-->
New SOP 7-02-2022 - ರಾಜ್ಯದಲ್ಲಿ ಕೋರ್ಟ್ ಕಲಾಪ ನಿರ್ಬಂಧ ಸಡಿಲಿಕೆ- ಹೈಕೋರ್ಟ್‌ನಿಂದ ಹೊಸ ನಿಯಮ ಜಾರಿ

New SOP 7-02-2022 - ರಾಜ್ಯದಲ್ಲಿ ಕೋರ್ಟ್ ಕಲಾಪ ನಿರ್ಬಂಧ ಸಡಿಲಿಕೆ- ಹೈಕೋರ್ಟ್‌ನಿಂದ ಹೊಸ ನಿಯಮ ಜಾರಿ

ರಾಜ್ಯದಲ್ಲಿ ಕೋರ್ಟ್ ಕಲಾಪ ನಿರ್ಬಂಧ ಸಡಿಲಿಕೆ- ಹೈಕೋರ್ಟ್‌ನಿಂದ ಹೊಸ ನಿಯಮ ಜಾರಿ






ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾದ ಕಾರಣ ಹೈಕೋರ್ಟ್ ನ್ಯಾಯಪೀಠ ಮತ್ತು ರಾಜ್ಯದ ವಿವಿಧ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಕಲಾಪಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಸಡಿಲಿಸಿದೆ. ನೂತನ SOP ನಿಯಮಗಳು ಫೆ. 7ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ.



ಹೊಸ ಎಸ್ಓಪಿ ಏನೇನಿದೆ?

ಆನ್ ಲೈನ್ ಮತ್ತು ಭೌತಿಕ ಕಲಾಪಗಳನ್ನು ಹೈಕೋರ್ಟ್ ಪೀಠಗಳು ನಡೆಸಲಿವೆ. ರಾಜಧಾನಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ವಕೀಲರು ಹಾಗೂ ವೈಯಕ್ತಿಕ ಪಕ್ಷಕಾರರಿಗೆ ಮಾತ್ರ ನ್ಯಾಯಾಲಯ ಪ್ರವೇಶ ಅವಕಾಶ ಇದೆ. ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಜಾರಿಯಲ್ಲಿರುತ್ತವೆ.



ಕೋರ್ಟ್ ಪ್ರವೇಶಿಸುವಾಗ ವೈಯಕ್ತಿಕ ಪಕ್ಷಕಾರರು ತಮ್ಮ ಪ್ರಕರಣ ವಿಚಾರಣೆಗೆ ನಿಗದಿಯಾಗಿರುವುದನ್ನು ಪ್ರವೇಶ ದ್ವಾರದಲ್ಲಿ ಸ್ಪಷ್ಟಪಡಿಸಬೇಕಾಗಿದೆ. ಕಕ್ಷಿದಾರರು ನ್ಯಾಯಾಲಯದ ನಿರ್ದೇಶನ ಇದ್ದರೆ ಯಾ ಅನುಮತಿ ಇದ್ದರೆ ಅದಕ್ಕೆ ಸೂಕ್ತ ದಾಖಲೆ ತೋರಿಸಿ ಕೋರ್ಟ್ ಪ್ರವೇಶಿಸಬೇಕಿದೆ.



ಕೋರ್ಟ್ ಆವರಣ ಪ್ರವೇಶಿಸುವ ಎಲ್ಲರೂ N-95 ಮಾಸ್ಕ್ ಸಹಿತ 2 ಮಾಸ್ಕ್ ಹಾಕಬೇಕು. ಕೋರ್ಟ್ ಸಿಬ್ಬಂದಿಗೆ ಗ್ಲೌಸ್ ಕಡ್ಡಾಯ.



ಅರ್ಜಿ ಸಲ್ಲಿಸುವ ನಿಯಮಗಳು

ಪ್ರಕರಣಗಳನ್ನು ಇ-ಫೈಲಿಂಗ್ ಜತೆಗೆ ಭೌತಿಕವಾಗಿಯೂ ದಾಖಲಿಸಬಹುದಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಫೈಲಿಂಗ್ ಮಾಡಲು ಅವಕಾಶ ನೀಡಲಾಗಿದೆ. ತುರ್ತು ಅರ್ಜಿ ಸಲ್ಲಿಕೆಗೆ 2 ಕೌಂಟರ್ ಗಳು ಸಂಜೆ 4.30ರವರೆಗೆ ತೆರೆಯಲಿವೆ.



ಪ್ರಕರಣದ ತುರ್ತು ವಿಚಾರಣೆ ಇದ್ದರೆ ನಿಗದಿತ ಕೌಂಟರ್ ನಲ್ಲಿ ಮೆಮೋ ಸಲ್ಲಿಸಬೇಕು. ಈ ಮೆಮೋವನ್ನು ಐಎ ಎಂದು ಪರಿಗಣಿಸಿ ಅದನ್ನು ಸಲ್ಲಿಸಿದ ಮೂರನೇ ದಿನ ಪೀಠದ ಎದುರು ಇರಿಸಲಾಗತ್ತದೆ. ಇದರ ಹೊರತಾಗಿಯೂ ತುರ್ತು ಪ್ರಕರಣಗಳಿದ್ದಲ್ಲಿ ಮೆಮೋವನ್ನು ತುರ್ತಿನ ಕುರಿತು ವಿವರಿಸುವುದರ ಜತೆಗೆ ನಿಗದಿತ ಪೀಠದಲ್ಲಿಯೇ ಸಲ್ಲಿಸಬಹುದಾಗಿದೆ.


