-->
Judicial Defamation- Bail Actor Chethan- ನ್ಯಾಯಾಂಗ ನಿಂದನೆ: ನಟ ಚೇತನ್‌ಗೆ ಜಾಮೀನು- ಪ್ರಕರಣದ ಸುತ್ತ ಸಮಗ್ರ ವರದಿ

Judicial Defamation- Bail Actor Chethan- ನ್ಯಾಯಾಂಗ ನಿಂದನೆ: ನಟ ಚೇತನ್‌ಗೆ ಜಾಮೀನು- ಪ್ರಕರಣದ ಸುತ್ತ ಸಮಗ್ರ ವರದಿ

ನ್ಯಾಯಾಂಗ ನಿಂದನೆ: ನಟ ಚೇತನ್‌ಗೆ ಜಾಮೀನು- ಪ್ರಕರಣದ ಸುತ್ತ ಸಮಗ್ರ ವರದಿ





ಎಡಪಂಥೀಯ ವಿಚಾರಧಾರೆ ಮೂಲಕ ಭಾರೀ ಸುದ್ದಿ ಮಾಡುತ್ತಿರುವ ಚಿತ್ರ ನಟ ಚೇತನ್‌ ನ್ಯಾಯಾಂಗದ ಬಗ್ಗೆ, ಪೀಠಾಸೀನ ಅಧಿಕಾರಿ ವಿರುದ್ಧ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆಯ ಆರೋಪಕ್ಕೆ ಒಳಗಾಗಿದ್ದಾರೆ.




ಅವರ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನಟ ಚೇತನ್ ಅವರನ್ನು ಬಂಧಿಸಿದ್ದು, ವಿಚಾರಣೆಯ ಬಳಿಕ ಬೆಂಗಳೂರಿನ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನಟ ಚೇತನ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ.




ವಿಶ್ವದ ಗಮನ ಸೆಳೆದಿರುವ ಹಿಜಬ್ ಪ್ರಕರಣ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠದಲ್ಲಿ ನ್ಯಾಯಮೂರ್ತಿಯಾಗಿರುವ ಕೃಷ್ಣ ಎಸ್‌. ದೀಕ್ಷಿತ್‌ ಅವರ ಬಗ್ಗೆ ನಟ ಚೇತನ್ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು.




ನಟ ಚೇತನ್‌ಗೆ ಜಾಮೀನು ಮಂಜೂರು ಮಾಡಿದ 40ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆಗಳನ್ನು ಒದಗಿಸುವಂತೆ ಆದೇಶಿಸಿದೆ.




"ಇಂತಹ ಮತ್ತೊಂದು ಕೃತ್ಯಕ್ಕೆ ಚೇತನ್‌ ಮುಂದಾಗಬಾರದು. ಕೋಮ ಸಾಮರಸ್ಯ ಕದಡುವ ಹೇಳಿಕೆ, ಪೋಸ್ಟ್‌ ಅಥವಾ ಮಾನಹಾನಿಕರ / ಪ್ರಚೋದನಕಾರಿ ಹೇಳಿಕೆ ನೀಡಬಾರದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು. ಪ್ರಕರಣದ ತನಿಖೆಗೆ ಸಹರಿಸಬೇಕು ಮತ್ತು ನಿಗದಿತ ದಿನದಂದು ವಿಚಾರಣೆಗೆ ಹಾಜರಾಗಬೇಕು" ಎಂದು ಜಾಮೀನು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.




"ಚೇತನ್‌ ಟ್ವೀಟ್ ಮಾಡಿರುವ ಸಂದೇಶದಲ್ಲಿ ಯಾವುದೇ ಮಾನಹಾನಿ, ಬೆದರಿಕೆ, ಅವಾಚ್ಯ ಅಥವಾ ಅಶ್ಲೀಲ ಅಂಶಗಳು ಇಲ್ಲ. ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಚೇತನ್‌ ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಅವರು ತನಿಖೆಗೆ ಸಹಕರಿಸುವುದಿಲ್ಲ ಎನ್ನಲಾಗದು. ಹಾಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ಮನವಿ ಮಾಡಿದ್ದರು.



ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, "ಆರೋಪಿ ಚೇತನ್ ಅವರ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ತನಿಖೆ ನಡೆಸಬೇಕಿದೆ. ಹೀಗಾಗಿ, ಜಾಮೀನು ಮಂಜೂರು ನೀಡಬಾರದು" ಎಂದು ಪ್ರತಿವಾದ ಮಂಡಿಸಿದರು.



"ರೇಪ್ ಪ್ರಕರಣದ ಕುರಿತಂತೆ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ದೀಕ್ಷಿತ್‌ ಅವರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್‌ ಧರಿಸುವ ಕುರಿ ವಿವಾದವನ್ನು ನಿರ್ಧರಿಸಲಿದ್ದಾರೆ. ನ್ಯಾ. ದೀಕ್ಷಿತ್‌ ಅವರಿಗೆ ಅದನ್ನು ನಿರ್ಧರಿಸಲು ಅಗತ್ಯವಾದ ಸ್ಪಷ್ಟತೆ ಇದೆಯೇ?...'' ಎಂದು ಚೇತನ್‌ ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಶ್ನಿಸಿದ್ದರು.



ಟ್ವೀಟ್ ಸಂದೇಶಕ್ಕಾಗಿ ಚೇತನ್‌ ವಿರುದ್ಧ IPC ಸೆಕ್ಷನ್ 505(2) (ಕೋಮುಗಳ ನಡುವೆ ವೈಷಮ್ಯ ಸೃಷ್ಟಿ), 504 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಆ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು) ಅಡಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದರು.


ನ್ಯಾ. ಕೃಷ್ಣ ದೀಕ್ಷಿತ್ ಅವರು ಹೇಳಿದ್ದೇನು?


ಅತ್ಯಾಚಾರ ಯತ್ನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ, ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸುಸ್ತಾಗಿ, ನಿದ್ರೆಗೆ ಜಾರಿದ್ದಾಗಿ ಸಂತ್ರಸ್ತೆ ಹೇಳಿದ್ದನ್ನು ಆಲಿಸಿದ ನ್ಯಾ. ದೀಕ್ಷಿತ್, "ಈ ಮಾತು ನಮ್ಮ ಭಾರತೀಯ ಮಹಿಳೆಯರಿಗೆ ಹೊಂದುವಂಥದ್ದಲ್ಲ. ಅತ್ಯಾಚಾರಕ್ಕೆ ಗುರಿಯಾದಾಗ ಮಹಿಳೆಯರು ವರ್ತಿಸುವ ರೀತಿ ಅದಲ್ಲ" ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು.


ಈ ಮಾತಿಗೆ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ, ನ್ಯಾ. ದೀಕ್ಷಿತ್‌ ಅವರ ಅಭಿಪ್ರಾಯವನ್ನು ಸದ್ರಿ ಆದೇಶದಿಂದ ಬಿಡಲಾಗಿತ್ತು.

Ads on article

Advertise in articles 1

advertising articles 2

Advertise under the article