-->
Karnataka HC on Passport- "ಪಾಸ್‌ಪೋರ್ಟ್ ನವೀಕರಣ; ಹೈಕೋರ್ಟ್ ತಡೆ ಇದ್ದಾಗ, ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂಬ ನಿರಾಕರಣೆ ಸಲ್ಲದು"

Karnataka HC on Passport- "ಪಾಸ್‌ಪೋರ್ಟ್ ನವೀಕರಣ; ಹೈಕೋರ್ಟ್ ತಡೆ ಇದ್ದಾಗ, ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂಬ ನಿರಾಕರಣೆ ಸಲ್ಲದು"

"ಪಾಸ್‌ಪೋರ್ಟ್ ನವೀಕರಣ; ಹೈಕೋರ್ಟ್ ತಡೆ ಇದ್ದಾಗ, ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂಬ ನಿರಾಕರಣೆ ಸಲ್ಲದು"


ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವಾಗ, ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿ ಇದೆ ಎಂಬ ಏಕೈಕ ಕಾರಣ ನೀಡಿ ಪಾಸ್‌ಪೋರ್ಟ್‌ ನವೀಕರಿಸಲು ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಪ್ರಕರಣ: ಕಸ್ತುರಿ ರಾಜುಪೇಟ Vs ಭಾರತ ಸರ್ಕಾರ ಮತ್ತಿತರರು (ಕರ್ನಾಟಕ ಹೈಕೋರ್ಟ್ Dated 17-03-2022) WP: 19203/2021ಪಾಸ್‌ಪೋರ್ಟ್ ನವೀಕರಣದ ವಿಚಾರದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.ಕ್ರಿಮಿನಲ್ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿರುವಾಗ, 1993ರ ಅಧಿಸೂಚನೆ ಪ್ರಕಾರ, ಸ್ಪಷ್ಟ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂಬ ನಿಯಮ ಇಲ್ಲದಿರುವಾಗ, ಅನಗತ್ಯವಾಗಿ ವಿಚಾರಣಾ ನ್ಯಾಯಾಲಯದಿಂದ ಮತ್ತೊಂದು ಆದೇಶವನ್ನು ನಿರೀಕ್ಷಿಸುವುದು ತರವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೂರನೇ ಪ್ರತಿವಾದಿಯಾಗಿರುವ ಪಾಸ್‌ಪೋರ್ಟ್ ಪ್ರಾದೇಶಿಕ ಅಧಿಕಾರಿ ನೀಡಿರುವ ಹಿಂಬರಹವನ್ನು ರದ್ದುಗೊಳಿಸಿ ಅರ್ಜಿದಾರರಿಗೆ ಪಾಸ್‌ಪೋರ್ಟ್ ನವೀಕರಣ ಮಾಡಿಕೊಡುವಂತೆ ನಿರ್ದೇಶನ ನೀಡಿದೆ.ಒಂದು ವೇಳೆ, ಪಾಸ್‌ಪೋರ್ಟ್‌ ನವೀಕರಣಗೊಂಡರೂ ಅಥವಾ ನವೀಕರಣಗೊಳ್ಳದಿದ್ದರೂ, ಸಂಬಂಧಪಟ್ಟ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯದ ಅನುಮತಿ ಪಡೆಯದೇ ಅರ್ಜಿದಾರರು ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.


Ads on article

Advertise in articles 1

advertising articles 2

Advertise under the article