-->
Delay intimation of Vehicle Theft- ವಾಹನ ಕಳವು ಮಾಹಿತಿ ತಡ  ಎಂಬ ಕಾರಣಕ್ಕೆ ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

Delay intimation of Vehicle Theft- ವಾಹನ ಕಳವು ಮಾಹಿತಿ ತಡ ಎಂಬ ಕಾರಣಕ್ಕೆ ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ವಾಹನ ಕಳವು: ಮಾಹಿತಿ ತಡವಾಗಿ ನೀಡಿದರು ಎಂದು ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್





ತಮ್ಮ ವಾಹನ ಕಳವಾದ ಬಗ್ಗೆ ವಿಮಾ ಕಂಪೆನಿಗೆ ತಡವಾಗಿ ಮಾಹಿತಿ ನೀಡಿದರು ಎಂಬ ಏಕಮಾತ್ರ ಕಾರಣಕ್ಕೆ ವಿಮಾ ಕಂಪೆನಿಗಳು ಪಾಲಿಸಿದಾರರಿಗೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.




ಪ್ರಕರಣ: ಜೈನಾ ಕನ್ಸ್ಟ್ರಕ್ಷನ್ ಕಂಪನಿ ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿ. ಮತ್ತಿತರರು



"ತಮ್ಮ ವಾಹನ ಕಳ್ಳತನವಾದ ತಕ್ಷಣ ದೂರುದಾರರ ಅರ್ಜಿ ಆಧರಿಸಿ ಪೊಲೀಸರು FIR ದಾಖಲಿಸಿದ್ದು, ತನಿಖೆಯ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಿದಾಗ ಹಾಗೂ ವಿಮಾದಾರ ಪರಿಹಾರ ಕೇಳುತ್ತಿರುವುದು ನಿಜವಲ್ಲ ಎಂದು ಕಂಡುಬಾರದೇ ಇರುವಾಗ, ವಾಹನ ಕಳವಿನ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ವಿಮಾ ಕಂಪೆನಿಗಳು ಪರಿಹಾರ ನಿರಾಕರಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.



ಆ ಮೂಲಕ ಮಾಹಿತಿ ವಿಳಂಬದ ಆಧಾರದ ಮೇಲೆ ಮೇಲ್ಮನವಿದಾರರಿಗೆ ಪರಿಹಾರ ನಿರಾಕರಿಸಲು ವಿಮಾ ಕಂಪನಿಗೆ ಅವಕಾಶ ನೀಡಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC) 2016ರಲ್ಲಿ ಹೊರಡಿಸಿದ್ದ ಅಂತಿಮ ಆದೇಶವನ್ನು ನ್ಯಾಯಪೀಠ ವಜಾಗೊಳಿಸಿತು.



Gurshinder Singh Vs Shriram General Insurance Company LT and anothoer (2020 11 SCC 612) ಗುರ್ಶಿಂದರ್ ಸಿಂಗ್ ಮತ್ತು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್‌ ಈ ಆದೇಶ ನೀಡಿತು.



ಸದ್ರಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ (ಗುರುಗಾಂವ್‌ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ) ಹಾಗೂ ರಾಜ್ಯ ಗ್ರಾಹಕರ ನ್ಯಾಯಾಲಯದ ತೀರ್ಪನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ತಿರಸ್ಕರಿಸಿತ್ತು.



ತೀರ್ಪಿನ ಪ್ರತಿ:

ವಾಹನ ಕಳವು: ಮಾಹಿತಿ ತಡವಾಗಿ ನೀಡಿದರು ಎಂದು ವಿಮಾ ಕಂಪೆನಿ ಪರಿಹಾರ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್


Ads on article

Advertise in articles 1

advertising articles 2

Advertise under the article