-->
Court notice to PMO- ಸೇನಾ ಸಮವಸ್ತ್ರ ಧರಿಸಿ ಮೋದಿ ಅಪರಾಧ ಎಸಗಿದರೇ...?: ಪ್ರಧಾನಿ ಕಚೇರಿಗೆ ಕೋರ್ಟ್ ನೋಟೀಸ್

Court notice to PMO- ಸೇನಾ ಸಮವಸ್ತ್ರ ಧರಿಸಿ ಮೋದಿ ಅಪರಾಧ ಎಸಗಿದರೇ...?: ಪ್ರಧಾನಿ ಕಚೇರಿಗೆ ಕೋರ್ಟ್ ನೋಟೀಸ್

ಸೇನಾ ಸಮವಸ್ತ್ರ ಧರಿಸಿ ಮೋದಿ ಅಪರಾಧ ಎಸಗಿದರೇ...?: ಪ್ರಧಾನಿ ಕಚೇರಿಗೆ ಕೋರ್ಟ್ ನೋಟೀಸ್





ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇನಾ ಸಮವಸ್ತ್ರ ಧರಿಸಿ ಅಪರಾಧ ಎಸಗಿದರೇ ಎಂಬ ವಿಚಾರ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯಕ್ಕೆ ಉತ್ತರ ಪ್ರದೇಶ ನ್ಯಾಯಾಲಯ ಕಾನೂನು ರೀತ್ಯಾ ನೋಟಿಸ್ ಜಾರಿಗೊಳಿಸಿದೆ.




2021ರಲ್ಲಿ ಪ್ರಧಾನಿ ಮೋದಿ ಅವರು ಕಾಶ್ಮೀರದ ನೌಶೇರಾಗೆ ಭೇಟಿ ನೀಡಿದ್ದ ವೇಳೆ ಅವರು ಸೇನೆಯ ಸಮವಸ್ತ್ರವನ್ನು ಧರಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 140ರ ಅಡಿ ಅಪರಾಧವಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.




ಪ್ರಧಾನಿಯವರು ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿತು.



ಸ್ಥಳೀಯ ವಕೀಲರಾದ ರಾಕೇಶ್ ನಾಥ್ ಪಾಂಡೆ ಎಂಬವರು CrPC ಸೆಕ್ಷನ್‌ 156(3)ರ ಅಡಿ ದಾಖಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಪ್ರಯಾಗ್‌ರಾಜ್‌ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್‌ ಜಾರಿಗೊಳಿಸಿದ್ದಾರೆ.



ಅಪರಾಧಿಕ ಕಾನೂನು ಸಂಹಿತೆ ಕಲಂ‌ 156(3) ಅಡಿ ಸಂಜ್ಞೇಯ ಪ್ರಕರಣಗಳಲ್ಲಿ ತನಿಖೆ ನಡೆಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ ಹೊಂದಿದ್ದಾರೆ.



ಇದಕ್ಕೂ ಮುನ್ನ, ಅರ್ಜಿದಾರರು ಸಿಜೆಎಂ ನ್ಯಾಯಾಲಯದ ಮುಂದೆ ದೂರು ಅರ್ಜಿ ಸಲ್ಲಿಸಿದ್ದರು. ಅದರೆ, ಇದು ತಮ್ಮ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣದ ನಡೆದಿಲ್ಲ. ಆದ್ದರಿಂದ ಅದರ ಕಾಗ್ನಿಝೆನ್ಸ್‌ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಆದೇಶಿಸಿದ್ದರು. ಮತ್ತು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಹೊಂದಿರುವ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ತಿಳಿಸಿದ್ದರು.



ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಜಿಲ್ಲಾ ನ್ಯಾಯಾಧೀಶರ ಮೊರೆ ಹೋಗಿದ್ದರು ಎಂದು 'ಅಮರ್‌ ಉಜಾಲಾ' ಪತ್ರಿಕೆ ವರದಿ ತಿಳಿಸಿದೆ.





Ads on article

Advertise in articles 1

advertising articles 2

Advertise under the article