧಿಕಾರಿಗಳೇ ನೇರವಾಗಿ ಹೊಣೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.ಪಹಣಿ ಕಾಲಮ್ ನಂಬರ್ 12(2) ರಲ್ಲಿ ಸಾಗುವಳಿದಾರರು ಯಾ ಕಲ್ಟಿವೇಟರ್ ಹೆಸರು ದಾಖಲಿಸಲು ಹಾಗೂ ತಪ್ಪಾಗಿ ದಾಖಲಾಗಿರುವ ಸಾಗುವಳಿದಾರರ ಹೆಸರು ರದ್ದುಪಡಿಸಲು ಅವಕಾಶ ಕಲ್ಪಿಸುವಂತೆ ಕೋರಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಪತ್ರಗಳು ಬಂದಿರುತ್ತದೆ.


ಈ ಹಿನ್ನೆಲೆಯಲ್ಲಿ ಆರ್ ಟಿ ಸಿ ಮ್ಯಾನೇಜ್ಮೆಂಟ್ ತಂತ್ರಾಂಶದಲ್ಲಿ ಸಾಗುವಳಿದಾರರ ಹೆಸರನ್ನು ದಾಖಲಿಸಲು ಅಥವಾ ತೆಗೆಯಲು ಅವಕಾಶವಾಗುವಂತೆ ಲಿಟೇಶನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.ಭೂಮಿ ತಂತ್ರಾಂಶದ ದಾಖಲೆಯು ಮಹತ್ವದ ದಾಖಲೆಯಾಗಿದೆ. ಈ ತಂತ್ರಾಂಶದಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ ಕೊಂಡು ಜಾಗರೂಕತೆಯಿಂದ ಪಹಣಿಯಲ್ಲಿ ದಾಖಲಾಗಿರುವ ಸಾಗುವಳಿದಾರರ ಹೆಸರನ್ನು ತಿದ್ದುಪಡಿ ಮಾಡುವಂತೆ ತಮ್ಮ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ಪಹಣಿಯಲ್ಲಿ ಸಾಗುವಳಿದಾರರ ಹೆಸರನ್ನು ತಪ್ಪಾಗಿ ದಾಖಲಿಸಿದ್ದರೆ ಅಥವಾ ರದ್ದುಪಡಿಸಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ.


Ads on article

Advertise in articles 1

advertising articles 2

Advertise under the article