-->
Consumer Case- ಕೈಚೀಲ ಮಾರಾಟ ಮಾಡಿದ್ದಕ್ಕೆ ವರ್ತಕ ಮಳಿಗೆಗೆ 35 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ

Consumer Case- ಕೈಚೀಲ ಮಾರಾಟ ಮಾಡಿದ್ದಕ್ಕೆ ವರ್ತಕ ಮಳಿಗೆಗೆ 35 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ

ಕೈಚೀಲ ಮಾರಾಟ ಮಾಡಿದ್ದಕ್ಕೆ ವರ್ತಕ ಮಳಿಗೆಗೆ 35 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ






ತನ್ನ ಗ್ರಾಹಕರಿಗೆ ಉಚಿತವಾಗಿ ಕೈಚೀಲ (ಕ್ಯಾರಿ ಬ್ಯಾಗ್) ನೀಡದೆ, ಆ ಬ್ಯಾಗ್‌ನ್ನು ಸಾಮಾನ್ಯ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು 'ಸೇವಾ ನ್ಯೂನ್ಯತೆ' (Deficiency of Service) ಮತ್ತು 'ಅನ್ಯಾಯದ ವ್ಯಾಪಾರಾಭ್ಯಾಸ'(unlawful trade practice) ಎಂದು ಪರಿಗಣಿಸಲ್ಪಡುತ್ತದೆ ಎಂದು ಗ್ರಾಹಕರ ಆಯೋಗ ತೀರ್ಪು ನೀಡಿದೆ. ಕ್ಯಾರಿ ಬ್ಯಾಗ್‌ಗೆ ರೂ. 20 ಶುಲ್ಕ ವಿಧಿಸಿದ್ದ ʼಎಸ್ಬೆಡಾʼ ಮಳಿಗೆಗೆ ರೂ. 35 ಸಾವಿರ ದಂಡ ವಿಧಿಸಿದೆ.


ಮುಂಬೈ ಬಾಂದ್ರಾ ನಗರದ ಫೀನಿಕ್ಸ್ ಮಾರ್ಕೆಟ್‌ ಸಿಟಿಯ ಎಸ್ಪೆಡಾ ಮಳಿಗೆಯಿಂದ ದೂರುದಾರೆ ರೀಮಾ ಚಾವ್ಲಾ ₹ 1,690 ಮೌಲ್ಯದ ವಸ್ತು ಖರೀದಿಸಿದ್ದರು. ಬಿಲ್ ಪಾವತಿ ವೇಳೆ ಕಂಪೆನಿ ಲಾಂಛನ ಇರುವ ಕ್ಯಾರಿ ಬ್ಯಾಗ್‌ ನೀಡಿ ₹ 20 ಪಡೆಯಲಾಗಿತ್ತು.


ಗ್ರಾಹಕರು ಖರೀದಿಸಿದ ಉತ್ಪನ್ನಗಳನ್ನು ಸಾಗಿಸುವ ಕೈಚೀಲ ನೀಡುವುದು ವಾಡಿಕೆ. ಅದಕ್ಕೆ ಬದಲಾಗಿ ದುಬಾರಿ ದರದ ಕೈಚೀಲ ಮಾರಾಟಕ್ಕೆ ಇಟ್ಟಿರುವುದು ಅನ್ಯಾಯ ಎಂದು ರೀಮಾ ಆಕ್ಷೇಪ ಎತ್ತಿದರು. ಆದರೂ ಮಳಿಗೆ ಮ್ಯಾನೇಜರ್‌ ಒಪ್ಪಲಿಲ್ಲ. ಹಣ ಮರಳಿಸುವಂತೆ ಲೀಗಲ್‌ ನೋಟಿಸ್ ಕೊಟ್ಟರೂ ಮಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ, ಅವರು ಬಾಂದ್ರಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.


ತಮ್ಮ ಗ್ರಾಹಕರಿಗೆ ಉಚಿತವಾಗಿ ಕೈಚೀಲ ನೀಡದೆ ಅದಕ್ಕೆ ಹಣ ಪಡೆದಿರುವುದು ಸೇವಾ ನ್ಯೂನ್ಯತೆ. ಅಲ್ಲದೆ, ಅನ್ಯಾಯದ ವ್ಯಾಪಾರಾಭ್ಯಾಸ ಎಂದು ಆಯೋಗ ತೀರ್ಪು ನೀಡಿತು.


ಕೈಚೀಲಕ್ಕೆ ವಿಧಿಸಿದ್ದ ₹ 20ನ್ನು ಮರು ಪಾವತಿಸಬೇಕು ದಾವೆ ವೆಚ್ಚ ರೂ ₹ 3,000 ಹಾಗೂ ದೂರುದಾರರು ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರ ರೂಪದಲ್ಲಿ ₹ 10,000 ಹಾಗೂ ಗ್ರಾಹಕರ ಕಲ್ಯಾಣ ನಿಧಿಗೆ ₹ 25,000 ಹಣ ನೀಡುವಂತೆ ತೀರ್ಪಿನಲ್ಲಿ ಹೇಳಲಾಗಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200