-->
Hijab issue transferred to larger bench of Ktk HC-  ಹಿಜಾಬ್ ವಿವಾದ: ತ್ರಿಸದಸ್ಯ ವಿಸ್ತೃತ ಪೀಠಕ್ಕೆ ವಿಚಾರಣೆಯ ಹೊಣೆ- ಹೈಕೋರ್ಟ್ ನೀಡಲಿದೆ ಮಹತ್ವದ ತೀರ್ಪು

Hijab issue transferred to larger bench of Ktk HC- ಹಿಜಾಬ್ ವಿವಾದ: ತ್ರಿಸದಸ್ಯ ವಿಸ್ತೃತ ಪೀಠಕ್ಕೆ ವಿಚಾರಣೆಯ ಹೊಣೆ- ಹೈಕೋರ್ಟ್ ನೀಡಲಿದೆ ಮಹತ್ವದ ತೀರ್ಪು

ಹಿಜಾಬ್ ವಿವಾದ: ತ್ರಿಸದಸ್ಯ ವಿಸ್ತೃತ ಪೀಠಕ್ಕೆ ವಿಚಾರಣೆಯ ಹೊಣೆ- ಹೈಕೋರ್ಟ್ ನೀಡಲಿದೆ ಮಹತ್ವದ ತೀರ್ಪು





ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಬೇಕೆ ಎಂಬ ವಿಚಾರದ ಬಗ್ಗೆ ನ್ಯಾಯ ತೀರ್ಮಾನ ಮಾಡಲು ಹೈಕೋರ್ಟ್ ಮೂರು ಸದಸ್ಯರ ವಿಶೇಷ ಪೀಠ ರಚನೆ ಮಾಡಿದೆ.



ವಿಸ್ತೃತ ತ್ರಿಸದಸ್ಯ ಪೀಠದಲ್ಲಿ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರ ರಚಿಸಲಾಗಿದೆ.



ಪಿಯು ಕಾಲೇಜಿನಲ್ಲಿ ಸಮವಸ್ತ್ರ ಜೊತೆ ಹಿಜಾಬ್ ನಿರ್ಬಂಧ ವಿರುದ್ಧ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಸಲ್ಲಿಸಿರುವ 3 ರಿಟ್ ಅರ್ಜಿಗಳನ್ನು ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು.



ಈ ಪ್ರಕರಣದಲ್ಲಿ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿರುವ ಪ್ರಶ್ನೆ ಇದೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆಯೇ ಮತ್ತು ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯೇ ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವ ಅಗತ್ಯವಿದೆ ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟಿದ್ದರು.






ಪ್ರಕರಣದಲ್ಲಿ ವಿದ್ಯಾರ್ಥಿನಿಯರ ಪರ ವಕೀಲರು ಹಾಗೂ ಸರ್ಕಾರದ ಅಡ್ವೊಕೇಟ್ ಜನರಲ್ ಸಹಿತ ಎಲ್ಲರೂ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ವಿಚಾರಕ್ಕೆ ಸಹಮತ ವ್ಯಕ್ತಪಡಿಸಿದರು. ನ್ಯಾ. ದೀಕ್ಷಿತ್ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ಸಿಜೆ ಅವರಿಗೆ ಮನವಿ ಮಾಡುವುದರ ಜತೆಗೆ, ಈ ವಿಚಾರವನ್ನು ಮತ್ತು ಕಡತಗಳನ್ನು ಕೂಡಲೇ ಸಿಜೆ ಕಚೇರಿಗೆ ರವಾನಿಸುವಂತೆ ರಿಜಿಸ್ಟಾರ್‌ಗೆ ನಿರ್ದೇಶಿಸಿದರು.



ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಆಗುತ್ತಿರುವ ಗದ್ದಲ, ಪ್ರಕರಣದ ತೀವ್ರತೆ ಪರಿಗಣಿಸಿರುವ ಮುಖ್ಯ ನ್ಯಾ. ರಿತುರಾಜ್ ಅವಸ್ಥಿ ಅರ್ಜಿಗಳ ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಿದ್ದಾರೆ. ಬುಧವಾರ ಮಧ್ಯಾಹ್ನ 2.30ಕ್ಕೆ ಅರ್ಜಿಗಳ ವಿಚಾರಣೆ ನಡೆಯಲಿದೆ.


Watch This News

ಹಿಜಬ್ ವಿವಾದ- ಸಂವಿಧಾನವೇ ನಮಗೆ ಭಗವದ್ಗೀತೆ: ಹೈಕೋರ್ಟ್

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200