-->
Mangaluru Advocate arrested -ನೀಚತನದ ಪರಮಾವಧಿ ಮೆರೆದ ವಕೀಲ: ಸಹೋದ್ಯೋಗಿ ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಕೃತ್ಯ ಎಸಗಿದ ಪರಮಪಾಪಿ!

Mangaluru Advocate arrested -ನೀಚತನದ ಪರಮಾವಧಿ ಮೆರೆದ ವಕೀಲ: ಸಹೋದ್ಯೋಗಿ ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಕೃತ್ಯ ಎಸಗಿದ ಪರಮಪಾಪಿ!

ನೀಚತನದ ಪರಮಾವಧಿ ಮೆರೆದ ವಕೀಲ: ಸಹೋದ್ಯೋಗಿ ಪ್ರಾಧ್ಯಾಪಕಿ ಬಗ್ಗೆ ಅಶ್ಲೀಲ ಕೃತ್ಯ ಎಸಗಿದ ಪರಮಪಾಪಿ!


ಈತ ಬಂಟ್ವಾಳದ ಎಸ್‌ವಿಎಸ್ ಕಾಲೇಜಿನ ಸಂಚಾಲಕ. ಈತನ ಹೆಸರು ಪ್ರಕಾಶ್ ಶೆಣೈ. ಪ್ರಾಯ 44 ವರ್ಷ. ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿಯಾಗಿರುವ ಈತ ವಕೀಲ. ಪ್ರತಿಷ್ಠಿತ ಮಂಗಳೂರು ವಕೀಲರ ಸಂಘದ ಸದಸ್ಯ.




ಇನ್ನು ಈತನ ಸಹಚರರು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ, ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ(36), ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ನಿವಾಸಿ ತಾರಾನಾಥ ಬಿ ಎಸ್ ಶೆಟ್ಟಿ(32).



ಆದರೆ, ಈತ ತನ್ನ ಸಹಚರರ ಜೊತೆಗೆ ಸೇರಿ ಮಾಡಿದ್ದು ಮಾತ್ರ ಹೇಲು ತಿನ್ನುವ ಕೆಲಸ. ಮಾತೃ ಸ್ವರೂಪಿ ಹೆಣ್ಣು, ದೇವ ಸ್ವರೂಪಿ ಗುರುವಿನ ಪ್ರತಿರೂಪವಾಗಿರುವ ಪ್ರಾಧ್ಯಾಪಕಿಯೊಬ್ಬರ ಬಗ್ಗೆ ಮಾನಹಾನಿಕರವಾಗಿ ಪತ್ರ ಬರೆದು ವೈರಲ್ ಮಾಡಿದ್ದ. ಅಲ್ಲದೆ, ಅಶ್ಲೀಲವಾಗಿ ಸಾರ್ವಜನಿಕ ಸ್ಥಳದಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ.


ಈತನ ಕೃತ್ಯಕ್ಕೆ ಈತನ ಕುಟುಂಬಸ್ತರು, ಬಂಧು ಮಿತ್ರರು ಮರುಕ ಪಡುವಂತಾಗಿದೆ.



ಘಟನೆಯ ವಿವರ:

- ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಎಸ್‌.ವಿ.ಎಸ್. ಕಾಲೇಜಿನ ಪ್ರಾಧ್ಯಾಪಕರ ನೇಮಕಾತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ಮೂವರು ವಿಕೃತ ಮನೋಸ್ಥಿತಿಯ ಸಮಾನ ಮನಸ್ಕರು ಪ್ರಾಧ್ಯಾಪಕಿಯೊಬ್ಬರ ವಿರುದ್ಧ ಮಾನಹಾನಿಕರವಾದ ಪತ್ರವನ್ನು ಬರೆದು ಅಂಚೆ ಮೂಲಕ ಸಹದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ ಮಾಡಿದ್ದರು. ಅಲ್ಲದೆ ಪ್ರಾಧ್ಯಾಪಕಿಯವರ ಬಗ್ಗೆ ಅಶ್ಲೀಲವಾಗಿ ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದರು.



ಇವರು ಎಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದರೆ ಎಂದರೆ, ಮಾನಹಾನಿಕರವಾದ ಬರಹವನ್ನು ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ನಲ್ಲಿ ಆಕೆಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು.



ಅಷ್ಟೇ ಅಲ್ಲ, ಮಹಿಳಾ ಪ್ರಾಧ್ಯಾಪಕಿಯ ಖಾಸಗಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದರು.


ಪ್ರದೀಪ್ ಪೂಜಾರಿ ಎಂಬ ಆರೋಪಿ ವಿರುದ್ಧ 2019ಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ್ದ ಪ್ರಕರಣ ದಾಖಲಾಗಿದೆ. ಈ ಬಗ್ಗೆ, ಪ್ರಾಧ್ಯಾಪಕಿ ನೀಡಿರುವ ದೂರಿನನ್ವಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.



ಇದನ್ನೂ ಓದಿ

ಸಹೋದ್ಯೋಗಿ ಪ್ರಾಧ್ಯಾಪಕಿಗೆ ಮಾನಹಾನಿ-ಮೂವರು ಅರೆಸ್ಟ್







Ads on article

Advertise in articles 1

advertising articles 2

Advertise under the article