-->
Career as APP for Advocates- ಮಂಗಳೂರು: ಸಹಾಯಕ ಸರ್ಕಾರಿ ವಕೀಲರ ಹುದ್ದೆಗೆ ವಕೀಲರಿಂದ ಅರ್ಜಿ ಆಹ್ವಾನ

Career as APP for Advocates- ಮಂಗಳೂರು: ಸಹಾಯಕ ಸರ್ಕಾರಿ ವಕೀಲರ ಹುದ್ದೆಗೆ ವಕೀಲರಿಂದ ಅರ್ಜಿ ಆಹ್ವಾನ

ಮಂಗಳೂರು: ಸಹಾಯಕ ಸರ್ಕಾರಿ ವಕೀಲರ ಹುದ್ದೆಗೆ ವಕೀಲರಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು ಸಹಾಯಕ ಸರಕಾರಿ ವಕೀಲರುಗಳ ಹುದ್ದೆಗೆ ನೇಮಕಾತಿ ಆರಂಭವಾಗಿದೆ.ಈ ಹುದ್ದೆ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದ್ದು, ತಾತ್ಕಾಲಿಕ ನೆಲೆಯ ನೇಮಕಾತಿಯಾಗಿರುತ್ತದೆ.

ಕನಿಷ್ಟ ಮೂರು ವರ್ಷ ಅಥವಾ ಹೆಚ್ಚಿನ ಅವಧಿ ವಕೀಲರಾಗಿ ವೃತ್ತಿ ನಡೆಸಿದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆಆಸಕ್ತರು ತಮ್ಮ ಅರ್ಜಿಗಳನ್ನು ನೇರವಾಗಿ ಸಲ್ಲಿಸಬಹುದು. ಅರ್ಜಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಲಭ್ಯವಿದೆ.ಅದೇ ರೀತಿ, ದ.ಕ. ಜಿಲ್ಲೆಯ ನ್ಯಾಯಾಲಯಗಳ ವಕೀಲರ ಸಂಘದ ಕಚೇರಿಯಲ್ಲಿ ಹಾಗೂ ಸದಸ್ಯ ಕಾರ್ಯದರ್ಶಿ ಸರಕಾರಿ ಅಭಿಯೋಜಕರು ಮಂಗಳೂರು ಇವರ ಕಚೇರಿಯಲ್ಲಿ ಲಭ್ಯವಿರುತ್ತದೆಹೆಚ್ಚಿನ ಮಾಹಿತಿ ಇರುವ ಪತ್ರವನ್ನು ದಕ್ಷಿಣಕನ್ನಡ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘದಲ್ಲಿ ತಾಲೂಕು ಮಟ್ಟದ ನ್ಯಾಯಾಲಯಗಳ ಹಾಗೂ ವಕೀಲರ ಸಂಘದ ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿದೆ. ಹಾಗೂ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ ಕೂಡ ಮಾಹಿತಿ ಪಡೆಯಬಹುದು.ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 07-03-2022


ಅರ್ಜಿ ಸಲ್ಲಿಸುವ ವಿಳಾಸ:

ಸರಕಾರಿ ಅಭಿಯೋಜಕರ ನೇಮಕಾತಿ ಸಮಿತಿ

ಸರಕಾರಿ ಅಭಿಯೋಜಕರು

ಜಿಲ್ಲಾ ನ್ಯಾಯಾಲಯದ ಆವರಣ, ಮಂಗಳೂರು

ಇವರಿಗೆ ಅರ್ಜಿಗಳನ್ನು ಸಲ್ಲಿಸಬಹುದು.

Ads on article

Advertise in articles 1

advertising articles 2

Advertise under the article