-->
ಅಂಗನವಾಡಿ ಸಿಬ್ಬಂದಿಗೆ ಸಿಹಿ ಸುದ್ದಿ: ಗ್ರ್ಯಾಚುಟಿಗೆ ಅರ್ಹರು ಎಂದ ಸುಪ್ರೀಂ ಐತಿಹಾಸಿಕ ತೀರ್ಪು

ಅಂಗನವಾಡಿ ಸಿಬ್ಬಂದಿಗೆ ಸಿಹಿ ಸುದ್ದಿ: ಗ್ರ್ಯಾಚುಟಿಗೆ ಅರ್ಹರು ಎಂದ ಸುಪ್ರೀಂ ಐತಿಹಾಸಿಕ ತೀರ್ಪು

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಚ್ಯುಟಿ ಸೌಲಭ್ಯಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು

ಅಂಗನವಾಡಿ ಸಿಬ್ಬಂದಿಗೆ ಖುಷಿ ಕೊಡುವಂತಹ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಚ್ಯುಟಿ ಸೌಲಭ್ಯಕ್ಕೆ ಅರ್ಹರು ಎಂದು ಹೇಳಿದೆ. ಇದೇ ವೇಳೆ, ಅಂಗನವಾಡಿ ಕೇಂದ್ರಗಳಿಗೆ ಗ್ರಾಚ್ಯುಟಿ ಪಾವತಿ ಕಾಯಿದೆ ಅನ್ವಯವಾಗುವುದಿಲ್ಲ ಎಂಬ ಗುಜರಾತ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.ಪ್ರಕರಣ: ಮಣಿಬೆನ್ ಮಗನ್‌ಭಾಯ್ ಭಾರಿಯಾ Vs ದಾಹೋದ್‌ ಜಿಲ್ಲಾ ಅಭಿವೃದ್ಧಿ ಅಧಿಕಾರಿಅಂಗನವಾಡಿ ಸಿಬ್ಬಂದಿ ಗ್ರಾಚ್ಯುಟಿ ಪಾವತಿಗೆ ಅರ್ಹರು ಎಂಬ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಬಳಿಕ ಅದನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಗುಜರಾತಿನ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರೊಬ್ಬರು ನಿವೃತ್ತಿ ನಂತರ ತಮಗೆ ಗ್ರಾಚ್ಯುಟಿ ನಿರಾಕರಣೆ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಈ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಪುರಸ್ಕರಿಸಿರಲಿಲ್ಲ. ಈಗ ಸುಪ್ರೀಂ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಈ ತೀರ್ಪು ರದ್ದುಗೊಂಡಿದೆ.


ನ್ಯಾ. ಅಭಯ್ ಎಸ್ ಓಕ್ ಮತ್ತು ಅಜಯ್ ರಾಸ್ತೋಗಿ ಅವರ ನ್ಯಾಯಪೀಠ, 1972ರ ಗ್ರಾಚ್ಯುಟಿ ಪಾವತಿ ಕಾಯಿದೆಯಡಿಯಲ್ಲಿ ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅರ್ಹರಾಗಿದ್ದು, ಅವರ ಕೆಲಸದ ಸ್ಥಿತಿ ಸುಧಾರಿಸುವ ಸಮಯ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿತು."ಅಷ್ಟೇ ಅಲ್ಲ, ಅಂಗನವಾಡಿ ಸಿಬ್ಬಂದಿಗೆ ಅತ್ಯಂತ ಕಡಿಮೆ ಸಂಭಾವನೆ ಸಿಗುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ ವಿಮಾ ಯೋಜನೆಯಡಿಯಲ್ಲಿ ಅತ್ಯಲ್ಪ ಪ್ರಯೋಜನ ದೊರೆಯುತ್ತಿದೆ” ಎಂದು ನ್ಯಾಯಪೀಠ ಹೇಳಿತು.


Click Here For Judgement: 

Maniben Maganbhai Bhariya vs District Development Officer on 25 April, 2022

Ads on article

Advertise in articles 1

advertising articles 2

Advertise under the article