-->
ಅನುದಾನವೂ ಬೇಕು, ವಿದ್ಯುತ್ ಬಿಲ್ ಸರ್ಕಾರವೇ ಪಾವತಿಸಬೇಕು ಎಂದ ವಕೀಲರ ಸಂಘ: ಹೈಕೋರ್ಟ್ ಹೇಳಿದ್ದೇನು..?

ಅನುದಾನವೂ ಬೇಕು, ವಿದ್ಯುತ್ ಬಿಲ್ ಸರ್ಕಾರವೇ ಪಾವತಿಸಬೇಕು ಎಂದ ವಕೀಲರ ಸಂಘ: ಹೈಕೋರ್ಟ್ ಹೇಳಿದ್ದೇನು..?

ಅನುದಾನವೂ ಬೇಕು, ವಿದ್ಯುತ್ ಬಿಲ್ ಸರ್ಕಾರವೇ ಪಾವತಿಸಬೇಕು ಎಂದ ವಕೀಲರ ಸಂಘ: ಹೈಕೋರ್ಟ್ ಹೇಳಿದ್ದೇನು..?






ವಕೀಲರ ಸಂಘದ ಕಟ್ಟಡಕ್ಕೆ ವಿದ್ಯುತ್‌ ಶುಲ್ಕ ಪಾವತಿಯಲ್ಲಿ ವಿನಾಯಿತಿ ಕೋರಿದ್ದ ತುಮಕೂರು ವಕೀಲರ ಸಂಘ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.



ಸರ್ಕಾರದಿಂದ ಅನುದಾನ ಬೇಕು, ಸೌಕರ್ಯ ಕಲ್ಪಿಸಿಕೊಡಬೇಕು. ಸರ್ಕಾರ ಕಟ್ಟಡ ನಿರ್ಮಿಸಿಕೊಟ್ಟಿದೆ ಎಂದ ಮಾತ್ರಕ್ಕೆ ವಿದ್ಯುತ್‌ ಶುಲ್ಕವನ್ನೂ ಸರ್ಕಾರ ಭರಿಸಬೇಕು ಎಂದರ್ಥವಲ್ಲ. ನೀವು ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ನೀವು ಶುಲ್ಕ ಪಾವತಿಸಬೇಕು ಎಂದ ಹೈಕೋರ್ಟ್ ವಕೀಲರ ಸಂಘಕ್ಕೆ ಸೂಚಿಸಿದೆ.



'ಹೈಕೋರ್ಟ್‌ ತಾನು ಬಳಸುವ ವಿದ್ಯುತ್‌ಗೆ ಬಿಲ್‌ನ್ನು ತನ್ನದೇ ಖಾತೆಯಿಂದ ಪಾವತಿಸುತ್ತದೆ, ವಿನಾ ಸರ್ಕಾರವಲ್ಲ. ಹೈಕೋರ್ಟ್‌ಗೆ ಅನುದಾನ ಸಿಗುತ್ತದೆ. ನೀವು ಅನುದಾನ ಪಡೆದು ವಿದ್ಯುತ್‌ ಶುಲ್ಕ ಪಾವತಿಸಬಹುದು. ಅದರ ಹೊರತಾಗಿ ವಿದ್ಯುತ್‌ ಶುಲ್ಕ ಪಾವತಿಯಲ್ಲಿ ವಿನಾಯಿತಿ ಕೋರಲು ನಿಮಗೆ ಯಾವ ಹಕ್ಕಿದೆ” ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ಸಂಬಂಧ ತುಮಕೂರು ಜಿಲ್ಲಾ ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಜಾ ಮಾಡಿದೆ.



ತುಮಕೂರು ವಕೀಲರ ಸಂಘ ಪರ ವಕೀಲ ವಿವೇಕ್‌ ರೆಡ್ಡಿ, "ವಕೀಲರು ನ್ಯಾಯಾಲಯದ ಅಧಿಕಾರಿಗಳು. ಸಂಘದ ಕಟ್ಟಡವನ್ನು ಸರ್ಕಾರ ಕಟ್ಟಿಸಿಕೊಟ್ಟಿದೆ. ಆ ಕಾರಣ, ವಿದ್ಯುತ್‌ ಬಿಲ್ ಕೂಡ ಸರ್ಕಾರ ಪಾವತಿಸಬೇಕು" ಎಂದರು.



"ನೀವು ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ನೀವು ಶುಲ್ಕ ಪಾವತಿಸಬೇಕು. ಎಲ್ಲಾ ಜನರ ಜವಾಬ್ದಾರಿ ಸರ್ಕಾರದ ಮೇಲಿದೆ. ವಕೀಲರಿಗೆ ಮಾತ್ರ ವಿನಾಯತಿ ಏಕೆ?” ಎಂದು ನ್ಯಾಯಪೀಠ ಪ್ರಶ್ನಿಸಿತು.



"ಹೈಕೋರ್ಟ್‌ ಪಡೆಯುವ ಅನುದಾನದಿಂದ ವಿದ್ಯುತ್‌ ಶುಲ್ಕ ಪಾವತಿಸಲಾಗುತ್ತದೆ. ಸರ್ಕಾರದ ನಿವಾಸಗಳಲ್ಲಿ ಉಳಿದುಕೊಳ್ಳುವ ನ್ಯಾಯಮೂರ್ತಿಗಳಾದ ನಾವೂ ಸಹ ವಿದ್ಯುತ್‌ ಶುಲ್ಕ ಪಾವತಿಸುತ್ತೇವೆ” ಎಂದು ನ್ಯಾಯಾಧೀಶರು ಹೇಳಿದರು.



ಇದಕ್ಕೆ ಉತ್ತರಿಸಿದ ವಿವೇಕ್‌ ರೆಡ್ಡಿ, “ನಮಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗುವುದಿಲ್ಲ” ಎಂದರು. ಅದಕ್ಕೆ, ನ್ಯಾಯಪೀಠ, "ಅದು ನಿಮ್ಮ ಸಮಸ್ಯೆ. ಸರ್ಕಾರದಿಂದ ಅನುದಾನ ಪಡೆದು, ನೀವು ವಿದ್ಯುತ್‌ ಶುಲ್ಕ ಪಾವತಿಸಿ. ಆದರೆ, ವಿದ್ಯುತ್‌ ಶುಲ್ಕ ಪಾತಿಸುವುದಿಲ್ಲ ಎಂದು ಹೇಳಲಾಗದು" ಎಂದಿತು.



"ನಾವು ಸಹ ಸಾರ್ವಜನಿಕರ ಸೇವೆ ಮಾಡುತ್ತೇವೆ" ಎಂದ ವಕೀಲ ರೆಡ್ಡಿ ವಾದ ಆಲಿಸಿದ ನ್ಯಾಯಪೀಠ, ನಿಮ್ಮ ವಾದವನ್ನು ಆಲಿಸಿದ್ದೇವೆ. ಈಗ ಆದೇಶ ಮಾಡುತ್ತೇವೆ ಎಂದು ಹೇಳಿ, ಮನವಿ ವಜಾ ಮಾಡಿತು.

Ads on article

Advertise in articles 1

advertising articles 2

Advertise under the article