-->
Judge transfer- ವಿವಾದಾತ್ಮಕ ನ್ಯಾಯಾಧೀಶರ ವರ್ಗಾವಣೆ: ತಕ್ಷಣದಿಂದ ಜಾರಿ ಬರುವಂತೆ ಹೈಕೋರ್ಟ್ ಆದೇಶ

Judge transfer- ವಿವಾದಾತ್ಮಕ ನ್ಯಾಯಾಧೀಶರ ವರ್ಗಾವಣೆ: ತಕ್ಷಣದಿಂದ ಜಾರಿ ಬರುವಂತೆ ಹೈಕೋರ್ಟ್ ಆದೇಶ

ವಿವಾದಾತ್ಮಕ ನ್ಯಾಯಾಧೀಶರ ವರ್ಗಾವಣೆ: ತಕ್ಷಣದಿಂದ ಜಾರಿ ಬರುವಂತೆ ಹೈಕೋರ್ಟ್ ಆದೇಶ





ಕಳೆದ ಗಣರಾಜ್ಯೋತ್ಸ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡಿಸಿದ ಆರೋಪಕ್ಕೆ ಸಿಲುಕಿದ್ದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.



ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ವರ್ಗಾವಣೆಗೊಳಗಾದವರು. ಅವರನ್ನು ಹೈಕೋರ್ಟ್ ಆದೇಶಾನುಸಾರ ವರ್ಗಾವಣೆ ಮಾಡಿ ರಿಜಿಸ್ಟ್ರಾರ್ ಜನರಲ್ ನೋಟಿಫಿಕೇಷನ್ ಹೊರಡಿಸಿದ್ದಾರೆ.



ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಎಚ್ ರೇಣುಕಾದೇವಿ ತಿಂಗಳಾಂತ್ಯಕ್ಕೆ ಸೇವೆಯಿಂದ ವಯೋ ನಿವೃತ್ತಿಯಾಗಲಿದ್ದಾರೆ. ಹಾಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಆದೇಶ ಮಾಡಲಾಗಿದೆ.



ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಫೋಟೋ ಜತೆಗೆ ಡಾ. ಬಿ.ಆರ್ ಅಂಬೇಡ್ಕರರ ಫೋಟೋ ಕೂಡ ಇರಿಸಲಾಗಿತ್ತು. ಆದರೆ, ಧ್ವಜಾರೋಹಣಕ್ಕೆ ಮುನ್ನ ಅಂಬೇಡ್ಕರ್ ಫೋಟೋ ತೆರವು ಮಾಡಲಾಗಿತ್ತು. ಇದರಿಂದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರೇ ವಿವಾದಕ್ಕೆ ಒಳಗಾಗಿದ್ದರು.



ಘಟನೆ ಹಿನ್ನೆಲೆಯಲ್ಲಿ, ಫೋಟೋ ತೆರವು ಮಾಡುವ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆಗಳು ನಡೆಸಿದ್ದವು.



ಘಟನೆ ಬಗ್ಗೆ ಹೈಕೋರ್ಟ್ ವಿವರವಾದ ವಸ್ತುಸ್ಥಿತಿ ವರದಿ ಕೇಳಿತ್ತು. ಬಳಿಕ ರಾಜ್ಯದ ಎಲ್ಲಾ ನ್ಯಾಯಾಲಯಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರಿಸುವುದು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು.

Ads on article

Advertise in articles 1

advertising articles 2

Advertise under the article