ಪ್ರಕರಣಗಳ ವಿಚಾರಣೆಗೆ ಕಾಲಮಿತಿ ನಿಗದಿ

CrPC ಸೆಕ್ಷನ್ 438, 439 ಹಾಗೂ 482 ಅಡಿ ಸಲ್ಲಿಸುವ ಕ್ರಿಮಿನಲ್ ಅರ್ಜಿಗಳು, ಸಂವಿಧಾನದ ವಿಧಿ 226 R/w 482 ಅಡಿ ಸಲ್ಲಿಸುವ ರಿಟ್ ಅರ್ಜಿಗಳು, ಕ್ರಿಮಿನಲ್ ಅಪೀಲ್ ಮತ್ತು ಕ್ರಿಮಿನಲ್ ರಿವಿಷನ್ ಪಿಟಿಷನ್ ಗಳು ಅವುಗಳನ್ನು ಸಲ್ಲಿಸಿದ ನಾಲ್ಕನೇ ದಿನ ಪೀಠದ ಎದುರು ಬರಲಿವೆ. ಎಲ್ಲ ರಿಟ್ ಅರ್ಜಿಗಳು ಹಾಗೂ ಸಿವಿಲ್ ಪ್ರಕರಣಗಳು ಅವುಗಳನ್ನು ದಾಖಲಿಸಿದ 5ನೇ ದಿನ ಪೀಠದ ಎದುರು ನಿಗದಿಪಡಿಸಲಾಗುತ್ತದೆ ಎಂದು ಎಸ್ಒಪಿ ಹೇಳಿದೆ. ಕೋರ್ಟ್ ಶುಲ್ಕವನ್ನು ಹೈಕೋರ್ಟ್ ವೆಬ್ ಸೈಟ್ ಅಥವಾ ಆನ್ ಲೈನ್ ಮೂಲಕ ಇಲ್ಲವೇ ನೇರವಾಗಿ ಕೌಂಟರ್ ನಲ್ಲಿ ಪಾವತಿಸಬಹುದಾಗಿದೆ.



ವಕೀಲರ ಸಂಘ, ಕ್ಯಾಂಟೀನ್‌ಗೆ ಅವಕಾಶ

ನೋಟರಿ ಹಾಗೂ ಓತ್ ಕಮಿಷನರ್ ಅವರಿಗೆ ಪಾರ್ಕಿಂಗ್ ಜಾಗದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ. ಕಚೇರಿ ಆಕ್ಷೇಪಣೆ ಸರಿಪಡಿಸಲು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10.30ರಿಂದ ಸಂಜೆ 4.30 ಮತ್ತು ಶನಿವಾರದಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಅವಕಾಶ.



ಈ ಅವಧಿಯಲ್ಲಿ ವಕೀಲರು ಅಥವಾ ವೈಯಕ್ತಿಕ ಪಕ್ಷಕಾರರು 15ರಿಂದ 30 ನಿಮಿಷಗಳಲ್ಲಿ ಫೈಲ್ ಹಿಂದಿರುಗಿಸಲು ಸೂಚಿಸಲಾಗಿದೆ. ವಕೀಲರ ಸಂಘ ಹಾಗೂ ಕ್ಯಾಂಟೀನ್ ನಿರ್ವಹಣೆಗೆ ಅನುಮತಿ. ಕೋರ್ಟ್ ಹಾಲ್ ಗಳಲ್ಲಿ ಲಭ್ಯವಿರುವ ಕುರ್ಚಿಗಳಲ್ಲಿ ಶೇ 50 ರಷ್ಟು ಬಳಕೆಗೆ ಮಾತ್ರ ಅವಕಾಶ.



ವಿಚಾರಣಾ ನ್ಯಾಯಾಲಯಗಳಲ್ಲಿ ಮೊದಲಿನಂತೆ ಕಲಾಪ

ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮೊದಲಿನಂತೆ ಕಾರ್ಯಕಲಾಪ ನಡೆಯಲಿದೆ. ಆದರೆ, ಕಕ್ಷೀದಾರರು ಅನಗತ್ಯವಾಗಿ ಕೋರ್ಟ್ ಗೆ ಬರದಂತೆ ವಕೀಲರು ನೋಡಿಕೊಳ್ಳುವಂತೆ ಸೂಚಿಸಲಾಗಿದೆ.



ಅಗತ್ಯ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಆವರಣದಿಂದ ಹೊರಹಾಕಬಹುದು ಎಂದೂ ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ.




Ads on article

Advertise in articles 1

advertising articles 2

Advertise under the article