Good news for state Govt Employees: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
Tuesday, April 5, 2022
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
ರಾಜ್ಯ ಸರಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ತಕ್ಷಣದಿಂದ ಜಾರಿ ಮಾಡುವಂತೆ ಹೆಚ್ಚಳ ಮಾಡಿದೆ.
ಶೇಕಡ 25 ರಷ್ಟು ತುಟ್ಟಿಭತ್ಯೆ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸರಕಾರಕ್ಕೆ ವಾರ್ಷಿಕ 4759 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. 2021 ರ ಅಕ್ಟೋಬರ್ ನಲ್ಲಿ ತುಟ್ಟಿಭತ್ಯೆಯನ್ನು ಶೇಕಡ ಮೂರರಷ್ಟು, ಅಂದರೆ 21.5ರಿಂದ 24.5ಕ್ಕೆ ಹೆಚ್ಚಿಸಲಾಗಿತ್ತು.
ಸರಕಾರದ ಈಗಿನ ಕ್ರಮದಿಂದ ಸುಮಾರು 6 ಲಕ್ಷ ಸರಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಹಾಗೂ ನಿಗಮ ಮಂಡಳಿಗಳ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.