-->
HC Direction on Doctor's prescriptions : ವೈದ್ಯರ ಕೆಟ್ಟ ಕೈಬರಹ: ಭಾರತೀಯ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ನಿಬಂಧನೆ

HC Direction on Doctor's prescriptions : ವೈದ್ಯರ ಕೆಟ್ಟ ಕೈಬರಹ: ಭಾರತೀಯ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ನಿಬಂಧನೆ

ವೈದ್ಯರ ಕೆಟ್ಟ ಕೈಬರಹ: ಭಾರತೀಯ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ನಿಬಂಧನೆ







ವೈದ್ಯರ ಕೆಟ್ಟ ಮತ್ತು ಅರ್ಥವಾಗದ ಕೈಬರಹಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್‌ ಕಟು ಶಬ್ದಗಳಿಂದ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಸ್ಪಷ್ಟವಾಗಿ ಅರ್ಥವಾಗುವಂತೆ ಇಂಗ್ಲಿಷ್‌ನ ಕ್ಯಾಪಿಟಲ್ ಲೆಟರ್‌ನಿಂದ ಕೂಡಿದ ಪ್ರಿಸ್‌ಕ್ರಿಪ್ಷನ್ ನೀಡುವಂತೆ ವೈದ್ಯ ಸಮುದಾಯಕ್ಕೆ ತಾಕೀತು ಮಾಡಿದೆ.



ಈ ಬಗ್ಗೆ ಕೇಂದ್ರ ಸರ್ಕಾರ, ತೆಲಂಗಾಣ ರಾಜ್ಯ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗೆ (MCI)ಗೆ ಭಾರತೀಯ ವೈದ್ಯಕೀಯ ಮಂಡಳಿಯ ನಿಬಂಧನೆಗಳನ್ನು ಜಾರಿಗೊಳಿಸುವ ಬಗ್ಗೆ ತನ್ನ ನಿಲುವನ್ನು ಕೋರಿ ನೋಟಿಸ್‌ಗಳನ್ನು ಜಾರಿ ಮಾಡಿದೆ.



ಭಾರತೀಯ ವೈದ್ಯಕೀಯ ಮಂಡಳಿ (ವೃತ್ತಿಪರ ನಡವಳಿಕೆ, ಶಿಷ್ಟಾಚಾರ ಮತ್ತು ನೈತಿಕತೆ) ನಿಯಮಗಳು, 2002 ರ ನಿಯಮಾವಳಿ 1.5 ರ ಪ್ರಕಾರ, ವೈದ್ಯರ ಅಸ್ಪಷ್ಟ ಕೈಬರಹದಿಂದಾಗಿ ಗೊಂದಲವನ್ನು ತಪ್ಪಿಸಲು ಎಲ್ಲಾ ವೈದ್ಯರು ಕ್ಯಾಪಿಟಲ್ ಲೆಟರ್‌ಗಳಲ್ಲಿ ಪ್ರಿಸ್ಕ್ರಿಪ್ಷನ್‌ಗಳನ್ನು ಬರೆಯುವುದು ಕಡ್ಡಾಯವಾಗಿದೆ. ಜೆನೆರಿಕ್ ಹೆಸರುಗಳೊಂದಿಗೆ ಔಷಧಿಗಳನ್ನು ಸ್ಪಷ್ಟವಾಗಿ ಮತ್ತು ಮೇಲಾಗಿ ದೊಡ್ಡ ಅಕ್ಷರಗಳಲ್ಲಿ ಸೂಚಿಸಿ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.


ಮೂಲ: ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ನ್ಯೂಸ್‌ ಲೆಟರ್

ವೈದ್ಯರ ಕೆಟ್ಟ ಕೈಬರಹ: ಭಾರತೀಯ ವೈದ್ಯಕೀಯ ಮಂಡಳಿಗೆ ಹೈಕೋರ್ಟ್ ನಿಬಂಧನೆ

Ads on article

Advertise in articles 1

advertising articles 2

Advertise under the article