-->
Mobile permitted to used in vertual trial- ಇನ್ನು ವರ್ಚುವಲ್ ಕಲಾಪದಲ್ಲಿ ಮೊಬೈಲ್ ಬಳಸಬಹುದು- ಸುಪ್ರೀಂ ಕೋರ್ಟ್ ಸುತ್ತೋಲೆ

Mobile permitted to used in vertual trial- ಇನ್ನು ವರ್ಚುವಲ್ ಕಲಾಪದಲ್ಲಿ ಮೊಬೈಲ್ ಬಳಸಬಹುದು- ಸುಪ್ರೀಂ ಕೋರ್ಟ್ ಸುತ್ತೋಲೆ

ಇನ್ನು ವರ್ಚುವಲ್ ಕಲಾಪದಲ್ಲಿ ಮೊಬೈಲ್ ಬಳಸಬಹುದು- ಸುಪ್ರೀಂ ಕೋರ್ಟ್ ಸುತ್ತೋಲೆ


  • ಸುಪ್ರೀಂ ಕೋರ್ಟ್ ವಕೀಲರ ಸಂಘದ ಮನವಿಗೆ ಸ್ಪಂದನೆ

  • ನ್ಯಾಯ ವಿಚಾರಣೆಯ ವರ್ಚುವಲ್ ಕಲಾಪದಲ್ಲಿ ಮೊಬೈಲ್ ಬಳಕೆ ಅಬಾಧಿತ

  • ಲ್ಯಾಪ್‌ಟಾಪ್ ರಹಿತ ವಕೀಲರಿಗೆ ಅವಕಾಶ ನೀಡಿದ ಸಿಜೆಐ ಎನ್.ವಿ. ರಮಣ





ನ್ಯಾಯಾಲಯದ ವರ್ಚುವಲ್ ಕಲಾಪದಲ್ಲಿ ಲ್ಯಾಪ್‌ಟಾಪ್‌ ಯಾ ಡೆಸ್ಕ್‌ಟಾಪ್‌ ಇಲ್ಲದ ವಕೀಲರು ಮೊಬೈಲ್‌ ಫೋನ್‌ ಬಳಸಿ ವಿಚಾರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸುತ್ತೋಲೆ ಹೊರಡಿಸಿದೆ.



ನ್ಯಾಯಾಲಯ ಕಲಾಪ ಅಬಾಧಿತವಾಗಿ ನಡೆಯಬೇಕು ಎಂಬ ಸುಪ್ರೀಂ ಕೋರ್ಟ್ ಮನವಿಗೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ, ವಕೀಲರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.



ವರ್ಚುವಲ್ ಕಲಾಪಕ್ಕೆ ವಕೀಲರ ಮೊಬೈಲ್‌ ಬಳಕೆ ನಿಷೇಧಿಸುವ ಚಿಂತನೆ ಮಾಡಿದ್ದ ನ್ಯಾಯಪೀಠದ ಸುತ್ತೋಲೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಕೀಲರ ಸಂಘ (SCAORA) ವಿಶೇಷ ವರ್ಚುವಲ್‌ ನಡೆಸಿತು. ಈ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಿ ಮೊಬೈಲ್‌ ಬಳಸಲು ಸಿಜೆಐ ಅನುವು ಮಾಡಿಕೊಟ್ಟರು.


ಸಿಜೆಐ ರಮಣ ನೀಡಿದ ಸಲಹೆಗಳು ಇವು...:


+ ಕಲಾಪದಲ್ಲಿ ಪಾಲ್ಗೊಳ್ಳುವ ವಕೀಲರು ಮೊಬೈಲ್ ಬಳಸಬಹುದು.. ಆದರೆ,


+ ವಿಚಾರಣೆ ವೇಳೆ ಮೊಬೈಲನ್ನು ಕೈಯಲ್ಲಿ ಹಿಡಿಯದೆ ಒಂದೆಡೆ ಸ್ಥಿರವಾಗಿ ಇಡಬೇಕು


+ ವಕೀಲರ ಮುಖ ಪರದೆ ಮೇಲೆ ಕಾಣುವಂತಿರಬೇಕು


+ ವಕೀಲರ ಧ್ವನಿ ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು


ಪ್ರಕರಣಗಳ ಮೌಖಿಕ ಪ್ರಸ್ತಾವನೆ ಈಗಾಗಲೇ ಎಲ್ಲಾ ನ್ಯಾಯಾಲಯಗಳಲ್ಲಿ ಲಭ್ಯವಿದೆ. ನ್ಯಾಯಪೀಠಗಳ ಮುಂದೆ ತಮ್ಮ ಪ್ರಕರಣ ಪ್ರಸ್ತಾಪಿಸುವಾಗ ವಕೀಲರು ಸಂಬಂಧಪಟ್ಟ ನ್ಯಾಯಾಲಯದ ಮಾಸ್ಟರ್‌ ಅವರನ್ನು ಸಂಪರ್ಕಿಸಬಹುದು ಎಂದು ಸಿಜೆಐ ರಮಣ ಭರವಸೆ ನೀಡಿದರು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200