-->
CBI lodges FIR against Bar Council- 10 ವರ್ಷದಲ್ಲಿ 7.5. ಕೋಟಿ ಗೋಲ್‌ಮಾಲ್‌: ವಕೀಲರ ಸಂಘದ ವಿರುದ್ಧ CBI FIR

CBI lodges FIR against Bar Council- 10 ವರ್ಷದಲ್ಲಿ 7.5. ಕೋಟಿ ಗೋಲ್‌ಮಾಲ್‌: ವಕೀಲರ ಸಂಘದ ವಿರುದ್ಧ CBI FIR

10 ವರ್ಷದಲ್ಲಿ 7.5. ಕೋಟಿ ಗೋಲ್‌ಮಾಲ್‌: ವಕೀಲರ ಸಂಘದ ವಿರುದ್ಧ CBI FIR





ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಕಲಿ ದಾಖಲೆಗಳ ಮೂಲಕ ಕೇರಳ ವಕೀಲರ ಕಲ್ಯಾಣ ನಿಧಿಯಿಂದ 7.5 ಕೋಟಿ ರೂಪಾಯಿ ಗೋಲ್‌ಮಾಲ್‌ ಆಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (CBI) ಕೇರಳ ವಕೀಲರ ಸಂಘದ ವಿರುದ್ಧ FIR ದಾಖಲಿಸಿಕೊಂಡಿದೆ.



ವಕೀಲರ ಕಲ್ಯಾಣ ನಿಧಿಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂದು ಕೆಲ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದು, ಹಗರಣವನ್ನು ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಗೆ ಮನವಿ ಮಾಡಿದ್ದರು.



ಈ ಬಗ್ಗೆ ಕೇರಳ ಹೈಕೋರ್ಟ್ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಿದ್ದು, ಅದರಂತೆ ಸಿಬಿಐ ಈ ಕ್ರಮ ಕೈಗೊಂಡಿದೆ.



ವಕೀಲರಿಗೆ ನಿವೃತ್ತಿ ಸೌಲಭ್ಯಗಳು ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ವಕೀಲರ ಕಲ್ಯಾಣ ನಿಧಿ ಸ್ಥಾಪಿಸಲಾಗಿತ್ತು. ಕೇರಳ ವಕೀಲರ ಪರಿಷತ್ತಿನ ಹಣ, ಭಾರತೀಯ ವಕೀಲರ ಪರಿಷತ್ತು ನೀಡಿದ್ದ ಕೊಡುಗೆ ಮೊತ್ತ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನೆರೆ ರಾಜ್ಯಗಳ ವಕೀಲರ ಪರಿಷತ್ತುಗಳು ನೀಡಿದ್ದ ನೆರವಿನ ಮೊತ್ತ ಹಾಗೂ ಕೇರಳ ವಕೀಲರ ಪರಿಷತ್ತಿನ ವೆಲ್ಫೇರ್ ಸ್ಟಾಂಪ್ ಮಾರಾಟದ ಮೊತ್ತವನ್ನು ಈ ನಿಧಿ ಒಳಗೊಂಡಿತ್ತು.



ಐದು ವರ್ಷಗಳ ಹಿಂದೆ, ಅಂದರೆ 2017ರಲ್ಲಿ ವಕೀಲರ ಕಲ್ಯಾಣ ನಿಧಿ ದುರ್ಬಳಕೆ ಆಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿತ್ತು. ಈ ವಿಚಾರದಲ್ಲಿ ಬಾರ್‌ ಕೌನ್ಸಿಲ್‌ನ ಆಂತರಿಕ ಸಮಿತಿ ವಿಚಾರಣೆ ಹಾಗೂ ಲೆಕ್ಕ ಪರಿಶೋಧನೆ ನಡೆಸಿದಾಗ ವಕೀಲರ ಪರಿಷತ್ತಿನ ಕಲ್ಯಾಣ ನಿಧಿ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿತ್ತು.



ಹಾಗಾಗಿ, ಈ ಹಗರಣವನ್ನು CBI ತನಿಖೆಗೆ ಒಪ್ಪಿಸಲು ನಿರ್ದೇಶಿಸುವಂತೆ ಕೋರಿ ಕೇರಳದ ಹಲವು ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ CBI ಪ್ರಕರಣದ ಬಗ್ಗೆ FIR ದಾಖಲಿಸಿಕೊಂಡಿದ್ದು, ಬಾರ್‌ ಕೌನ್ಸಿಲ್‌ನಲ್ಲಿ ಇರುವ "ನುಂಗಣ್ಣ"ಗಳ ಬಣ್ಣ ಬಯಲಾಗಿದೆ.



Ads on article

Advertise in articles 1

advertising articles 2

Advertise under the article