-->
4 bills passed in 15 minutes - 15 ನಿಮಿಷದಲ್ಲಿ 4 ಮಸೂದೆ ಅಂಗೀಕಾರ: ಕರ್ನಾಟಕ ವಿಧಾನ ಪರಿಷತ್ ಸಾಧನೆ

4 bills passed in 15 minutes - 15 ನಿಮಿಷದಲ್ಲಿ 4 ಮಸೂದೆ ಅಂಗೀಕಾರ: ಕರ್ನಾಟಕ ವಿಧಾನ ಪರಿಷತ್ ಸಾಧನೆ

15 ನಿಮಿಷದಲ್ಲಿ 4 ಮಸೂದೆ ಅಂಗೀಕಾರ: ಕರ್ನಾಟಕ ವಿಧಾನ ಪರಿಷತ್ ಸಾಧನೆ



ಕರ್ನಾಟಕ ವಿಧಾನ ಪರಿಷತ್ ಕಳೆದ ವಾರ ಕೇವಲ ಹದಿನೈದು ನಿಮಿಷದಲ್ಲಿ 4 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಹೊಸ ಸಾಧನೆ(?)ಯನ್ನು ಮಾಡಿದೆ.

ಯಾವುದೇ ಚರ್ಚೆಯಿಲ್ಲದೆ ಪ್ರಶ್ನೋತ್ತರ ಕಲಾಪದಲ್ಲಿ ತರಾತುರಿಯಲ್ಲಿ ಈ ಕೆಲಸವನ್ನು ಮುಗಿಸಿ ಸರಕಾರ ಕೈತೊಳೆದುಕೊಂಡಿದೆ.

ಪ್ರತಿಪಕ್ಷಗಳ ಧರಣಿ ಧಿಕ್ಕಾರ ಘೋಷಣೆಗಳನ್ನು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಸೂದೆ ಮಂಡಿಸಿ ಅನುಮೋದನೆ ಪಡೆದುಕೊಂಡರು.


1) ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ_ ಮಸೂದೆ 2022 


2) ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ಮಸೂದೆ 2022


3) ಕರ್ನಾಟಕ ಸ್ಟ್ಯಾಂಪ್ (2ನೇ ತಿದ್ದುಪಡಿ) ಮಸೂದೆ 2022


4) ಕ್ರಿಮಿನಲ್ ಕಾನೂನು ತಿದ್ದುಪಡಿ ಆಧ್ಯಾದೇಶ 1944 (ಕರ್ನಾಟಕ ತಿದ್ದುಪಡಿ) ಮಸೂದೆ 2022


ಈ ಮೇಲಿನ ನಾಲ್ಕು ಮಸೂದೆಗಳನ್ನು ಕೇವಲ 15 ನಿಮಿಷದಲ್ಲಿ ಅಂಗೀಕಾರ ಮಾಡಲಾಯಿತು ಕೆಪಿಎಸ್ಸಿ ಮಸೂದೆ ಹೊರತುಪಡಿಸಿ ಬೇರೆ ಯಾವ ಮಸೂದೆಯ ಬಗ್ಗೆಯೂ ಚರ್ಚೆ ನಡೆದಿಲ್ಲ ಎಂಬುದು ಗಮನಾರ್ಹ.

Ads on article

Advertise in articles 1

advertising articles 2

Advertise under the article