-->
DGP Circular - ನೀವು ವಾಹನ ಮಾಲೀಕರೇ?- ಅಪಘಾತ ಸಂದರ್ಭದಲ್ಲಿ ಪೊಲೀಸರು ವಾಹನ ವಶಪಡಿಸುವ ಬಗ್ಗೆ ಉಪಯುಕ್ತ ಮಾಹಿತಿ

DGP Circular - ನೀವು ವಾಹನ ಮಾಲೀಕರೇ?- ಅಪಘಾತ ಸಂದರ್ಭದಲ್ಲಿ ಪೊಲೀಸರು ವಾಹನ ವಶಪಡಿಸುವ ಬಗ್ಗೆ ಉಪಯುಕ್ತ ಮಾಹಿತಿ

ನೀವು ವಾಹನ ಮಾಲೀಕರೇ?- ಅಪಘಾತ ಸಂದರ್ಭದಲ್ಲಿ ಪೊಲೀಸರು ವಾಹನ ವಶಪಡಿಸುವ ಬಗ್ಗೆ ಉಪಯುಕ್ತ ಮಾಹಿತಿ








ವಾಹನ ಅಪಘಾತ ವೇಳೆ ವಾಹನ ವಶ: ಪೊಲೀಸರ ಕಿರಿಕಿರಿ ತಪ್ಪಿಸಲು DGP ಮಹತ್ವದ ಸುತ್ತೋಲೆ



ರಸ್ತೆ ಅಪಘಾತ ನಡೆದ ಬಳಿಕ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವ ನೆಪದಲ್ಲಿ ಪೊಲೀಸರು ಎರಡು ಕಡೆಯ ಸಂತ್ರಸ್ತರಿಂದ ಕಿರುಕುಳ ಕೊಡುತ್ತಾರೆ ಎಂಬುದು ಎಲ್ಲ ಕಡೆಯಿಂದ ಬರುವ ಸಾಮಾನ್ಯ ದೂರು. ಇದು ಸತ್ಯವೂ ಹೌದು.



ಈ ಬಗ್ಗೆ ರಾಜ್ಯದ ವಿವಿಧ ಕಡೆಗಳಿಂದ ದೂರುಗಳು ಬರುತ್ತಿದೆ. ಅಪಘಾತದ ಸಂದರ್ಭದಲ್ಲೂ ಸಂತ್ರಸ್ತರಿಂದ ಹಣ ಕಿತ್ತುಕೊಳ್ಳುವ ಪೋಲಿಸರ ಕಿರಿಕಿರಿಯನ್ನು ತಪ್ಪಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ಅಪಘಾತಕ್ಕೆ ಒಳಗಾದ ವಾಹನಗಳನ್ನು ಬಿಡುಗಡೆ ಮಾಡುವ ಕುರಿತು ನಿರ್ದೇಶನಗಳನ್ನು ನೀಡಿದ್ದಾರೆ.



7-4-2022ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಅಪಘಾತಕ್ಕೆ ಒಳಗಾದ ವಾಹನಗಳನ್ನು ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 136 ಅಡಿ 24 ಗಂಟೆಯ ಒಳಗಾಗಿ ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.



ಈ ಅವಧಿಯಲ್ಲಿ ಮೋಟಾರು ವಾಹನ ಇನ್ಸ್ಪೆಕ್ಟರ್ ರವರಿಂದ ತಪಾಸಣೆ ಮಾಡಿಸಿ ವಾಹನವನ್ನು ಸಂಬಂಧಪಟ್ಟ ಅದರ ಮಾಲೀಕರಿಗೆ ಹಿಂದಿರುಗಿಸಲು ತಿಳುವಳಿಕೆ ನೀಡಬೇಕು ಎಂದು ಪೊಲೀಸ್ ಮಹಾನಿರ್ದೇಶಕರು ಕಟ್ಟುನಿಟ್ಟಾದ ಸೂಚನೆಯನ್ನು ನೀಡಿದ್ದಾರೆ.


ಈ ಸೂಚನೆಯನ್ನು ನಿರ್ಲಕ್ಷಿಸಿ ವಾಹನಗಳನ್ನು ಪಿಎಫ್ ಗೆ ಅಳವಡಿಸಿ ಸಂಬಂಧಪಟ್ಟ ಮಾಲೀಕರಿಗೆ ಕಿರುಕುಳ ಕೊಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.



ಕೆಲವು ಪೊಲೀಸ್ ಅಧಿಕಾರಿಗಳು ಅಪರಾಧ ದಂಡ ಸಂಹಿತೆ ಸೆಕ್ಷನ್ 102 ರ ಪ್ರಕಾರ ಅಪಘಾತಕ್ಕೆ ಒಳಗಾದ ವಾಹನವನ್ನು ಪಿಎಫ್ ಗೆ ಅಳವಡಿಸಬೇಕು ಎಂಬುದರ ಬಗ್ಗೆ ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ. ಸೆಕ್ಷನ್ 102 ರ ಪ್ರಕಾರ ಅಪಘಾತಕ್ಕೆ ಒಳಗಾದ ವಾಹನವನ್ನು ಪಿಎಫ್ ಗೆ ಅಳವಡಿಸುವುದು ಕಡ್ಡಾಯವಲ್ಲ. ಇದರಿಂದಾಗಿ ವಾಹನಗಳನ್ನು ಪಿಎಫ್ ಗೆ ಅಳವಡಿಸುವ ರೂಡಿ ಮುಂದುವರೆದುಕೊಂಡು ಬಂದಿದ್ದು ಅದನ್ನು ಈ ಕೂಡಲೇ ಕೈಬಿಡಬೇಕು ಎಂದು ಸುತ್ತೋಲೆಯಲ್ಲಿ ಆದೇಶ ನೀಡಲಾಗಿದೆ.



