-->
NI Act: ದೂರುದಾರ ಕಂಪೆನಿಯನ್ನು ಪ್ರತಿನಿಧಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

NI Act: ದೂರುದಾರ ಕಂಪೆನಿಯನ್ನು ಪ್ರತಿನಿಧಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

NI Act: ದೂರುದಾರ ಕಂಪೆನಿಯನ್ನು ಪ್ರತಿನಿಧಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಸೆಕ್ಷನ್ 138 NI ಕಾಯಿದೆ - ಕಂಪನಿಯ ಅಧಿಕೃತ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ ಎಂಬುದನ್ನು ಮೇಲ್ನೋಟದಲ್ಲಿ ಗಮನಕ್ಕೆ ಬಂದರೂ ಮ್ಯಾಜಿಸ್ಟ್ರೇಟ್‌ ಆ ದೂರು ಪ್ರಕರಣದ ಕಾಗ್ನಿಜೆನ್ಸ್ ಪಡೆದುಕೊಳ್ಳಲು ಸಾಕು ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ.



ಚೆಕ್ ಬೌನ್ಸ್ ಪ್ರಕರಣದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜ. ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.


ಸಂಸ್ಥೆ ಯಾ ಕಂಪನಿಯೊಂದು ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರ / ಪಾವತಿದಾರ ಆಗಿದ್ದರೆ, ಆ ಸಂಸ್ಥೆಯ ಅಧಿಕೃತ ಉದ್ಯೋಗಿ ಕಂಪನಿಯನ್ನು ಪ್ರತಿನಿಧಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.



ಕಂಪನಿ ಯಾ ಸಂಸ್ಥೆಯ ದಾಖಲೆಯಲ್ಲಿ ಇರುವ ಅಧಿಕೃತ ವ್ಯಕ್ತಿ ದೂರು(Complaint) ಮತ್ತು ಪ್ರಮಾಣ ಹೇಳಿಕೆ(Statement by way of Affidavit) ಮೂಲಕ ಮೌಖಿಕವಾಗಿ ಅಥವಾ ಅಫಿಡವಿಟ್ ಮೂಲಕ ದೂರುದಾರರನ್ನು ಪ್ರತಿನಿಧಿಸಿದರೆ ಸಾಕು. ಆ ವಿಷಯವನ್ನು ಪರಿಗಣಿಸಿ  ಮ್ಯಾಜಿಸ್ಟ್ರೇಟ್‌ ಯಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದ ಕಾಗ್ನಿಜೆನ್ಸ್ ಪಡೆದುಕೊಳ್ಳಬಹುದು ಮತ್ತು ಪ್ರಕರಣದ ಆರೋಪಿಗೆ ಸಮನ್ಸ್‌ ಜಾರಿಗೊಳಿಸಬಹುದು ಎಂದು ಸಿಜೆಐ ಎನ್‌ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.



SUPREME COURT OF INDIA


M/s TRL Krosaki Refractories Ltd. Vs M/s SMS Asia Private Limited & Anr.



ಪ್ರಕರಣದ ಹೆಚ್ಚಿನ ವಿವರಣೆಗಾಗಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಲಿಂಕ್ ಇಲ್ಲಿದೆ...






Ads on article

Advertise in articles 1

advertising articles 2

Advertise under the article