-->
SC begins live streaming with its own server- ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್, ರೆಕಾರ್ಡಿಂಗ್‌- ಇ-ಕೋರ್ಟ್‌ ಯೋಜನೆ 3ನೇ ಹಂತದ ಸಿದ್ಧತೆ: ನ್ಯಾ. ಚಂದ್ರಚೂಡ್

SC begins live streaming with its own server- ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್, ರೆಕಾರ್ಡಿಂಗ್‌- ಇ-ಕೋರ್ಟ್‌ ಯೋಜನೆ 3ನೇ ಹಂತದ ಸಿದ್ಧತೆ: ನ್ಯಾ. ಚಂದ್ರಚೂಡ್

ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್, ರೆಕಾರ್ಡಿಂಗ್‌- ಇ-ಕೋರ್ಟ್‌ ಯೋಜನೆ 3ನೇ ಹಂತದ ಸಿದ್ಧತೆ: ನ್ಯಾ. ಚಂದ್ರಚೂಡ್





ದೇಶದ ಇ-ನ್ಯಾಯಾಲಯಗಳ 3ನೇ ಹಂತದ ಯೋಜನೆ ಜಾರಿಗೆ ವೇದಿಕೆ ಸಿದ್ಧವಾಗಿದೆ. ಸುಪ್ರೀಂ ಕೋರ್ಟ್‌ನ ಇ-ಸಮಿತಿ ಯೋಜನೆ ರೂಪಿಸುತ್ತಿದೆ ಎಂದು ಇ-ಸಮಿತಿ ಅಧ್ಯಕ್ಷರೂ ಆದ ಸುಪ್ರೀಂ ಕೋರ್ಟ್‌ ನ್ಯಾ. ಚಂದ್ರಚೂಡ್‌ ಮಾಹಿತಿ ನೀಡಿದ್ದಾರೆ.



ಕೋವಿಡ್ ಹಿನ್ನೆಲೆಯಲ್ಲಿ ಕರ್ತವ್ಯದ ಸಮಯವನ್ನು ಮಧ್ಯಾಹ್ನ 12ರಿಂದ 3ರವರೆಗೆ ಮಿತಿಗೊಳಿಸಿ ಬಾಂಬೆ ಹೈಕೋರ್ಟ್‌ ಹೊರಡಿಸಿದ್ದ ಅಡಳಿತಾತ್ಮಕ ಸುತ್ತೋಲೆ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ನ್ಯಾ. ಚಂದ್ರಚೂಡ್‌ ಈ ಮಾಹಿತಿ ನೀಡಿದರು.



ಇದರ ಬಗ್ಗೆ ಮಾಹಿತಿ ನೀಡಲು ಶೀಘ್ರದಲ್ಲೇ 'ಮುನ್ನೋಟದ ವರದಿ' ಪ್ರಕಟಿಸುವುದಾಗಿ ಅವರು ಮಾಹಿತಿ ನೀಡಿದರು.



ಇದೇ ವೇಳೆ ಅವರು, ಸುಪ್ರೀಂ ಕೋರ್ಟ್ ವರ್ಚುವಲ್‌ ವಿಚಾರಣೆ ಹಾಗೂ ಲೈವ್‌ ಸ್ಟ್ರೀಮಿಂಗ್‌ ರೆಕಾರ್ಡಿಂಗ್‌ಗಳನ್ನು ಹೊರ ಗುತ್ತಿಗೆ ಸರ್ವರ್‌ ಯಾ ಥರ್ಡ್‌ಪಾರ್ಟಿ ಸರ್ವರ್‌ ಗಳನ್ನು ಆಯ್ಕೆ ಮಾಡದೆ ಸುಪ್ರೀಂ ಕೋರ್ಟ್‌ನ ಸ್ವಂತ ಸರ್ವರ್‌ ಮೂಲಕ ಕೈಗೊಳ್ಳುವ ಉದ್ದೇಶ ಹೊಂದಿರುವುದಾಗಿ ಹೇಳಿದರು.



'ಅತಿ ಶೀಘ್ರದಲ್ಲಿ ಇ-ಕೋರ್ಟ್‌ ಯೋಜನೆಯ 3ನೇ ಹಂತದ ಬಗ್ಗೆ ಮುನ್ನೋಟ ವರದಿಯನ್ನು ಪ್ರಕಟಿಸುತ್ತೇವೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದಂತೆ ಬಜೆಟ್ ನಿಗದಿಗೊಳಿಸುವ ಹಂತದಲ್ಲಿ ನಾವಿದ್ದೇವೆ. ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್‌) ಕ್ಕೆ ಅಗತ್ಯವಾದ ಕ್ಲೌಡ್‌ ಮೂಲಸೌಕರ್ಯವನ್ನು ಇದಕ್ಕಾಗಿ ನಾವು ಕಲ್ಪಿಸಬೇಕಿದೆ ಎಂದು ಹೇಳಿದರು.


ಸುಪ್ರೀಂ ಕೋರ್ಟ್‌ ಈ ವ್ಯವಸ್ಥೆಯನ್ನು ಪ್ರಸರಣ (ಹೋಸ್ಟ್‌) ಮಾಡಲಿದೆ. ಅನ್ಯ ಸರ್ವರ್‌ಗಳ (ಥರ್ಡ್‌ ಪಾರ್ಟಿ ಸರ್ವರ್‌) ಬದಲಿಗೆ ವರ್ಚುವಲ್‌ ಕಲಾಪಗಳ ರೆಕಾರ್ಡಿಂಗ್‌ಗಳನ್ನು ನಮ್ಮ ಸ್ವಂತ ಸರ್ವರ್‌ನಲ್ಲಿ ಹೋಸ್ಟ್‌ ಮಾಡುವ ಇರಾದೆ ಇದೆ' ಎಂದು ಅವರು ವಿವರಿಸಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200