ಮಾರಣಾಂತಿಕ ಮತ್ತು ಇತರ ಗಂಭೀರ ಪ್ರಕರಣಗಳೂ, ಹೊಡೆದು ಪರಾರಿಯಾಗುವ ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಮಾತ್ರ ಉಪವಿಭಾಗಾಧಿಕಾರಿ ಅವರ ಅನುಮತಿ ಪಡೆದು ಅಂತಹ ವಾಹನವನ್ನು ಪಿಎಫ್‌ಗೆ ಹಾಕುವ ಕ್ರಮವನ್ನು ತೆಗೆದುಕೊಳ್ಳಬಹುದು. ಇಂತಹ ಪ್ರಸಂಗಗಳು ಬಲು ಅಪರೂಪ.






ರಾಜ್ಯದ ಅಥವಾ ಹೊರರಾಜ್ಯದ ವಾಹನ ಮಾಲೀಕರು ಮೋಟಾರು ವಾಹನ ಪರಿವೀಕ್ಷಣೆ ಆದಕೂಡಲೇ ವಾಹನದ ಅವಶ್ಯಕತೆ ಇದ್ದಾಗ ಹಾಜರುಪಡಿಸುತ್ತೇವೆ ಎಂಬ ಮುಚ್ಚಳಿಕೆಯನ್ನು ರೂ. 100ರ ಛಾಪಾ ಕಾಗದದ ಮೇಲೆ ಬರೆಸಿಕೊಂಡು ವಾಹನವನ್ನು ಹಿಂತಿರುಗಿಸಬೇಕು.

ವಾಹನದ ದಾಖಲಾತಿಗಳನ್ನು ಇಟ್ಟುಕೊಳ್ಳುವ ಪ್ರಸಂಗ ಬಂದಾಗ ಅವರಿಗೆ ಸೂಕ್ತ ಸ್ವೀಕೃತಿಯನ್ನು ಬರವಣಿಗೆಯ ಮೂಲಕ ಕೊಡಬೇಕು.


ರಸ್ತೆ ಅಪಘಾತ ಪ್ರಕರಣಗಳಲ್ಲಿ ಎಂವಿ ಪ್ರಕರಣಗಳಲ್ಲಿ ವಾರಿಸುದಾರರ ಇಲ್ಲದ ವಾಹನಗಳನ್ನು ವಿಲೇವಾರಿ ಗೊಳಿಸುವ ಬಗ್ಗೆ ಮೇಲ್ಕಂಡ ಉಲ್ಲೇಖಗಳ ಅಡಿಯಲ್ಲಿ ನಿಯಮ ಹಾಗೂ ಸ್ಪಷ್ಟ ಆದೇಶ ನೀಡಿದ್ದು ಠಾಣೆಗಳಲ್ಲಿ ವಿವಿಧ ಕಾರಣಗಳಿಗೆ ವಶಪಡಿಸಿಕೊಂಡಿರುವ ವಾಹನಗಳನ್ನು ವಿಲೇವಾರಿಗೊಳಿಸತಕ್ಕದ್ದು.



ರಸ್ತೆ ಅಪಘಾತ ಪ್ರಕರಣಗಳಲ್ಲಿ ವಾಹನವು ವಿಮಾ ಸೌಲಭ್ಯ ಹೊಂದಿದ್ದರೆ ವಾಹನದ ಯಾಂತ್ರಿಕ ಪರೀಕ್ಷೆ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಡಿಸಿ ಅಗತ್ಯ ನಿಯಮಾವಳಿ ಪಾಲನೆಯ ನಂತರ ವಾಹನವನ್ನು 24 ಗಂಟೆಗಳಲ್ಲಿ ಬಿಡುಗಡೆ ಮಾಡಬೇಕು.



ವಿಮಾ ಸೌಲಭ್ಯವನ್ನು ಇಲ್ಲದಿದ್ದರೆ ಅಂತಹ ವಾಹನಗಳನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡು, ಜಪ್ತಿ ಮಾಡಿಕೊಂಡ ಬಗ್ಗೆ ಲಿಖಿತ ಮಾಹಿತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವುದು.



ಮಾನ್ಯ ಸುಪ್ರೀಂ ಕೋರ್ಟ್ ಸಿವಿಲ್ ಅಪೀಲ್ ನಂಬರ್ 9936/2016, 9937/2016ರಲ್ಲಿ ನೀಡಿರುವ ಸೂಚನೆಗಳ ಅನ್ವಯ 3ತಿಂಗಳೊಳಗೆ ಭದ್ರತೆ ಅಥವಾ ಹಣವನ್ನು ಠೇವಣಿ ಮಾಡುವಲ್ಲಿ ವಿಫಲವಾಗಿದರೆ ನ್ಯಾಯಾಧೀಶರು ವಾಹನವನ್ನು ಹರಾಜು ಹಾಕಿ ಹಣವನ್ನು ಪರಿಹಾರ ನೀಡುವ ಟ್ರಿಬ್ಯೂನಲ್ ನ್ಯಾಯಾಲಯದಲ್ಲಿ ಪ್ರಕರಣ ಮುಗಿಯುವವರೆಗೆ ಠೇವಣಿ ಮಾಡುವುದು ಎಂದು ಸುತ್ತೊಲೆಯಲ್ಲಿ ಹೇಳಲಾಗಿದೆ.

(ಸುತ್ತೋಲೆ ನಂ: ಸಿಟಿಆರ್‌ಎಸ್‌-2/03/2022-23 Dated 7-04-2022)

Ads on article

Advertise in articles 1

advertising articles 2

Advertise under the article