-->
Son no claim over parent property when they alive- ಹೆತ್ತವರ ಜೀವಿತಾವಧಿಯಲ್ಲಿ ಮಗನಿಗೆ ಆಸ್ತಿ ಮೇಲೆ ಹಕ್ಕಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

Son no claim over parent property when they alive- ಹೆತ್ತವರ ಜೀವಿತಾವಧಿಯಲ್ಲಿ ಮಗನಿಗೆ ಆಸ್ತಿ ಮೇಲೆ ಹಕ್ಕಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಹೆತ್ತವರ ಜೀವಿತಾವಧಿಯಲ್ಲಿ ಮಗನಿಗೆ ಆಸ್ತಿ ಮೇಲೆ ಹಕ್ಕಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು




  • ತಂದೆ, ತಾಯಿ ಜೀವಂತ ಇರುವವರೆಗೆ ಮಗನಿಗೆ ಆಸ್ತಿ ಮೇಲೆ ಹಕ್ಕಿಲ್ಲ
  • ತಮ್ಮ ಆಸ್ತಿ ಮಾರಲು ಹೆತ್ತವರು ಮಕ್ಕಳ ಅನುಮತಿ ಕೇಳಬೇಕಿಲ್ಲ
  • ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು


'ಉತ್ತರಾಧಿಕಾರದ ಕಾನೂನು' ಅಡಿಯಲ್ಲಿ ಪೋಷಕರು ಜೀವಂತ ರುವವರೆಗೆ ಪೋಷಕರ ಆಸ್ತಿಯಲ್ಲಿ ಹಕ್ಕು ಅಥವಾ ಒಡೆತನ ಅಥವಾ ಲಾಭಾಂಶ ಪಡೆಯಲು ಮಗನಿಗೆ ಅವಕಾಶವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಕರಣ: ಸೋನಿಯಾ ಫಜಲ್ ಖಾನ್ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ



ಉಚ್ಚ ನ್ಯಾಯಾಲಯದ ನ್ಯಾ. ಗೌತಮ್ ಪಟೇಲ್ ಮತ್ತು ನ್ಯಾ. ಮಾಧವ್ ಜಾಮದಾರ್ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.



ತನ್ನ ತಾಯಿ 2 ಫ್ಲಾಟ್‌ಗಳನ್ನು ಮಾರಾಟ ಮಾಡದಂತೆ ತಡೆಯಾಜ್ಞೆ ಕೋರಿ ಪುತ್ರ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಂದೆ ಕಳೆದ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ. ತಾನು ತನ್ನ ತಂದೆಯ 'ವಾಸ್ತವಿಕ ರಕ್ಷಕ' ಎಂದು ಹೇಳಿಕೊಂಡ ಮಗ, ಪೋಷಕರು ಜೀವಂತವಾಗಿ ಇದ್ದರೂ ಅವರ ಎರಡು ಫ್ಲಾಟ್‌ಗಳು ʼಹಂಚಿಕೊಂಡ ಮನೆʼಗಳಾಗಿವೆ. ಇವುಗಳಲ್ಲಿ ಒಂದು ಅಥವಾ ಎರಡರ ಮೇಲೆ ತನಗೆ ಕಾನೂನುಬದ್ಧ ಹಕ್ಕು ಇದೆ ಎಂದು ಅವರು ವಾದಿಸಿದ್ದರು.



ಹೈಕೋರ್ಟ್ ಕಳೆದ ವರ್ಷ ಅವರ ತಾಯಿಗೆ ಕುಟುಂಬವನ್ನು ನಡೆಸಲು ಕಾನೂನಾತ್ಮಕ ಹಕ್ಕನ್ನು ನೀಡಿತು. ಇದರ ಅನ್ವಯ ಆಕೆ ತಾನು ಬಯಸಿದರೆ, ತನ್ನ ಗಂಡನ ಚಿಕಿತ್ಸೆಗಾಗಿ ಯಾವುದೇ ಆಸ್ತಿಯನ್ನು ಮಾರಾಟ ಮಾಡಬಹುದು ಎಂದು ಹೇಳಿತ್ತು.



ಅರ್ಜಿದಾರರ ತಂದೆ ಜೀವಂತವಾಗಿದ್ದಾರೆ. ತಾಯಿಯೂ ಜೀವಂತವಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅರ್ಜಿದಾರರಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಆಸಕ್ತಿ ಇರಬಾರದು, ಅವರು ಅದನ್ನು ಮಾರಾಟ ಮಾಡಬಹುದು. ಅವರಿಗೆ ಅವರ ಆಸ್ತಿ ಮಾರಾಟ ಮಾಡಲು ಮಗನ ಅನುಮತಿ ಬೇಕಿಲ್ಲ’ ಎಂದು ತೀರ್ಪಿನಲ್ಲಿ ಹೇಳಿದೆ.



ಹಲವು ವರ್ಷಗಳಿಂದ ಅರ್ಜಿದಾರರು ತಮ್ಮ ತಂದೆಯ ಆಸ್ತಿಯ ನಿಜವಾದ ಕಾವಲುಗಾರನಾಗಿದ್ದರು ಎಂದು ಅವರ ವಕೀಲರು ವಾದಿಸಿದ್ದರು. ಅದಕ್ಕೆ ನ್ಯಾಯಪೀಠ, ಅರ್ಜಿದಾರರು ತಂದೆಯನ್ನು ಒಂದು ಬಾರಿಯಾದರೂ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆಯೇ..?. ಅವರ ವೈದ್ಯಕೀಯ ಬಿಲ್ ಪಾವತಿಸಿದ್ದಾರಾ?' ಎಂದು ಪ್ರಶ್ನಿಸಿತು.


ಯಾವುದೇ ಸಮುದಾಯ ಅಥವಾ ಧರ್ಮಕ್ಕೆ ಉತ್ತರಾಧಿಕಾರ ಕಾನೂನಿನ ಯಾವುದೇ ಪರಿಕಲ್ಪನೆಯಲ್ಲಿ, ಈ ಯಾವುದೇ ಫ್ಲಾಟ್‌ಗಳಲ್ಲಿ ಮಗನಿಗೆ ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿತು.

Ads on article

Advertise in articles 1

advertising articles 2

Advertise under the article