-->
Fake Certificate- ಖೊಟ್ಟಿ ದಾಖಲೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದೀರಾ..? ಅಂಥವರಿಗೆ ಏನು ಕಾದಿದೆ ಗೊತ್ತೇ..?

Fake Certificate- ಖೊಟ್ಟಿ ದಾಖಲೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದೀರಾ..? ಅಂಥವರಿಗೆ ಏನು ಕಾದಿದೆ ಗೊತ್ತೇ..?

ಖೊಟ್ಟಿ ದಾಖಲೆಯಲ್ಲಿ ಸರ್ಕಾರಿ ನೌಕರಿ ಪಡೆದಿದ್ದೀರಾ..? ಅಂಥವರಿಗೆ ಏನು ಕಾದಿದೆ ಗೊತ್ತೇ..?






ನಕಲಿ ದಾಖಲೆ ಸಲ್ಲಿಸಿದವರು ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರದ ಮೇಲೆ ರ್ಕಾರಿ ಕೆಲಸ ಗಿಟ್ಟಿಸಿಕೊಂಡವರಿಗೆ ಕೆಟ್ಟ ಕಾಲ ಶುರುವಾಗಿದೆ. ಅವರು ಕೆಲಸದಿಂದ ವಜಾಗೊಳ್ಳುವುದಲ್ಲದೆ, ಜೈಲು ಶಿಕ್ಷೆಯೂ ಆಗಲಿದೆ.


ಕೆಲ ವ್ಯಕ್ತಿಗಳು 'ಬೇಡ', 'ಜಂಗಮ' ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಕೆಲಸ ಗಿಟ್ಟಿಸಿರುವ ವಿಚಾರವನ್ನು ಸರ್ಕಾಋ ಗಂಭೀರವಾಗಿ ಪರಿಗಣಿಸಿದೆ. ಈ ರೀತಿ ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಕುರಿತಂತೆ ಮಾಹಿತಿ ಸಂಗ್ರಹಿಸಿ ನೀಡಲು ರಾಜ್ಯ ಸರಕಾರ ಆದೇಶಿಸಿದೆ.


ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹಲವು ಇಲಾಖೆಗಳಲ್ಲಿ ಅನರ್ಹರು 'ಬೇಡ', 'ಜಂಗಮ' ಖೊಟ್ಟಿ ಜಾತಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಈ ಬಗ್ಗೆ ದಿನಾಂಕ 20-04-2022ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯಲ್ಲಿ ಚರ್ಚೆಯಾಗಿರುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.


'ಬೇಡ', 'ಜಂಗಮ' ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ನೀಡಿರುವ ಅಧಿಕಾರಿ, ನೌಕರರನ್ನು ಕೂಡಲೇ ಅಮಾನತುಗೊಳಿಸಲು, ವಾರ್ಷಿಕ ವೇತನ ಬಡ್ತಿಗಳನ್ನು ಕಡಿತಗೊಳಿಸಲು ಹಾಗೂ ಆಂತಹ ಅಧಿಕಾರಿಗಳ ಸೇವಾ ವಹಿಯಲ್ಲಿ ನಮೂದಿಸಲು ಪತ್ರದಲ್ಲಿ ತಿಳಿಸಲಾಗಿದೆ.


2010ರಿಂದ 'ಬೇಡ', 'ಜಂಗಮ' ಜಾತಿಯ ಎಷ್ಟು ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿ ನೀಡುವುದು. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕುಗಳಲ್ಲಿ ಬೇಡ ಜಂಗಮ ಪ್ರಮಾಣ ಪತ್ರಗಳನ್ನು ನೀಡಿದವರು ಹಾಗೂ ಪಡೆದುಕೊಂಡಿರುವವರ ವಿವರಗಳನ್ನು ಮತ್ತು ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಕಳುಹಿಸುವಂತೆ ನಿರ್ದೇಶಿಸಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200